ನವೆಂಬರ್ 14, 2025 : ಮಲೆನಾಡು ಟುಡೆ : ಇಂದಿನ ರಾಶಿ ಭವಿಷ್ಯ, ನವೆಂಬರ್ 14, 2025ರ ಜಾತಕ ವಿವರ ಇಲ್ಲಿದೆ. ವಿಶ್ವಾವಸು ನಾಮ ಸಂವತ್ಸರ, ದಕ್ಷಿಣಾಯಣ, ಶರದೃತು ಕಾರ್ತಿಕ ಮಾಸದ ದಶಮಿ ತಿಥಿ, ಪೂರ್ವಾಷಾಢ ನಕ್ಷತ್ರ, ರಾಹು ಕಾಲ: ಬೆಳಿಗ್ಗೆ 10.30 ರಿಂದ ಮಧ್ಯಾಹ್ನ 12.00, ಯಮಗಂಡ: ಮಧ್ಯಾಹ್ನ 3.00 ರಿಂದ ಸಂಜೆ 4.30
ಸರಕು, ರಾಶಿ, ಬೆಟ್ಟೆ, ಗೊರಬಲು! ಎಲ್ಲೆಲ್ಲಿ ಎಷ್ಟರವರೆಗೆ ಬಂತು ಅಡಿಕೆ ದರ
ರಾಶಿ ಭವಿಷ್ಯ
ಮೇಷ : ವೃತ್ತಿ ಕ್ಷೇತ್ರದಲ್ಲಿ ಕೆಲವು ಅಡೆತಡೆ, ಕೆಲಸ ವಿಳಂಬವಾಗಬಹುದು. ಖರ್ಚು ನಿರೀಕ್ಷೆಗಿಂತ ಹೆಚ್ಚಾಗುವ ಲಕ್ಷಣಗಳಿವೆ, ಹಣಕಾಸಿನ ನಿರ್ವಹಣೆಯಲ್ಲಿ ಜಾಗ್ರತೆ ವಹಿಸಿ. ಅನಗತ್ಯ ವಿಷಯಗಳಿಗೆ ವಾದ-ವಿವಾದ ಹೆಚ್ಚಾಗುವ ಸಾಧ್ಯತೆ, ವ್ಯಾಪಾರ ಮತ್ತು ಉದ್ಯೋಗದಲ್ಲಿ ಪ್ರಗತಿ ನಿಧಾನಗತಿಯಲ್ಲಿ ಸಾಗಲಿದೆ.
ವೃಷಭ : ಕೆಲವು ಸಮಸ್ಯೆ , ಭಿನ್ನಾಭಿಪ್ರಾಯ ನಿಮ್ಮನ್ನು ಕಾಡಬಹುದು. ಆರೋಗ್ಯದಲ್ಲಿ ವ್ಯತ್ಯ. ಕೈಗೊಂಡ ಕೆಲಸದಲ್ಲಿ ಕಿರಿಕಿರಿ, ವ್ಯಾಪಾರ ವಿಸ್ತರಣೆಗೆ ಸಂಬಂಧಿಸಿದ ಪ್ರಯತ್ನಗಳಲ್ಲಿ ಅಡೆತಡೆ, ಉದ್ಯೋಗದಲ್ಲಿರುವವರಿಗೆ ಕೆಲಸದ ಒತ್ತಡ
ಮಿಥುನ : ಉತ್ತಮ ಅವಕಾಶ. ಗೌರವ ಮತ್ತು ಮನ್ನಣೆ ಹೆಚ್ಚಾಗಲಿದೆ. ಆಸ್ತಿ-ಸಂಬಂಧಿತ ಒಪ್ಪಂದ ಕೈಗೂಡಲಿದೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಇಂದು ಉತ್ಸಾಹ ಮತ್ತು ಚೈತನ್ಯದ ವಾತಾವರಣ ಕಂಡುಬರಲಿದೆ.

ಕರ್ಕಾಟಕ : ಸಣ್ಣಪುಟ್ಟ ಸಮಸ್ಯೆ. ಮಾನಸಿಕ ಒತ್ತಡ.ಕುಟುಂಬದಲ್ಲಿ ಒತ್ತಡದ ವಾತಾವರಣ ಆರೋಗ್ಯವು ಹದಗೆಡಬಹುದು, ಕೈಗೆತ್ತಿಕೊಂಡ ವಿಷಯಗಳು ನಿರೀಕ್ಷಿತ ವೇಗದಲ್ಲಿ ಪ್ರಗತಿಯಾಗುವುದಿಲ್ಲ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ಅಡೆತಡೆ
ಸಿಂಹ : ಹೊಸ ಕೆಲಸ ಕೈಗೆತ್ತಿಕೊಳ್ಳಲು ಸಿದ್ಧರಾಗುತ್ತೀರಿ, ಯಶಸ್ಸು ಕಾಣುವಿರಿ. ಉಲ್ಲಾಸದಿಂದ ಸಮಯ ಕಳೆಯುವ ಅವಕಾಶ. ಉದ್ಯೋಗಕ್ಕೆ ಸಂಬಂಧಿಸಿದ ಪ್ರಯತ್ನ ಸಕಾರಾತ್ಮಕ ಫಲಿತಾಂಶ ನೀಡಲಿವೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಪ್ರಗತಿಯನ್ನು ಕಾಣುವಿರಿ.
ಕನ್ಯಾ : ತೊಂದರೆಗೆ ಸಿಲುಕಬಹುದು. ಕೆಲಸ ಮುಂದೂಡಲ್ಪಡುವ ಸಾಧ್ಯತೆ ಇರುತ್ತದೆ. ಆರ್ಥಿಕ ತೊಂದರೆ, ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯದಿನ

