ಸುದ್ದಿಯ ಸ್ಥಳ: Thirthahalli, Shivamogga, Karnataka
SHIVAMOGGA | Jan 27, 2024 | ಕಳೆದೊಂದು ವಾರದಲ್ಲಿ ಎರಡನೇ ಸಲ ಗ್ಯಾಸ್ ಸಿಲಿಂಡರ್ ತುಂಬಿದ್ದ ಲಾರಿ ಅಪಘಾತಕ್ಕೀಡಾದ ಘಟನೆ ಬಗ್ಗೆ ವರದಿಯಾಗಿದೆ. ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ತಾಲ್ಲೂಕು ನಲ್ಲಿ ಈ ಘಟನೆ ಸಂಭವಿಸಿದೆ. ಗ್ಯಾಸ್ ಸಿಲಿಂಡರ್ಗಳು ತುಂಬಿಕೊಂಡು ಸಾಗುತ್ತಿದ್ದ ಲಾರಿಯೊಂದು ರಸ್ತೆಯಿಂದ ಉರುಳಿ ತಗ್ಗಿನಲ್ಲಿದ್ದ ಗದ್ದೆಗೆ ಉರುಳಿಬಿದ್ದಿದೆ.
ಮಲೆನಾಡು ಟುಡೆ ವರದಿ
ಗ್ಯಾಸ್ ಅಂಡೆ ತಂಬಿಕೊಂಡು ಮಂಗಳೂರು ಕಡೆಗೆ ಲಾರಿ ಹೋಗುತ್ತಿತ್ತು. ಈ ವೇಳೆ ಎಂತಾಯ್ತು ಎಂಬುದು ಗೊತ್ತಾಗಿಲ್ಲ. ಆದರೆ ಲಾರಿ ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. ನೇರವಾಗಿ ಉರುಳಿ ಗದ್ದೆಗೆ ಬಿದ್ದಿದೆ. ಅದೃಷ್ಟಕ್ಕೆ ಲಾರಿ ಅಪ್ಸೆಟ್ ಆಗುತ್ತಿರುವದು ತಿಳಿಯುತ್ತಲೇ ಚಾಲಕ ಲಾರಿಯಿಂದ ಹಾರಿದ್ದಾನೆ. ಹೀಗಾಗಿ ಆತನಿಗೆ ಹೆಚ್ಚಿನ ಅಪಾಯವಾಗಿಲ್ಲ. ಇನ್ನೂ ಲಾರಿ ಉರುಳಿದ ದಾರಿಯುದ್ದಕ್ಕೂ ಸಿಲಿಂಡರ್ಗಳು ಸಹ ಬಿದ್ದಿವೆ.
ಶಿವಮೊಗ್ಗದಿಂದ ತೀರ್ಥಹಳ್ಳಿಗೆ ಸಾಗುವ ರಾಷ್ಟ್ರೀಯ ಹೆದ್ದಾರಿ ಯಲ್ಲಿಯೇ ಘಟನೆ ನಡೆದಿದೆ.ಕುಡುಮಲ್ಲಿಗೆ ಬಳಿ ಘಟನೆ ಸಂಭವಿಸಿದ್ದು, ವಿಷಯ ತಿಳಿಯುತ್ತಲೇ ಸ್ಥಳಕ್ಕೆ ತೀರ್ಥಹಳ್ಳಿ ಪೊಲೀಸರು ಭೇಟಿಕೊಟ್ಟು ಪರಿಶೀಲನೆ ನಡೆಸಿದ್ದಾರೆ.