SHIVAMOGGA NEWS TODAY

ಭದ್ರಾವತಿಯಲ್ಲಿ ಬಾಲ್ಯ ವಿವಾಹಕ್ಕೆ ಬ್ರೇಕ್​! ತೀರ್ಥಹಳ್ಳಿಯಲ್ಲಿ ಮತ್ತೊಂದು ವಿಡಿಯೋ ವೈರಲ್! ಶಿವಮೊಗ್ಗದಲ್ಲಿ ಅಶ್ಲೀಲ ಚಿತ್ರ ತೆಗೆದು ಬ್ಲ್ಯಾಕ್​ಮೇಲ್! ಮಲವಗೊಪ್ಪದಲ್ಲಿ ಆಕ್ಸಿಡೆಂಟ್! TODAY@NEWS

Malenadu Today ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

KARNATAKA NEWS/ ONLINE / Malenadu today/ Jul 5, 2023 SHIVAMOGGA NEWS 

ಮಲವಗೊಪ್ಪದಲ್ಲಿ ಬೈಕ್​ಗಳ ನಡುವೆ ಡಿಕ್ಕಿ

ಶಿವಮೊಗ್ಗ ನಗರದ  ಮಲವಗೊಪ್ಪ ದಲ್ಲಿ ಎರಡು ಬೈಕ್​ಗಳ ನಡುವೆ ಡಿಕ್ಕಿಯಾಗಿ ಅಪಘಾತವಾದ ಬಗ್ಗೆ ವರದಿಯಾಗಿದೆ. ಘಟನೆಯಲ್ಲಿ ಬೈಕ್​ ಸವಾರರು ಗಾಯಗೊಂಡಿದ್ದು, ಅವರನ್ನ ಸ್ಥಳೀಯ ಆಸ್ಪತ್ರೆಗೆ ಕಳುಹಿಸಿ ಚಿಕಿತ್ಸೆ ಒದಗಿಸಲಾಗಿದೆ. ಘಟನೆ ಬಗ್ಗೆ ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರು ಬೈಕ್​ಗಳನ್ನು ವಶಕ್ಕೆ ಪಡೆದು, ಪ್ರಕರಣ ದಾಖಲಿಸಿಕೊಂಡಿದ್ಧಾರೆ. 

 Malenadu Today Shivamogga

ಭದ್ರಾವತಿಯಲ್ಲಿ ವೀಲ್ಹೀಂಗ್ ಹಾವಳಿ

ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ನ್ಯೂಟೌನ್​, ಪೊಲೀಸ್ ಸ್ಟೇಷನ್​ ವ್ಯಾಪ್ತಿಯಲ್ಲಿ ಯಮಹಾ ಗಾಡಿಯಲ್ಲಿ ವೀಲ್ಹೀಂಗ್ ಮಾಡುತ್ತಿರುವ ಬಗ್ಗೆ ಪೊಲೀಸರಿಗೆ ದೂರು ಸಲ್ಲಿಸಿಲಾಗಿದೆ. ಈ ಸಂಬಂಧ ಸ್ಥಳಕ್ಕೆ ತೆರಳಿದ ಪೊಲೀಸರು ವೀಲ್ಹೀಂಗ್ ಮಾಡುತ್ತಿದ್ದ ಬೈಕ್​ನ್ನ ಸ್ಟೇಷನ್​ಗೆ ತೆಗೆದುಕೊಂಡು ಹೋಗಿದ್ದಾರೆ. ಈ ಬಗ್ಗೆ ಇನ್ನಷ್ಟು ಆರೋಪಿಸಿರುವ ಸ್ಥಳೀಯ ನಿವಾಸಿಗಳು ಭದ್ರಾವತಿಯಲ್ಲಿ ಪಬ್ಲಿಕ್ ನ್ಯೂಸೆನ್ಸ್​ ಸಂಬಂಧದ ಕಂಪ್ಲೆಂಟ್​ಗಳ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ದೂರಿದ್ದಾರೆ. 