ತುಲಾ : ಅತ್ಯಂತ ಅನುಕೂಲಕರ ದಿನ, ಕೆಲಸಗಳಲ್ಲಿ ಯಶಸ್ಸನ್ನು ಸಾಧಿಸುವಿರಿ. ವ್ಯವಹಾರ ವಿಸ್ತರಣೆಯ ಹಾದಿಯಲ್ಲಿ ಸಾಗಲಿವೆ ಮತ್ತು ಉದ್ಯೋಗದಲ್ಲಿರುವವರಿಗೆ ಹೊಸ ಉತ್ಸಾಹ ಮತ್ತು ಹುರುಪು ಸಿಗಲಿದೆ.
ಶಿವಮೊಗ್ಗ ನಗರದಲ್ಲಿ ಇಂದಿನಿಂದಲೇ ಭಾರೀ ವಾಹನ ಸಂಚಾರ ನಿಷೇಧ: ಜಿಲ್ಲಾಧಿಕಾರಿಗಳ ಆದೇಶ : ಕಾರಣವೇನು
ವೃಶ್ಚಿಕ : ವ್ಯವಹಾರದಲ್ಲಿ ನೀವು ನಿರೀಕ್ಷಿತ ಯಶಸ್ಸನ್ನು ಪಡೆಯುವಿರಿ. ಪ್ರೀತಿಪಾತ್ರರ ಜೊತೆ ಆತ್ಮೀಯ ಸ್ನೇಹ ವೃದ್ಧಿಯಾಗಿ, ಮನರಂಜನೆಯಲ್ಲಿ ಸಮಯ ಕಳೆಯುವಿರಿ. ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಇಂದು ಶುಭದಿನ. ಉದ್ಯೋಗ ಮತ್ತು ವ್ಯವಹಾರದಲ್ಲಿ ಅನುಕೂಲ
ಧನು: ಭಿನ್ನಾಭಿಪ್ರಾಯಗಳನ್ನು ಎದುರಿಸಬಹುದು. ಆರ್ಥಿಕ ತೊಂದರೆ ಮತ್ತು ಹಣಕಾಸಿನ ಬಿಕ್ಕಟ್ಟು. ಕೆಲಸಗಳಲ್ಲಿ ನಿರೀಕ್ಷಿತ ಪ್ರಗತಿ . ಕೆಲವು ಸಮಸ್ಯೆ. ಉದ್ಯೋಗ ಮತ್ತು ವ್ಯವಹಾರದಲ್ಲಿ ಸಾಮಾನ್ಯ ದಿ.

ಮಕರ : ಪ್ರಮುಖ ನಿರ್ಧಾರ ಕೈಗೊಳ್ಳುವ ದಿನ. ಕೆಲಸದಲ್ಲಿ ಕಿರಿಕಿರಿ ಮತ್ತು ಅಸಮಾಧಾನ, ಒತ್ತಡ ಹೆಚ್ಚಾಗಬಹುದು. ದೇವಾಲಯಗಳಿಗೆ ಭೇಟಿ. ಉದ್ಯೋಗ ಮತ್ತು ವ್ಯವಹಾರದಲ್ಲಿ ಏರಿಳಿತ
ಕುಂಭ : ಹೊಸ ಜನರ ಪರಿಚಯ, ಶುಭ ಸುದ್ದಿ, ಧನಲಾಭ , ಗೌರವ ಮತ್ತು ಪ್ರತಿಷ್ಠೆ ಹೆಚ್ಚಾಗಲಿದೆ. ವ್ಯಾಪಾರ ಮತ್ತು ಉದ್ಯೋಗಗಳಲ್ಲಿ ನಿರೀಕ್ಷಿತ ಉತ್ಸಾಹ ಮತ್ತು ಯಶಸ್ಸನ್ನು ಕಾಣುವಿರಿ.
ಶಿವಮೊಗ್ಗ: ಕೇವಲ 9 ದಿನಗಳಲ್ಲಿ ಮಹಿಳಾ ಇಂಜಿನಿಯರ್‌ಗೆ 11 ಲಕ್ಷ ವಂಚನೆ!
ಮೀನ: ಜನಪ್ರಿಯತೆ ಹೆಚ್ಚಾಗಲಿದೆ. ಗಣ್ಯ ವ್ಯಕ್ತಿಗಳೊಂದಿಗೆ ಸಂಪರ್ಕ ಸಿಗಲಿದೆ , ಆರೋಗ್ಯದ ಜಾಗ್ರತೆ ಅಗತ್ಯ. ಉದ್ಯೋಗ ಮತ್ತು ವ್ಯವಹಾರದಲ್ಲಿ ಈ ದಿನ ಅನುಕೂಲಕರ
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook whatsapp whatsapp chanel instagram youtube telegram google business malenadu today epaper malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ!
