KARNATAKA NEWS/ ONLINE / Malenadu today/ Jul 21, 2023 SHIVAMOGGA NEWS
ಈ ಸಲದ ವಿಧಾನಸಭಾ ಚುನಾವಣೆಯಲ್ಲಿ ಹೊಸ ಹೊಸ ಅಚ್ಚರಿಯ ಅಭ್ಯರ್ಥಿಗಳು ಆಯ್ಕೆಯಾಗಿದ್ದನ್ನ ಕಂಡೀದ್ದೀರಿ. ಅದರಲ್ಲಿಯು ಪ್ರದೀಪ್ ಈಶ್ವರ್ ನಂತಹ ಅಭ್ಯರ್ಥಿಗಳು ಕಾಂಗ್ರೆಸ್ ಪಾಳಯದ ಬಾಹುಬಲಿಯಾಗಿ ಕಾಣಿಸಿಕೊಳ್ತಿದ್ಧಾರೆ. ಬಿಜೆಪಿಯ ಬಲಿಷ್ಟ ಅಭ್ಯರ್ಥಿಯಾಗಿದ್ದ ಸುಧಾಕರ್ರವರನ್ನ ಅವರ ಪ್ರಾಬಲ್ಯದ ಕ್ಷೇತ್ರದಲ್ಲಿಯೆ ಸೋಲಿಸುವ ನಿಟ್ಟಿನಲ್ಲಿ ಪ್ರದೀಪ್ ಈಶ್ವರ್ರವರನ್ನ ಕಣಕ್ಕಿಳಿಸಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ರವರದ್ದು ಚಾಣಾಕ್ಯ ತಂತ್ರ ಯಶಸ್ವಿಯಾಗಿತ್ತು. ಇದೀಗ ವಿಧಾನಪರಿಷತ್ ಚುನಾವಣೆಯಲ್ಲಿಯು ಅವರು ಮತ್ತೊಂದು ಅಸ್ತ್ರವನ್ನು ಚುನಾವಣಾ ಅಖಾಡಕ್ಕೆ ತರುವ ತಯಾರಿಯಲ್ಲಿದ್ದಾರೆ. ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಸ್ಪರ್ದಿಸಲು ಅರ್ಜಿ ಸಲ್ಲಿಸಿರುವ ಕೆಪಿಸಿಸಿ ಸಾಮಾಜಿಕ ಜಾಲತಾಣಗಳ ಸಂಯೋಜಕ ನಂಜೇಶ್ ಬೆಣ್ಣೂರುರವರೇ ಡಿಕೆಶಿಯವರ ಆ ಹೊಸ ಅಸ್ತ್ರ.
ಯಾರಿವರು?
ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಸ್ಪರ್ದಿಸಲು ನಂಜೇಶ್ ಬೆಣ್ಣೂರು ಕೆಪಿಸಿಸಿಗೆ ಅರ್ಜಿ ಸಲ್ಲಿಸಿದ್ದಾರೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಸಾಮಾಜಿಕ ಜಾಲತಾಣ ವಿಭಾಗದಲ್ಲಿ ಕಾಂಗ್ರೆಸ್ ಗೆಲುವಿಗೆ ಪ್ರಮುಖ ಪಾತ್ರ ವಹಿಸಿತ್ತು. ಅದರ ಹಿಂದಿದ್ದವರ ಪೈಕಿ ನಂಜೇಶ್ ಬೆಣ್ಣೂರುರವರು ಪ್ರಮುಖರು. ಸದ್ಯ ಇವರು ನೈರುತ್ಯ ಶಿಕ್ಷಕರ ಕ್ಷೇತ್ರದ ವಿಧಾನ ಪರಿಷತ್ ಸದಸ್ಯ ಸ್ಥಾನಕ್ಕೆ ಕಾಂಗ್ರೆಸ್‌ನ ಪ್ರಬಲ ಆಕಾಂಕ್ಷಿ ಯಾಗಿದ್ಧಾರೆ. ಭಾರತೀಯ ರಾಷ್ಟ್ರೀಯ ಕಾಂಗ್ರೆಸ್‌ನಿಂದ ಅಧಿಕೃತ ಅಭ್ಯರ್ಥಿಯಾಗಲು ಕೋರಿ ಅರ್ಜಿ ಸಲ್ಲಿಸಿದ್ದಾರೆ. ಚಿಕ್ಕಮಗಳೂರು, ಕೊಡಗು, ದಕ್ಷಿಣಕನ್ನಡ, ಶಿವಮೊಗ್ಗ, ಉಡುಪಿ, ಹೊನ್ನಾಳಿ ಮತ್ತು ಚೆನ್ನಗಿರಿ ಕ್ಷೇತ್ರಗಳನ್ನು ಒಳಗೊಂಡ ಈ ಶಿಕ್ಷಕರ ವಲಯದಲ್ಲಿ ಮುಂದಿನ ವರ್ಷ ಚುನಾವಣೆ ನಡೆಯಲಿದ್ದು ಇವರು ಕೂಡ ಶಿಕ್ಷಕ ವೃತ್ತಿಯಿಂದ ಬಂದವಾರಾಗಿದ್ದು ನಗರದ ಆದಿಚುಂಚನಗಿರಿ ಕಾಲೇಜಿನಲ್ಲಿ ಉಪನ್ಯಾಸಕರಾಗಿದ್ದು ಶಿಕ್ಷಕರ ಸಮಸ್ಯೆಗಳ ಬಗ್ಗೆ ಧ್ವನಿ ಎತ್ತುವ ವಿಶ್ವಾಸ ವ್ಯಕ್ತಪಡಿಸ್ತಿದ್ಧಾರೆ.
