Shivamogga | Feb 1, 2024 | ಶಿವಮೊಗ್ಗದ ಹಾಡೋನಹಳ್ಳಿ ಗ್ರಾಮದಲ್ಲಿ ಸಂಗ್ರಹಿಸಿದ್ದ ಒಣ ಅಡಿಕೆಯನ್ನು ಕದ್ದೊಯ್ದ ಸಂಬಂಧ ಪ್ರಕರಣ ದಾಖಲಾಗಿದೆ 05 ಎಕರೆ ಅಡಿಕೆ ತೋಟ ಇರುವ ಮಾಲೀಕರಿಗೆ ಸೇರಿದ ಸ್ಥಳದಲ್ಲಿ ಒಣಗಿಸಿದ ಅಡಿಕೆಯನ್ನು ಕಳ್ಳರು ಕದ್ದೊಯ್ದಿದ್ದಾರೆ. ಅದರ ಮೊತ್ತವೇ 60 ಸಾವಿರ ರೂಪಾಯಿ ಆಗಬಹುದು ಎನ್ನಲಾಗಿದ್ದು, ಈ ಸಂಬಂಧ ಶಿವಮೊಗ್ಗ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ದೂರು ನೀಡಲಾಗಿದೆ.
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್
ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ ವ್ಯಾಪ್ತಿಯಲ್ಲಿರುವ ದುರ್ಗಮ್ಮ ದೇವಸ್ಥಾನದಲ್ಲಿ ಕಳ್ಳತನವಾಗಿದೆ. ದೇವಾಲಯದ ಸ್ಟೀಲಿನ ಕಾಣಿಕೆ ಹುಂಡಿಯ ಬೀಗ ತೆರೆದು ಅದರಲ್ಲಿದ್ದ ಸುಮಾರು 3500/ರೂ ಕಾಣಿಕೆ ಹಣವನ್ನು ಹಾಗೂ ಸುಮಾರು 38 ಗ್ರಾಂ ತೂಕದ ಬಂಗಾರದ ವಸ್ತುಗಳನ್ನು ಕಳ್ಳತನ ಮಾಡಿದ್ದಾರೆ. ಇದರ ಮೌಲ್ಯ ಸುಮಾರು 1,25,000/ರೂ ಗಳಾಗಬಹುದಾಗಿದ್ದು, ಈ ಸಂಬಂಧ ಶಿಕಾರಿಪುರ ಗ್ರಾಮಾಂತರ ಪೊಲೀಸ್ ಸ್ಟೇಷನ್ನಲ್ಲಿ ದೂರು ದಾಖಲಿಸಲಾಗಿದೆ
ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್
ಶಿವಮೊಗ್ಗದ ಸವಳಂಗ ರಸ್ತೆಯಲ್ಲಿ ಅಪಘಾತವಾಗಿದ್ದು ಈ ಸಂಬಂಧ ಬೈಕ್ ಸವಾರನೊಬ್ಬನ ಮೇಲೆ ಕೇಸ್ ದಾಖಲಾಗಿದೆ. ಶಿವಮೂರ್ತಿ ಸರ್ಕಲ್ನ ಕಡೆಗೆ ಹೋಗುತ್ತಿದ್ದ ಕಾರಿಗೆ ಡಿಯೋ ಬೈಕ್ವೊಂದು ಡಿಕ್ಕಿ ಹೊಡೆದ ಪರಿಣಾಮ ಕಾರಿನ ಡೋರ್ ಜಖಂಗೊಂಡಿತ್ತು. ಈ ಸಂಬಂಧ ತಡವಾಗಿ ದೂರುದಾಖಲಾಗಿದ್ದು, ಪೊಲೀಸರು ಕೇಸ್ ದಾಖಲಿಸಿದ್ದಾರೆ.
ಹರ್ಷಾ ಫರ್ನ್ ಸಮೀಪ ಅಪಘಾತ
ಇತ್ತ ,ಸಾಗರ ರಸ್ತೆಯಲ್ಲಿ ಹರ್ಷ ಫರ್ನ್ ಹೋಟೆಲ್ ಕ್ರಾಸ್ ಡಿವೈಡರ್ ಬಳಿ ಹೋಗುತ್ತಿದ್ದ ಬೈಕ್ವೊಂದಕ್ಕೆ ಸಾಗರ ಕಡೆಯಿಂದ ಬರುತ್ತಿದ್ದ ಕಾರೊಂದು ಡಿಕ್ಕಿಯಾಗಿದೆ. ಪರಿಣಾಮ ಬೈಕ್ನಲ್ಲಿದ್ದ ಇಬ್ಬರಿಗೆ ಗಂಭೀರ ಗಾಯವಾಗಿದೆ. ಅವರನ್ನ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ. ಸದ್ಯ ಈ ಸಂಬಂಧ ಕಾರು ಚಾಲಕನ ವಿರುದ್ಧ ಶಿವಮೊಗ್ಗ ಪೂರ್ವ ಸಂಚಾರಿ ಪೊಲೀಸ್ ಸ್ಟೇಷನ್ನಲ್ಲಿ ದೂರುದಾಖಲಿಸಲಾಗಿದೆ.