Malenadu Today Shivamogga

ಬಾಲ್ಯವಿವಾಹಕ್ಕೆ ಭದ್ರಾವತಿ ಪೊಲೀಸರ ಬ್ರೆಕ್

ಶಿವಮೊಗ್ಗ ಜಿಲ್ಲೆ  ಭದ್ರಾವತಿ ಪೊಲೀಸರು ಹಾಗೂ  ಮಕ್ಕಳ ಕಲ್ಯಾಣ ಸಮಿತಿ ಸದಸ್ಯರು ದೇವಸ್ಥಾನವೊಂದರಲ್ಲಿ ನಡೆದ ಬಾಲ್ಯ ವಿವಾಹವನ್ನು ತಡೆದಿದ್ದಾರೆ. ತಮಿಳುನಾಡು ಮೂಲದವರು ಅಪ್ರಾಪ್ತ ವಯಸ್ಸಿನ ಬಾಲಕಿಗೆ ಮದುವೆ ಮಾಡಲು ತಯಾರಿ ಮಾಡಿದ್ದರು. ಅಲ್ಲದೆ ಬಂದ್ ಆಗಿದ್ದ ದೇವಾಲಯದ ಮುಂದೆ ಹಾರ ಬದಲಾಯಿಸಿದ್ದರು. ಅಷ್ಟೊತ್ತಿಗೆ ವಿಷಯ ತಿಳಿದು ಸ್ಥಳಕ್ಕೆ ಪೊಲೀಸರು ದಾವಿಸಿದ್ಧಾರೆ. ಅಲ್ಲದೆ ಬಾಲಕಿಯನ್ನು ಸುರಬಿ ಕೇಂದ್ರಕ್ಕೆ ರವಾನಿಸಿ, 8 ಮಂದಿಯ ವಿರುದ್ದ Prohibition of Child Marriage Act 2006 (U/s-9,10 ಅಡಿಯಲ್ಲಿ ಕೇಸ್ ದಾಖಲಿಸಿದ್ಧಾರೆ. 

ವಿಡಿಯೋ ತೆಗೆದು ಬೆದರಿಕೆ ಆರೋಪ

ಶಿವಮೊಗ್ಗದ ಕೋಟೆ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿ ಯುವತಿ ಉಳಿದುಕೊಂಡಿದ್ದ ಮನೆಯವರು, ಆಕೆಯ ನಗ್ನ ವಿಡಿಯೋವನ್ನು ತೆಗೆದು ಬೆದರಿಕೆ ಹಾಕಿರುವ ಬಗ್ಗೆ ಕೋಟೆ ಪೊಲೀಸ್ ಸ್ಟೇಷನ್​ನಲ್ಲಿ ದೂರು ದಾಖಲಾಗಿದೆ. ಅಲ್ಲದೆ ಈ ಸಂಬಂಧ ಪ್ರಶ್ನಿಸಿ ವಿಚಾರಿಸಿದ್ದಕ್ಕೆ ಯುವತಿ ಕಡೆಯವರ ಮೇಲೂ ಹಲ್ಲೆ ಮಾಡಲಾಗಿದೆ ಎಂದು ಆರೋಪಿಸಲಾಗಿದೆ. ಸದ್ಯ ಪ್ರಕರಣ ಸಂಬಂಧ ವಿಚಾರಣೆ ನಡೆಯುತ್ತಿದೆ. 

 ತೀರ್ಥಹಳ್ಳಿಯಲ್ಲಿ ಮತ್ತೊಂದು ವಿಡಿಯೋ ವೈರಲ್​

ತೀರ್ಥಹಳ್ಳಿ ತಾಲ್ಲೂಕಿನಲ್ಲಿ ಇತ್ತೀಚೆಗಷ್ಟೆ ಸಂಘಟನೆಯ ಸದಸ್ಯನೊಬ್ಬನದ್ದು ಎನ್ನಲಾದ ವಿಡಿಯೋ ಎಲ್ಲೆಡೆ ಹರಿದಾಡಿತ್ತಷ್ಟೆ ಅಲ್ಲದೆ, ಆ ಸಂಬಂಧ ದೂರು ಸಹ ದಾಖಲಾಗಿ, ಆರೋಪಿಯನ್ನು ಬಂಧಿಸಲಾಗಿತ್ತು. ಇದೀಗ ಮತ್ತೆ ಅಂತಹುದ್ದೆ ವಿಡಿಯೋವೊಂದು ತೀರ್ಥಹಳ್ಳಿಯಲ್ಲಿ ಹರಿದಾಡ್ತಿದೆ ಎಂಬ ಮಾತುಗಳು ತೀರ್ಥಹಳ್ಳಿಯಲ್ಲಿ ಕೇಳಿಬರುತ್ತಿದೆ. ಆದರೆ ಈ ಬಗ್ಗೆ ಇದುವರೆಗೂ ಅಧಿಕೃತ ಚಿತ್ರಣ ಸ್ಪಷ್ಟವಾಗಿಲ್ಲ.  ವಿಡಿಯೋದಲ್ಲಿರುವವರು ಯಾರು ? ಅದರ ಹಿನ್ನಲೆ ಏನು ಎಂಬಿತ್ಯಾದಿ ಮಾಹಿತಿಗಳು ಇನ್ನಷ್ಟೆ ಸಿಗಬೇಕಿದೆ.  


 

 

todays news worldwide, todays news of world, foreign news latest, international news trending, world news headlines of today, latest happenings in the world, today’s news headlines of world, today world news headlines, today’s international breaking news in english, international breaking news in english, today’s breaking news worldwide, world breaking news latest world news, news today international headlines,

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
Malenadu Today