ಆಮ್ ಆದ್ಮಿ ಪಕ್ಷದಿಂದ ಆರಂಭ
ನಂಜೇಶ್ ಬೆಣ್ಣೂರವರು ಆಮ್ ಆದ್ಮಿ ಪಕ್ಷದ ಅಡಿಯಲ್ಲಿ ತಮ್ಮನ್ನ ಮೊದಲು ಗುರುತಿಸಿಕೊಂಡವರು. ಹೊಸ ರಾಜಕೀಯ ಪಕ್ಷವನ್ನು ತಳಮಟ್ಟದಲ್ಲಿ ಸಂಘಟನೆ ಮಾಡುವುದು ಹೇಗೆ ಎಂಬುದನ್ನ ಅರಿತಿದ್ದ ನಂಜೇಶ್ ರವರು, ಕಾಂಗ್ರೆಸ್ ಪಕ್ಷ ಸೇರಿದ ಬಳಿಕ ಯುವಕರನ್ನು ಸಂಘಟಿಸುವ ಕಾರ್ಯದಲ್ಲಿ ತೊಡಗಿಸಿಕೊಂಡಿದ್ಧಾರೆ.
ಪ್ರಾಧ್ಯಾಪಕರಾಗಿರುವುದರಿಂದ ಅವರ ವಿದಾರ್ಥಿ ಸಮೂಹದಿಂದಲೂ ಸಾವಿರಾರು ವಿದ್ಯಾರ್ಥಿಗಳು ಇವರನ್ನು ಬೆಂಬಲಿಸಲು ಸಿದ್ಧರಿದ್ದಾರೆ. ಅನೇಕ ಸಮಾಜಮುಖಿ ಕಾರ್ಯಗಳಲ್ಲಿ ತಮ್ಮನ್ನು ತೊಡಗಿಸಿಕೊಂಡು ತೆರೆಮರೆಯಲ್ಲಿದ್ದ ಇವರನ್ನ ಗುರಿತಿಸಿದ್ದು ಡಿ.ಕೆ ಶಿವಕುಮಾರ್ರವರು, ಈ ಹಿಂದೆ ನಡೆದಿದ್ದ ಪ್ರಜಾಧ್ವನಿ ಯಾತ್ರೆಯ ಕಾರ್ಯಕ್ರಮದಲ್ಲಿ ನಂಜೇಶ್ ಬೆಣ್ಣೂರರವರನ್ನು ಕಾಂಗ್ರೆಸ್ ಪಕ್ಷಕ್ಕೆ ಕೆಪಿಸಿಸಿ ಅಧ್ಯಕ್ಷರು ಬರಮಾಡಿಕೊಂಡರು. ನಂಜೇಶ್ ಬೆಣ್ಣೂರರವರ ಸಂಘಟನಾ ಚತುರತೆಯ ಬಗ್ಗೆ ತಿಳಿದಿದ್ದ ಕೆಪಿಸಿಸಿ ಅಧ್ಯಕ್ಷರು ಯುವ ಸಮುದಾಯವನ್ನು ಸೆಳೆಯುವಂತೆ ಸೂಚಿಸಿದ್ರು. ಅದರಂತೆ, ಫೈರ್ ಬ್ರಾಂಡ್ ಆಗಿದ್ದ ನಂಜೇಶ್ ಬೆಣ್ಣೂರು ಸಾಮಾಜಿಕ ಜಾಲತಾಣಗಳಲ್ಲಿ ಕಾಂಗ್ರೆಸ್ ಪಕ್ಷದ ಪರವಾಗಿ ಸಕ್ರಿಯವಾಗಿ ಕಾರ್ಯ ನಿರ್ವಹಿಸುತ್ತಿದ್ಧಾರೆ.
ಸಾವಿರಾರು ಮಂದಿ ಹಿಂಬಾಲಕರನ್ನು ಹೊಂದಿರುವ ಇವರು ಬಿಜೆಪಿ ಸರ್ಕಾರ ದಲ್ಲಿ ನಡೆದ ಕೆಲವು ಹಗರಣಗಳ ವಿರುದ್ದ ಪಾದಯಾತ್ರೆ ಹಾಗೂ ರ್ಯಾಲಿಗಳನ್ನು ಹಮ್ಮಿಕೊಂಡು ಯಶಸ್ವಿ ಹೋರಾಟವನ್ನು ಕೈಗೊಂಡು ಪಕ್ಷದ ಗಮನ ಸೆಳೆದಿದ್ದಾರೆ. ಸ್ವ-ವರ್ಚಸಿನಲ್ಲಿ ನೂರಾರು ಜನಗಳನ್ನು ಸೇರಿಸಿ ಹೋರಾಟದ ನಾಂದಿಯಾಡಿದ್ದು ಇವರ ಟ್ರಂಪ್ ಕಾರ್ಡ್ ಸಾಧನೆ.
ಸಾಧಕರು!
ನಂಜೇಶ್ ಬೆಣ್ಣೂರು ರವರು ಮಾಹಿತಿ ವಿಜ್ಞಾನ ಮತ್ತು ಇಂಜಿನಿಯರಿಂಗ್‌ನಲ್ಲಿ ಬಿ ಇ ಪದವಿ ಪಡೆದವರು. ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಿಂದ ಕಂಪ್ಯೂಟರ್ ವಿಜ್ಞಾನ ಮತ್ತು ಇಂಜಿನಿಯರಿಂಗ್ ವಿಭಾಗದಲ್ಲಿ MTech ಪದವಿ ಪಡೆದು ಈಗ PhD ಯನ್ನು ಮಾಡುತ್ತಾ ಆದಿಚುಂಚನಗಿರಿ ತಾಂತ್ರಿಕ ಮುಹಾವಿದ್ಯಾಲಯದಲ್ಲಿ ಸಹಾಯಕ ಪ್ರಾದ್ಯಾಪಕನಾಗಿ ಸೇವೆಸಲ್ಲಿಸುತ್ತಿದ್ದಾರೆ. ಇಲ್ಲಿಯವರೆಗೆ 26 ಸಂಶೋಧನಾ ಪ್ರಬಂಧಗಳನ್ನು ಅಂತರರಾಷ್ಟ್ರೀಯ ಸಮ್ಮೇಳನಗಳಲ್ಲಿ ಮತ್ತು ಪ್ರತಿಷ್ಟಿತ ಅಂತರರಾಷ್ಟ್ರೀಯ ಜರ್ನಲ್ ಗಳಲ್ಲಿ ಪ್ರಕಟಿಸಿದ್ದು ಹಾಗೂ ವಿಮರ್ಶಕನಾಗಿ ಸೇವೆಸಲ್ಲಿಸಿದ್ದಾರೆ. ಇಮೇಜ್ ಪ್ರೋಸೆಸಿಂಗ್‌ಗೆ ಸಂಬಂದಿಸಿದಂತೆ ಭಾರತೀಯ ಸರ್ಕಾರದ ಅಡಿಯಲ್ಲಿ 3 ಪೇಟೆಂಟ್‌ಗಳನ್ನು ಪಡೆದಿದ್ದು ಮತ್ತು ಒಂದು ಪೇಟೆಂಟ್ ಅನ್ನು 2020 ರಲ್ಲಿ ಆಸ್ಟ್ರೇಲಿಯಾ ಸರ್ಕಾರದಿಂದ ಪಡೆದಿದ್ದಾರೆ. ಇಲ್ಲಿಯವರೆಗೆ 5 ಪಠ್ಯ ಪುಸ್ತಕಗಳನ್ನು ಪ್ರಕಟಿಸಿದ್ದು ಅದರಲ್ಲಿ C Programming ಪುಸ್ತಕವು ಎಂ.ಎಸ್. ರಾಮಯ್ಯ ವಿಶ್ವವಿದ್ಯಾಲಯ, ಎಂ.ಸಿ.ಎ ವಿಭಾಗಕ್ಕೆ ಮತ್ತು ತಮಿಳುನಾಡಿನ ಕರ್ಷಗಮ್ ವಿಶ್ವವಿದ್ಯಾಲಯಗಳಲ್ಲಿ ಪಠ್ಯ ಪುಸ್ತಕವನ್ನಾಗಿ ನಿಗದಿಪಡಿಸಿದೆ. 