ಯಶವಂತಪುರ-ಶಿವಮೊಗ್ಗ ರೈಲಿಗೆ ಸಿಲುಕಿಗೆ ತುಮಕೂರು ಮೂಲದ ಟ್ರೈನಿ ಪೊಲೀಸ್ ಕಾಲು ಕಟ್! ಶಿವಮೊಗ್ಗದ ಮಹಾದೇವಿ ಟಾಕೀಸ್ ಬಳಿಯ ನಿಲ್ದಾಣದಲ್ಲಿ ಘಟನೆ

KARNATAKA NEWS/ ONLINE / Malenadu today/ Jul 8, 2023 SHIVAMOGGA NEWS  

ಯಶವಂತಪುರ – ಶಿವಮೊಗ್ಗ (16581/Yesvantpur – Shivamogga Town Express)  ರೈಲಿಗೆ ಸಿಲುಕಿ ತರಬೇತಿಯಲ್ಲಿರುವ ಪೊಲೀಸ್ ಸಿಬ್ಬಂದಿಯ ಕಾಲು ತುಂಡಾಗಿದೆ. ಈ ಘಟನೆ ಶಿವಮೊಗ್ಗ ನಗರದ ಮಹಾದೇವಿ ಟಾಕೀಸ್ ಬಳಿ ಇರುವ ರೈಲ್ವೆ ನಿಲ್ದಾಣದಲ್ಲಿ ಸಂಭವಿಸಿದೆ. ಇವತ್ತು ಮಧ್ಯಾಹ್ನ ನಡೆದ ಘಟನೆಯಲ್ಲಿ ನಾಗರಾಜ್​ ಎಂಬವರ ಕಾಲು ಕಟ್ ಆಗಿದ್ದು, ಅವರನ್ನ ಶಿವಮೊಗ್ಗದ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದೆ. 

ಘಟನೆ ನಡೆದಿದ್ದೇಗೆ?

ಯಶವಂತಪುರದಿಂದ ಬರುತ್ತಿದ್ದ ಟ್ರೈನ್​ನಲ್ಲಿ ನಾಗರಾಜ್​ ರವರು ಆಗಮನಿಸಿದ್ದಾರೆ. ನಿಲ್ದಾಣದ ಬಳಿ ಅವರು ಇಳಿಯುವಾಗ ಎಡವಿ ಟ್ರೈನ್​ಗೆ ಕಾಲು ಸಿಲುಕಿಕೊಂಡಿದೆ. ತಕ್ಷಣವೇ ಅಲ್ಲಿದ್ದವರು ಬಂದು ನಾಗರಾಜ್​ರನ್ನ ರಕ್ಷಿಸಿದ್ಧಾರೆ. ಮೂಲತಃ ತುಮಕೂರಿನ ಕುಣಿಗಲ್ ಮೂಲದವರಾದ ನಾಗರಾಜ್​, ಕಡೂರಿನಲ್ಲಿರುವ ಪೊಲೀಸ್​ ತರಭೇತಿ ಸಂಸ್ಥೆಯಲ್ಲಿ ತರಭೇತಿ ಪಡೆಯುತ್ತಿದ್ದರು ಎಂಬ ಮಾಹಿತಿ ತಿಳಿದು ಬಂದಿದೆ.  


ಮಳೆಗಾಲದಲ್ಲಿ ಅಡಿಕೆ ಲಾಟರಿ ! 82 ಸಾವಿರದ ಗಡಿದಾಟಿದ ಸರಕು! ಎಷ್ಟಿದೆ ರೇಟು!?

ಶಿವಮೊಗ್ಗ: ಅಡಿಕೆ ಮಾರುಕಟ್ಟೆಯಲ್ಲಿ ಅಡಿಕೆಗೆ ಉತ್ತಮ ದರ ಲಭ್ಯವಾಗುತ್ತಿದೆ. ಕಾದಿದ್ದು ಅಡಿಕೆ ಮಾರುವವರಿಗೆ ಭರ್ಜರಿ ಲಾಭ ತಂದುಕೊಡ್ತಿದೆ. ಶುಕ್ರವಾರದ ಮಾರುಕಟ್ಟೆ ದರದಲ್ಲಿ ಗರಿಷ್ಠ ₹82,496ಕ್ಕೆ ಅಡಿಕೆ ಮಾರಾಟವಾಗಿದೆ. ಕನಿಷ್ಠ ಅಂದರೆ ₹50,599 ದರ ದೊರೆತಿದೆ. ಸರಕು ಅಡಿಕೆಗೆ ಈ ದರ ದೊರಕ್ಕಿದ್ದು,  ರಾಶಿ ಹಾಗೂ ಬೆಟ್ಟೆಗೆ ಕ್ವಿಂಟಾಲ್​ಗೆ ಅರ್ಧಲಕ್ಷ ಸಿಗುತ್ತಿದೆ. ಕಳೆದ ತಿಂಗಳು  ಕ್ವಿಂಟಲ್‌ಗೆ ₹80 ಸಾವಿರದ ಆಸುಪಾಸಿನಲ್ಲಿತ್ತು. ಆನಂತರ ಜುಲೈ ಆರಂಭದಲ್ಲಿ ಅಡಿಕೆ ದರ  ಕ್ವಿಂಟಾಲ್​  ₹76,000  ಆಸುಪಾಸು  ತಲುಪಿತ್ತು . ಇದೀಗ ಮತ್ತೆ ಅಡಿಕೆ ದರದಲ್ಲಿ ಮತ್ತೆ ಏರಿಕೆ ಕಂಡಿದೆ. 

ಯಾವ್ಯಾವುದಕ್ಕೆ ಎಷ್ಟೆಷ್ಟಿದೆ ರೇಟು? 

ಸರಕು ಕ್ವಿಂಟಾಲ್​ಗೆ ಗರಿಷ್ಟ ₹82496 ಕನಿಷ್ಟ ₹50599

ಬೆಟ್ಟೆ ಅಡಿಕೆಕ್ವಿಂಟಲ್‌ಗೆ ಗರಿಷ್ಠ ₹55382, ಕನಿಷ್ಠ ₹45000 

ರಾಶಿ ಅಡಿಕೆ ಗರಿಷ್ಠ ₹56299 ಹಾಗೂ ಕನಿಷ್ಠ ₹39201

ಗೊರಬಲು ಗರಿಷ್ಠ ₹42,399 ಹಾಗೂ ಕನಿಷ್ಠ ₹18,000 

Shivamogga Malenadu Today

 

 

Leave a Comment