MALENADUTODAY.COM | SHIVAMOGGA | #KANNADANEWSWEB
ಶಿವಮೊಗ್ಗ ವಿಮಾನ ನಿಲ್ದಾಣಕ್ಕೆ ರಾಷ್ಟ್ರಕವಿ ಕುವೆಂಪುರವರ ಹೆಸರನ್ನು ಇಡಬೇಕು ಎಂಬುದು ನಿಕ್ಕಿಯಾಗಿದೆ. ಕನ್ನಡದ ಅಸ್ಮಿತೆಯನ್ನು ಜಗತ್ತಿಗೆ ಸಾರಿದ ರಾಷ್ಟ್ರಕವಿ ಹೆಸರನ್ನು ಇಡುವ ನಿಲ್ದಾಣದಲ್ಲಿ ಕನ್ನಡ ಭಾಷೆಯನ್ನ ಬಳಸದಿದ್ದರೇ ಹೇಗೆ? ಎಲ್ಲಿ ನೋಡಿದರೂ ಹಿಂದಿ ಮತ್ತು ಇಂಗ್ಲೀಷ್ನ ಬೋರ್ಡ್ಗಳನ್ನು ಹಾಕಿರುವುದು ನ್ಯಾಯಸಮ್ಮತವೇ ಎಂಬಿತ್ಯಾದಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಕನ್ನಡ ಪರವಾದ ಅಭಿಯಾನ ಆರಂಭವಾಗಿತ್ತು. ಮತ್ತು ಈ ಕ್ಯಾಂಪೇನ್ ಸಾಕಷ್ಟು ಗಂಭೀರ ಸ್ವರೂಪ ಪಡೆದುಕೊಂಡು ಹಲವರು ಅಭಿಯಾನಕ್ಕೆ ಸಾಥ್ ನೀಡಲು ಆರಂಭಿಸಿದ್ದರು.
ಇದರ ಬೆನ್ನಲ್ಲೆ ಅಧಿಕಾರಿಗಳು ಎಚ್ಚೆತ್ತುಕೊಂಡಂತಿದೆ. ವಿಮಾನ ನಿಲ್ದಾಣದಲ್ಲಿ ಕನ್ನಡ ಬೋರ್ಡ್ಗಳು ಪ್ರತ್ಯಕ್ಷವಾಗಿದ್ದು, ಅದರ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಡಲಾಗುತ್ತಿದೆ. ಆಗಮನ, ನಿರ್ಗಮನ , ಲಗೇಜ್, ಟಿಕೇಟ್ ಇತ್ಯಾದಿ ಹೆಸರುಗಳನ್ನು ಹಳದಿ ಬಣ್ಣದಲ್ಲಿ ಬರೆಯಲಾಗಿತ್ತು. ಇದರ ಪಕ್ಕದಲ್ಲಿಯೇ ಇದೀಗ ಪಿಂಕ್ ಬಣ್ಣದಲ್ಲಿ ಕನ್ನಡದ ಬೋರ್ಡ್ಗಳನ್ನು ಹಾಕಲಾಗಿದೆ. ಮತ್ತೆ ಕೆಲವೆಡೆ ಹಳದಿ ಬಣ್ಣದಲ್ಲಿಯೇ ಕನ್ನಡದಲ್ಲಿ ಬರೆಯಲಾಗಿದೆ.
ಇದಿಷ್ಟೆ ಅಲ್ಲದೆ, ಕೇಂದ್ರ ಸಚಿವ ನಾಗರಿಕ ವಿಮಾನಯಾನ ಖಾತೆ ಸಚಿವ ಜ್ಯೋತಿರಾದಿತ್ಯ ಎಂ ಸಿಂಧ್ಯಾ ಕನ್ನಡದಲ್ಲಿಯೇ ಟ್ವೀಟ್ ಮಾಡಿ , ಕರ್ನಾಟಕದ ಜನರೇ, ನಿಮ್ಮಭೂಮಿಗೆ 148 ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈ ಜೋಡಿಸಿ ಎಂದಿದ್ಧಾರೆ. ಸಂಸದ ರಾಘವೇಂದ್ರವರ ಟ್ವೀಟ್ನ್ನ ಕೋಟ್ ಮಾಡಿ ರಿಟ್ವೀಟ್ ಮಾಡಿರುವ ಅವರು ಕನ್ನಡದಲ್ಲಿಯೇ ಟೈಪಿಸಿರುವುದಕ್ಕೆ ಅಭಿನಂದನೆ ವ್ಯಕ್ತವಾಗುತ್ತಿದೆ.
Facebook ನಲ್ಲಿ ನಮ್ಮ ಪೇಜ್ ನೋಡಿ : Malenadutoday.com
Twitter ನಲ್ಲಿ ನಾವಿದ್ದೇವೆ, ಫಾಲೋ ಮಾಡಿ : Malenadutoday.com
Instagram ನಲ್ಲಿ ಕ್ಲಿಕ್ ಮಾಡಿ : Malenadutoday.com
Telegram ನಲ್ಲಿ ಸುದ್ದಿ ಪಡೆಯಲು ಲಿಂಕ್ ಒತ್ತಿ : Malenadutoday.com
ಕರ್ನಾಟಕದ ಜನರೇ, ನಿಮ್ಮ ಭೂಮಿಗೆ 148 ನೇ ವಿಮಾನ ನಿಲ್ದಾಣ ದೊರೆಯುತ್ತಿದ್ದು, ಬನ್ನಿ ನಮ್ಮೊಂದಿಗೆ ಕೈಜೋಡಿಸಿ ???????? ✈️ https://t.co/L22OQaCgUI
— Jyotiraditya M. Scindia (@JM_Scindia) February 22, 2023