2014ರಲ್ಲಿ ಕರ್ನಾಟಕ ಸರ್ಕಾರದಿಂದ VGST ಅಡಿ Cluster Based Parallel Computing 20 ಲಕ್ಷ ಅನುದಾನವನ್ನು ಡಾ|| ಸಂಪತ್ ರವರ ಸಹ ಭಾಗಿತ್ವದಲ್ಲಿ ಪಡೆದಿದ್ದಾರೆ 2013 ಮತ್ತು 2016 ರಲ್ಲಿ ಅನುಕ್ರಮವಾಗಿ ಇಮೇಜ್ ಪ್ರೋಸೆಸಿಂಗ್ ಕ್ಷೇತ್ರದಲ್ಲಿನ 2 ಯೋಜನೆಗಳಿಗೆ VGST ಯಿಂದ ಅನುದಾನ ದೊರಕಿರುತ್ತದೆ. 2013 ರಲ್ಲಿ CSI ಮೀಟ್ ನಲ್ಲಿ ಸೆಮಿನಾರ್ ವಿಜೇತ ಪ್ರಶಸ್ತಿಯನ್ನು ಪಡೆದಿದ್ದಾರೆ. 2018ರ ಅಂತರರಾಷ್ಟ್ರೀಯ ಪ್ರಶಸ್ತಿ “ಶೈಕ್ಷಣಿಕ ಪ್ರದರ್ಶನ ಮತ್ತು ಸಂಶೋಧನಾ ಚಟುವಟಿಕೆಗಳು” IJARBEST ಸೈಂಟಿಫಿಕ್ ಪಬ್ಲಿಷರ್ಸ್ ಏಷ್ಯಾ ಪೆಸಿಫಿಕ್ ಅವರಿಂದ ಪಡೆದಿದ್ದು ಚಿಕ್ಕಮಗಳೂರಿನಲ್ಲಿ ಶಿಕ್ಷಣಕ್ಷೇತ್ರಕ್ಕೆ ಸಂಬಂದಿಸಿದಂತೆ ಹಲವಾರು Software and Publication platform ಗಳನ್ನು ಸಿದ್ದಪಡಿಸುವ ಕಂಪನಿಯನ್ನು ಸ್ಥಾಪಿಸಿ ಸುಮಾರು 40 ಮಂದಿ ಇವರ ಸ್ವಂತ ಕಂಪನಿಯಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ.

ಧರ್ಮ ಆಧರಿತ ರಾಜಕಾರಣವನ್ನ ವಿರೋಧಿಸುವ ನಂಜೇಶ್ ಬೆಣ್ಣೂರು ಶಿಕ್ಷಣ, ಆರೋಗ್ಯ, ಅಭಿವೃದ್ಧಿ ಬಗ್ಗೆ ಹೆಚ್ಚಿನ ಕಾಳಜಿ ಹೊಂದಿದ್ದಾರೆ. ಯುವಶಕ್ತಿಯನ್ನ ಬೆಂಬಲಿಸಿದರೇ ಅಭಿವೃದ್ಧಿ ತಾನಾಗಿಯೇ ಸಾಕಾರಗೊಳ್ಳಲಿದೆ ಎಂಬುದು ಇವರ ನಂಬಿಕೆ. ಸ್ವತಃ ಶಿಕ್ಷಕರು ಆಗಿರುವ ನಂಜೇಶ್ ಬೆಣ್ಣೂರುರವರು ಯುವಶಕ್ತಿಗೆ ಸ್ಪೂರ್ತಿ ತುಂಬುವ ಕೆಲಸ ಮಾಡುತ್ತಾ ಬಂದಿದ್ದು, ನೈರುತ್ಯ ಶಿಕ್ಷಕರ ಕ್ಷೇತ್ರದಿಂದ ಪರಿಷತ್ ಸ್ಥಾನಕ್ಕೆ ಆಯ್ಕೆಯಾಗಲು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕಾಗಿ ಜನಮನದ ಬೆಂಬಲ ಕೋರುತ್ತಿದ್ದಾರೆ.
ಶಿವಮೊಗ್ಗ ಜಿಲ್ಲೆ ಚರ್ಚ್ ಫಾದರ್ವೊಬ್ಬರ ವಿರುದ್ಧ ದಾಖಲಾಯ್ತು ಫೋಕ್ಸೋ ಕೇಸ್!
ಶಿವಮೊಗ್ಗದ ಸ್ಪಾ ಮೇಲಿನ ರೇಡ್ಗಳ ಹಿಂದೆ ಪ್ರೀತಿಸಿ ಮದುವೆಯಾದ ನವ ಜೋಡಿಯ ಕಣ್ಣೀರಿನ ಕಥೆ ! ಕೇಳದೇ ನಿಮಗೀಗಾ?