ಶುಗರ್ ಫ್ಯಾಕ್ಟರಿ ಬಳಿ ಗಾಂಜಾ ಮಾರಾಟ, ಸಿಇಎನ್​ ಪೊಲೀಸ್ ಸ್ಟೇಷನ್​ ಪೊಲೀಸರ ದಾಳಿ, ಭದ್ರಾವತಿಯ ನಾಲ್ವರು ಅರೆಸ್ಟ್

ಹಂಚಿಕೊಳ್ಳಿ
WhatsApp Facebook X Telegram
ಶುಗರ್ ಫ್ಯಾಕ್ಟರಿ ಬಳಿ ಗಾಂಜಾ ಮಾರಾಟ, ಸಿಇಎನ್​ ಪೊಲೀಸ್ ಸ್ಟೇಷನ್​ ಪೊಲೀಸರ ದಾಳಿ,  ಭದ್ರಾವತಿಯ ನಾಲ್ವರು ಅರೆಸ್ಟ್

SHIVAMOGGA  |  Jan 25, 2024  | ಶಿವಮೊಗ್ಗದಲ್ಲಿ ಮಾದಕ ವಸ್ತು ಗಾಂಜಾದ ಹಾವಳಿ ವಿಪರೀತವಾಗಿದೆ. ಈ ನಡುವೆ ಇದರ ವಿರುದ್ಧ ಶಿವಮೊಗ್ಗ ಎಸ್​ಪಿ ಮಿಥುನ್ ಕುಮಾರ್ ಜಿ ಕೆ,   ಸಿಇಎನ್ ಕ್ರೈಂ ಪೊಲೀಸ್ ಠಾಣೆ PI  ನೇತೃತ್ವದಲ್ಲಿ ತಂಡವನ್ನು ರಚನೆ ಮಾಡಿದ್ದಾರೆ. ಸದ್ಯ ಈ ತಂಡ ನಾಲ್ವರು ಆರೋಪಿಗಳನ್ನ ಅರೆಸ್ಟ್ ಮಾಡಿದೆ. 

ಶಿವಮೊಗ್ಗ ಸಿಇಎನ್ ಪೊಲೀಸ್ ಸ್ಟೇಷನ್

ದಿನಾಂಕಃ 23-01-2024 ರಂದು ಬೆಳಗ್ಗೆ  ಶಿವಮೊಗ್ಗ ನಗರದ ಮಲವಗೊಪ್ಪದಿಂದ ಶುಗರ್ ಪ್ಯಾಕ್ಟರಿಗೆ ಸೇರಿದ ಖಾಲಿ ಜಾಗದಲ್ಲಿ 04 ಮಂದಿ ಗಾಂಜಾ ಮಾರುತ್ತಿರುವ ಬಗ್ಗೆ ಪೊಲೀಸರಿಗೆ ಮಾಹಿತಿ ಲಭ್ಯವಾಗಿದೆ. 

ಈ ಹಿನ್ನೆಲೆಯಲ್ಲಿ ದೀಪಕ್ ಎಂ ಎಸ್. ಪಿ.ಐ  ಸಿಇಎನ್. ಕೈಂ ಪೊಲೀಸ್ ಠಾಣೆ ಮತ್ತು ಸಿಬ್ಬಂಧಿಗಳಾದ ಹೆಚ್.ಸಿ ಧರ್ಮಾನಾಯ್ಕ್, ಚಂದ್ರಶೇಖರ್ ಡಿ,ಆರ್, ಕರಿಬಸಪ್ಪ, ಬಿ, ಎಸ್. ಪಿಸಿ ಫಿರ್ದೋಸ್ ಅಹಮ್ಮದ್, ರವಿ ಬಿ, ಚಿದಂಬರ್ ಡಿ. ಎನ್. ಹಾಗೂ ಚಾಲಕರಾದ  ಪ್ರಕಾಶನಾಯ್ಕ ರವರುಗಳನ್ನು ಒಳಗೊಂಡ ತಂಡ ಸ್ಥಳದಲ್ಲಿ ದಾಳಿ ನಡೆಸಿದೆ. ಈ ವೇಳೆ ಮಾದಕ ವಸ್ತು ಸಮೇತ ಆರೋಪಿಗಳು ಸಿಕ್ಕಿಬಿದ್ದಿದ್ದಾರೆ. 

ಬಂಧಿತರು

  • 1) ಸುಹೇಲ್ ಖಾನ್ @ ಪಿನ್ನಿ, 20 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ 

  • 2) ಮೊಹಮ್ಮದ್ ಗೌಸ್ @ ಗುಂಡ, 23 ವರ್ಷ, ಅನ್ವರ್ ಕಾಲೋನಿ ಮೋಮಿನ್ ಮೊಹಲ್ಲಾ ಭದ್ರಾವತಿ, 

  • 3) ಖಲೀಲ್ ಅಹಮದ್ @ ಕಾಲು, 25 ವರ್ಷ, ಕೋಟೆ ಏರಿಯಾ ಖಾಝಿ ಮೊಹಲ್ಲಾ ಭದ್ರಾವತಿ ಟೌನ್ 

  • 4) ಸೈಯದ್ ಹಸೈನ್ @ ಜಂಗ್ಲಿ @ ಸಾಹಿಲ್, 23 ವರ್ಷ, ಎಕಿನ್ಸಾ ಕಾಲೋನಿ 

ಗಾಂಜಾ ಜಪ್ತಿ

ಆರೋಪಿತರಿಂದ ಅಂದಾಜು ಮೌಲ್ಯ 2,25,000/- ರೂಗಳ ಒಟ್ಟು 04 ಕೆಜಿ 470 ಗ್ರಾಂ ತೂಕದ ಒಣ ಗಾಂಜಾವನ್ನು ಅಮಾನತ್ತು ಪಡಿಸಿಕೊಂಡು ಆರೋಪಿತರಿಂದ ಸಿಇಎನ್ ಪೊಲೀಸ್ ಠಾಣೆ ಗುನ್ನೆ ಸಂಖ್ಯೆ 0009/2024  ಕಲಂ 20 (ಬಿ) (2) ಬಿ ಎನ್.ಡಿ.ಪಿ.ಎಸ್ ಕಾಯ್ದೆ ರೀತ್ಯಾ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ ಎಂದು ಪ್ರಕಟಣೆಯಲ್ಲಿ ತಿಳಿಸಲಾಗಿದೆ. 


ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor