ಮೈಸೂರು-ತಾಳಗುಪ್ಪ ಟ್ರೈನ್​ಗೆ ತಲೆಕೊಟ್ಟು ಸಾಗರ ಮೂಲದ ವಿದ್ಯಾರ್ಥಿನಿ ಆತ್ಮಹತ್ಯೆ

Malenadu Today

Shivamogga Mar 7, 2024  ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ಸೊರಬ ರೈಲ್ವೆ ಗೇಟ್ ಬಳಿ ವಿದ್ಯಾರ್ಥಿನಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಟು ತಾಳಗುಪ್ಪ ರೈಲಿಗೆ ವಿದ್ಯಾರ್ಥಿನಿ ತಲೆ ಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದುಬಂದಿದೆ. 

ಸಾಗರ ಕಾಲೇಜೋಂದರಲ್ಲಿ ಓದುತ್ತಿದ್ದ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿದ್ದಕ್ಕೆ ಕಾರಣ ತಿಳಿದುಬಂದಿಲ್ಲ ಅಪ್ರಾಪ್ತೆಯಾಗಿರುವ ಕಾರಣಕ್ಕೆ ವಿದ್ಯಾರ್ಥಿನಿಯ ವಿವರ ನೀಡಲಾಗುತ್ತಿಲ್ಲ. ಈ ಸಂಬಂಧ ಸಾಗರ ರೈಲ್ವೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದು ತನಿಖೆ ನಡೆಸ್ತಿದ್ದಾರೆ. ಘಟನೆಗೆ ಕಾರಣವೂ ಸಹ ಸ್ಪಷ್ಟವಾಗಿಲ್ಲ. 

ಘಟನೆಯಲ್ಲಿ ವಿದ್ಯಾರ್ಥಿನಿಯ ದೇಹ ಛೀದ್ರವಾಗಿದ್ದು ದೇಹದ ಭಾಗಗಳು ವಿವಿಧೆಡೆ ಬಿದ್ದಿದೆ. ಇನ್ನೂ ಘಟನೆ ಬೆನ್ನಲ್ಲೆ ಕುಟುಂಬಸ್ಥರಲ್ಲಿ ದುಃಖ ಮಡುಗಟ್ಟಿದೆ. 

Share This Article