KARNATAKA NEWS/ ONLINE / Malenadu today/ Apr 27, 2023 GOOGLE NEWS
ನ್ಯೂ ದೆಹಲಿ/ ಭಾರತೀಯ ವಾಯುಪಡೆ ನಡೆಸಿದ ಆಪರೇಷನ್ ಕಾವೇರಿ ಯಶಸ್ವಿಯಾಗಿದ್ದು , 362 ಮಂದಿಯನ್ನು ಸುರಕ್ಷಿತವಾಗಿ ಭಾರತಕ್ಕೆ ಕರತರಲಾಗಿದೆ.
ಸಿ -130 ಜೆ ‘ಸೂಪರ್ ಹರ್ಕ್ಯುಲಸ್’ ವಿಮಾನವು ಸುಡಾನ್ ನ ಸೈದ್ನಾ ವಿಮಾನ ನಿಲ್ದಾಣದಿಂದ 121 ಭಾರತೀಯರನ್ನು ರಕ್ಷಿಸಿದೆ. ಇನ್ನೂ ಸೌದಿ ಅರಬೆಯಿನ್ ಏರ್ಲೈನ್ಸ್ ಮೂಲಕ ಒಟ್ಟು 362 ಮಂದಿ ಬೆಂಗಳೂರು ಅಂತಾರಾಷ್ಟ್ರಿಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದಾre.
ಈ ಪೈಕಿ ಕರ್ನಾಟಕದವರು 114 , ತಮಿಳುನಾಡಿನ 34 ಆಂಧ್ರಪ್ರದೇಶದ 33 ಮತ್ತು ಕೇರಳ 32 , ತೆಲಂಗಾಣ 22 ಮಹಾರಾಷ್ಟ್ರದ 30 ಮಂದಿ ವಾಪಸ್ ಆಗಿದ್ದಾರೆ.
ಇದನ್ನ ಓದಿ/ ಲೈಂಗಿಕ ಕಿರುಕುಳ ನೀಡಿದ ಆರೋಪಿಗೆ ಶಿವಮೊಗ್ಗ ಕೋರ್ಟ್ ನೀಡಿತು ಭಾರೀ ಶಿಕ್ಷೆ
ಇನ್ನೂ ಇದರಲ್ಲಿ ಶಿವಮೊಗ್ಗದ 50 ಮಂದಿ ಕೂಡ ತವರಿಗೆ ವಾಪಸ್ ಆಗಿದ್ದು ರಾಜ್ಯ ಸರ್ಕಾರ ಕೆಎಸ್ಆರ್ಸಿ ಬಸ್ಗಳ ಮೂಲಕ ಸಂತ್ರಸ್ತರನ್ನು ಅವರವರ ಊರಿಗೆ ರವಾನಿಸಿದೆ. ಕರ್ನಾಟಕದವರ ಪೈಕಿ ಮೈಸೂರಿನ 45 ಬೆಂಗಳೂರಿನ 9, ಕಲಬುರಗಿಯ 4 ಉಡುಪಿಯ ಇಬ್ಬರು, ದಾವಣಗೆರೆಯ 1 ರಾಮನಗರ 2, ಹಾಸನ ಒಬ್ಬರನ್ನು ಅವರ ತವರಿಗೆ ಸುರಕ್ಷಿತವಾಗ ಕಳಹಿಸಿಕೊಡಲಾಗಿದೆ.
ಸಂಘರ್ಷ ಪೀಡಿತ ಸುಡಾನ್ ನಿಂದ ಭಾರತೀಯ ಪ್ರಜೆಗಳನ್ನು ಸ್ಥಳಾಂತರಿಸಲು ನಡೆಯುತ್ತಿರುವ ಆಪರೇಷನ್ ಕಾವೇರಿಯ ಭಾಗವಾಗಿ ಈ ಕಾರ್ಯಾಚರಣೆ ನಡೆದಿದೆ.