KARNATAKA NEWS/ ONLINE / Malenadu today/ Jul 3, 2023 SHIVAMOGGA NEWS
ಶಿವಮೊಗ್ಗ ಪೊಲೀಸರು ಮತ್ತೊಬ್ಬ ರೌಡಿಶೀಟರ್ನ ಕಾಲಿಗೆ ಗುಂಡು ಹಾರಿಸಿ ಹಿಡಿದಿದ್ದಾರೆ. ಸೈಫು ಎಂಬಾತನನ್ನು ಹಿಡಿಯಲು ಹೋಗಿದ್ದ ವೇಳೆ ಆತ ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾನೆ. ಈ ವೇಳೆ ಪೊಲೀಸ್ ಸಿಬ್ಬಂದಿ ನಾಗರಾಜ್ ಎಂಬವರು ಗಾಯಗೊಂಡಿದ್ದಾರೆ.
ಸಿಬ್ಬಂದಿಯ ರಕ್ಷಣೆಗಾಗಿ ಜಯನಗರ ಠಾಣೆ ಪಿಎಸ್ಐ ನವೀನ್ ರಕ್ಷಣಾತ್ಮಕ ಕ್ರಮವಾಗಿ ಆರೋಪಿ ಕಾಲಿಗೆ ಗುಂಡು ಹಾರಿಸಿದ್ದಾರೆ. ಸದ್ಯ ಆರೋಪಿ ಸೆರೆಸಿಕ್ಕಿದ್ದಾನೆ. ಈತ ಜೈಲಿನಲ್ಲಿರುವ ಮಾರ್ಕೆಟ್ ಫೌಜನ್ ಗ್ಯಾಂಗ್ನ ಸದಸ್ಯನಾಗಿದ್ದು ಈತನ ವಿರುದ್ಧ 18 ಕೇಸ್ಗಳಿವೆ. ಕೊಲೆಯತ್ನ ಪ್ರಕರಣದಲ್ಲಿ ತಲೆ ತಪ್ಪಿಸಿಕೊಂಡು ತಿರುಗಾಡುತ್ತಿದ್ದ ಈತನನ್ನು ಹಿಡಿಯಲು ಜಯನಗರ ಠಾಣೆ ಪೊಲೀಸರು ತೆರಳಿದ್ದರು.
ಶಿವಮೊಗ್ಗಕ್ಕೆ ಅಚ್ಚರಿ ನೀಡಿದ ಮಾಜಿ ಸಿಎಂ ಕುಮಾರಸ್ವಾಮಿ! ಶಾರದಾ ಪೂರ್ಯನಾಯ್ಕ್ರಿಗೆ ಜೆಡಿಎಸ್ ನಲ್ಲಿ ಸಿಕ್ತು ಮಹತ್ವದ ಸ್ಥಾನ
ಶಿವಮೊಗ್ಗ ಗ್ರಾಮಾಂತರ ಕ್ಷೇತ್ರದ ಜೆಡಿಎಸ್ ಶಾಸಕಿ ಶಾರದಾ ಪೂರ್ಯಾನಾಯಕ್ ಗೆ ಪಕ್ಷದಲ್ಲಿ ಅಚ್ಚರಿಯ ಸ್ಥಾನಮಾನವೊಂದು ಲಭ್ಯವಾಗಿದೆ. ಅವರನ್ನ ಜೆಡಿಎಸ್ ಶಾಸಕಾಂಗ ಪಕ್ಷದ ಉಪ ನಾಯಕಿಯಾಗಿ ಆಯ್ಕೆ ಮಾಡಲಾಗಿದೆ. ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಹೆಚ್.ಡಿ.ಕುಮಾರಸ್ವಾಮಿ ಕಾರ್ಯನಿರ್ವಹಿಸಲಿದ್ದು, ಸದನದಲ್ಲಿ ಉಪ ನಾಯಕಿಯಾಗಿ ಶಾರದಾ ಪೂರ್ಯ ನಾಯ್ಕ್ ಕೆಲಸ ಮಾಡಲಿದ್ಧಾರೆ. .ಹಿರಿಯ ನಾಯಕರ ಸಲಹೆಗಳನ್ನು ಪರಿಗಣಿಸಿ, ಜೆಡಿಎಸ್ ಮೊದಲ ಬಾರಿಗೆ ಮಹಿಳೆಯೊಬ್ಬರು ಉಪನಾಯಕಿ ಸ್ಥಾನಕ್ಕೆ ಆಯ್ಕೆ ಮಾಡಿದೆ. ಎರಡು ಬಾರಿ ಶಾಸಕಿಯಾಗಿರುವ ಶಾರದಾ ಪೂರ್ಯನಾಯ್ಕ್ ರನ್ನು ಉಪನಾಯಕಿಯನ್ನಾಗಿ ಆಯ್ಕೆ ಮಾಡುವ ಹಿಂದೆ ಪೊಲಿಟಿಕಲ್ ಗೇಮ್ ಪ್ಲ್ಯಾನ್ ಕೂಡ ಇದೆ ಎನ್ನಲಾಗುತ್ತಿದೆ. ಇನ್ನೂ ಚಿಕ್ಕನಾಯಕನಹಳ್ಳಿ ಶಾಸಕ ಸುರೇಶ್ ಬಾಬು ಅವರನ್ನು ಉಪನಾಯಕರನ್ನಾಗಿ ಆಯ್ಕೆ ಮಾಡಲು ಈ ಮೊದಲು ನಿರ್ಧರಿಸಲಾಗಿತ್ತು. ಆದರೆ ಇವತ್ತು ನಡೆದ ಶಾಸಕಾಂಗ ಪಕ್ಷದ ಸಭೆಯಲ್ಲಿ ಶಾರದಾ ಪೂರ್ಯ ನಾಯ್ಕರನ್ನ ಆಯ್ಕೆ ಮಾಡಲಾಗಿದೆ. ಇದೆಲ್ಲದರ ನಡುವೆ ವಿಪಕ್ಷ ನಾಯಕನ ಆಯ್ಕೆಯು ಸಾಕಷ್ಟು ಕುತೂಹಲ ಮೂಡಿಸುತ್ತಿದ್ದು, ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರರವರನ್ನ ಈ ಸ್ಥಾನಕ್ಕೆ ನೇಮಕ ಮಾಡಲಾಗುತ್ತೆ ಎಂಬ ಚರ್ಚೆಗಳು ಕೇಳಿಬರುತ್ತಿದೆ.