ಹೂಡಿಕೆ ಮಾಡಿದ್ದು 9 ಲಕ್ಷ, ಲಾಭಾಂಶ ತೋರಿಸಿದ್ದು 49 ಲಕ್ಷ : ನಂತರ ಆಗಿದ್ದೇನು

ಹಂಚಿಕೊಳ್ಳಿ
WhatsApp Facebook X Telegram
Without Taking Loan
Without Taking Loan

Cyber fraud ಶಿವಮೊಗ್ಗ: ಹೆಚ್ಚಿನ ಲಾಭಾಂಶದ ಆಮಿಷವೊಡ್ಡಿ ಸೈಬರ್ ವಂಚಕರು ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 9,90,000 ಹಣವನ್ನು ಹೂಡಿಕೆ ಮಾಡಿಸಿಕೊಂಡು ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಸಂತ್ರಸ್ತರು ಶಿವಮೊಗ್ಗದ ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

Cyber fraud ಶಿವಮೊಗ್ಗದ ವ್ಯಕ್ತಿಯೊಬ್ಬರು ತಮ್ಮ ಫೇಸ್‌ಬುಕ್ ಖಾತೆಯನ್ನು ನೋಡುತ್ತಿದ್ದಾಗ ‘ನಿಯೋ ವೆಲ್ತ್ ಪಾರ್ಟ್‌ನರ್ಸ್’ (neo Wealth Partners) ಎಂಬ ಸಂಸ್ಥೆಯ ಜಾಹೀರಾತು ಕಾಣಿಸಿದೆ. ಇದರಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಾಂಶ ನೀಡುವುದಾಗಿ ಆಮಿಷ ಒಡ್ಡಲಾಗಿತ್ತು. ಈ ಜಾಹೀರಾತನ್ನು ಕ್ಲಿಕ್ ಮಾಡಿದ ಕೂಡಲೇ ಅವರು ವಾಟ್ಸಾಪ್ ಗುಂಪೊಂದಕ್ಕೆ ಸೇರ್ಪಡೆಯಾಗಿದ್ದಾರೆ. ಆ ಗುಂಪಿನಲ್ಲಿ ಟ್ರೇಡಿಂಗ್ಕುರಿತು ಮಾಹಿತಿ ನೀಡಲಾಗುತ್ತಿತ್ತು ಮತ್ತು ನ್ಯೂಸ್ಟಾ ಟ್ರೇಡಿಂಗ್’ (NEWSTA TRADING) ನಲ್ಲಿ ಹೂಡಿಕೆ ಮಾಡಿದರೆ ಭಾರಿ ಲಾಭ ಸಿಗುವುದಾಗಿ ನಂಬಿಸಲಾಯಿತು. ವಂಚಕರ ಮಾತುಗಳನ್ನು ನಂಬಿದ ದೂರುದಾರರು, ಅವರು ಸೂಚಿಸಿದಂತೆ ‘ನ್ಯೂಸ್ಟಾ ಟ್ರೇಡಿಂಗ್’ ಎಂಬ ಅಪ್ಲಿಕೇಶನ್ ಅನ್ನು ತಮ್ಮ ಮೊಬೈಲ್‌ನಲ್ಲಿ ಇನ್‌ಸ್ಟಾಲ್ ಮಾಡಿಕೊಂಡು ಖಾತೆಯನ್ನು ತೆರೆದಿದ್ದಾರೆ.

ವಾಟ್ಸಾಪ್ ಗ್ರೂಪ್‌ನಲ್ಲಿದ್ದ ವಂಚಕರು ಹೇಳಿದಂತೆ, ದೂರುದಾರರು ಅವರು ನೀಡಿದ ವಿವಿಧ ಬ್ಯಾಂಕ್ ಖಾತೆಗಳಿಗೆ ಹಂತ ಹಂತವಾಗಿ ಒಟ್ಟು ₹9,90,000 ಹಣವನ್ನು ವರ್ಗಾವಣೆ ಮಾಡಿದ್ದಾರೆ.ಹಣವನ್ನು ವರ್ಗಾಯಿಸಿದ ನಂತರ, ‘ನ್ಯೂಸ್ಟಾ ಟ್ರೇಡಿಂಗ್’ ಅಪ್ಲಿಕೇಶನ್‌ನಲ್ಲಿ ತಾವು ಹಾಕಿದ ಅಸಲು ಹಣ ಮತ್ತು ವಂಚಕರು ತೋರಿಸಿದ  ನಕಲಿ ಲಾಭಾಂಶ ಸೇರಿ 41 ಲಕ್ಷಕ್ಕೂ ಹೆಚ್ಚಿನ ಹಣ ಇರುವಂತೆ ತೋರಿಸಿದೆ. ಇದರಿಂದ ದೂರುದಾರರು ನಿಜವಾಗಿಯೂ ಲಾಭ ಬಂದಿದೆ ಎಂದು ನಂಬಿದ್ದಾರೆ. ಆದರೆ, ದೂರುದಾರರು ಆ ಹಣವನ್ನು ತಮ್ಮ ಖಾತೆಗೆ ಹಿಂಪಡೆಯಲು (Withdraw) ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ಈ ಕುರಿತು ಕಂಪನಿಯವರನ್ನು ಸಂಪರ್ಕಿಸಿದಾಗ, ಹಣವನ್ನು ಹಿಂಪಡೆಯಲು  ಇರುವ ನಿಯಮದಂತೆ ಮೊದಲು 15% ಹಣವನ್ನು ಹೆಚ್ಚುವರಿಯಾಗಿ ಕಟ್ಟಬೇಕು ಎಂದು ಹೇಳಿದ್ದಾರೆ.ಈ ಮಾತು ಕೇಳಿ ಅನುಮಾನಗೊಂಡ ದೂರುದಾರರು ತಮ್ಮ ಪರಿಚಿತರಲ್ಲಿ ವಿಚಾರಿಸಿದಾಗ ತಾವು ವಂಚನೆಗೆ ಒಳಗಾಗಿರುವುದು ತಿಳಿದುಬಂದಿದೆ.

ಟ್ರೇಡಿಂಗ್’ ಹೆಸರಿನಲ್ಲಿ ಲಾಭಾಂಶದ ಆಮಿಷವೊಡ್ಡಿ ತಮ್ಮಿಂದ 9,90,000 ಹಣವನ್ನು ಮೋಸದಿಂದ ವರ್ಗಾಯಿಸಿಕೊಂಡು ವಂಚಿಸಿದವರನ್ನು ಪತ್ತೆ ಮಾಡಿ, ತಮ್ಮ ಹಣವನ್ನು ವಾಪಸು ಕೊಡಿಸಬೇಕೆಂದು ದೂರುದಾರರು ಸಿಇಎನ್ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

Cyber fraud

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor