ನಾಲ್ಕು ಪಲ್ಟಿಯಾಗಿ ನಿದಿಗೆ ಬಳಿ ಹೊಲಕ್ಕೆ ಉರುಳಿದ ಕಾರು!

ಹಂಚಿಕೊಳ್ಳಿ
WhatsApp Facebook X Telegram
ನಾಲ್ಕು ಪಲ್ಟಿಯಾಗಿ  ನಿದಿಗೆ ಬಳಿ ಹೊಲಕ್ಕೆ ಉರುಳಿದ ಕಾರು!

SHIVAMOGGA  |  Jan 26, 2024  |    ಶಿವಮೊಗ್ಗದ ನಿದಿಗೆ ಬಳಿ ಕಾರೊಂದು ಅಪಘಾತಕ್ಕೀಡಾಗಿ ರಸ್ತೆ ಪಕ್ಕದಲ್ಲಿ ಹೊಲಕ್ಕೆ ಉರುಳಿ ಬಿದ್ದಿರುವ ಘಟನೆ ಸಂಭವಿಸಿದೆ. ಘಟನೆ ನಡೆದ ಸಮಯ ಹಾಗೂ ನಡೆದ ರೀತಿಯ ಬಗ್ಗೆ ವಿವರ  ಸ್ಪಷ್ಟವಾಗಿಲ್ಲ. ಆದರೆ ಘಟನೆಯಲ್ಲಿ ಕಾರು ಹೆಚ್ಚುಕಮ್ಮಿ ಪೂರ್ತಿ ಜಖಂ ಆಗಿದೆ. 

ಶಿವಮೊಗ್ಗ ಮಾಧ್ಯಮ ವರದಿಗಾರರು ನೀಡಿರುವ ಮಾಹಿತಿ ಪ್ರಕಾರ, ಕಾರಿನಲ್ಲಿ ಇಬ್ಬರು ಇದ್ದರು ಎನ್ನಲಾಗಿದೆ. ಈ ಪೈಕಿ ಚಾಲಕನಿಗೆ ಜಾಸ್ತಿ ಪೆಟ್ಟಾಗಿದೆ ಎಂದು ಹೇಳಲಾಗುತ್ತಿದೆ.ನಿದಿಗೆ ಬಳಿ ಬರುವಾಗ ಕಾರು ಡ್ರೈವರ್​ ಕಂಟ್ರೋಲ್​ಗೆ ಸಿಗದೇ, ನಾಲ್ಕು ಪಲ್ಟಿಯಾಗಿದೆ, ಬಳಿಕ ರಸ್ತೆ ಪಕ್ಕದ ಹೊಲಕ್ಕೆ ಉರುಳಿ ನಿಂತಿದೆ. 

ಇದನ್ನೂ ಸಹ ಓದಿ : Shimoga Traffic Police Fine Check | ಶಿವಮೊಗ್ಗ ಟ್ರಾಫಿಕ್ ಪೊಲೀಸರ ರೆಕಾರ್ಡ್​ ಬ್ರೇಕ್​ |ಹಾಕಿದ್ರು 38,500 ರೂಪಾಯಿ ಫೈನ್

ಕಾರಿನ ಮುಂಭಾಗ ಹಾಗೂ ಟಾಪ್​ ಡ್ಯಾಮೇಜ್​ ಆಗಿದ್ದು, ಘಟನೆಯಲ್ಲಿ ಕಾರಿನಲ್ಲಿದ್ದವರು ಗೊಂದಿಚಟ್ನಹಳ್ಳಿಯ ಭಾಗದವರು ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಸಂಚಾರಿ ಪೊಲೀಸರು ಪರಿಶೀಲನೆ ನಡೆಸ್ತಿದ್ದಾರೆ 


ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor