ಆರಂಭದಲ್ಲಿ ಬಂತು 1000 ರೂ.ಗೆ 200 ರೂ. ಲಾಭ: ನಂತರ ಕಳೆದುಕೊಂಡಿದ್ದೆಷ್ಟು ಲಕ್ಷ ಗೊತ್ತಾ..?

prathapa thirthahalli
Prathapa thirthahalli - content producer

Shivamogga cyber crime :ಶಿವಮೊಗ್ಗ ಜಿಲ್ಲೆಯ ಸಾಗರ ಮೂಲದ ವ್ಯಕ್ತಿಯೊಬ್ಬರಿಗೆ ಆನ್‌ಲೈನ್‌ನಲ್ಲಿ ಹೆಚ್ಚಿನ ಲಾಭಾಂಶದ ಆಸೆ ತೋರಿಸಿ ಸೈಬರ್ ವಂಚಕರು ಬರೋಬ್ಬರಿ 2,62,650 ಲಕ್ಷ ರೂಪಾಯಿ ವಂಚಿಸಿರುವ ಘಟನೆ ವರದಿಯಾಗಿದೆ.

ಅಪರಿಚಿತರು ಮೊದಲು  ದೂರುದಾರ  ವ್ಯಕ್ತಿಯನ್ನು Work Online ಎಂಬ ಟೆಲಿಗ್ರಾಂ ಗುಂಪಿಗೆ ಸೇರಿಸಿದ್ದರು. ಗುಂಪಿನಲ್ಲಿ ಕಳುಹಿಸುತ್ತಿದ್ದ ಟಾಸ್ಕ್ ಲಿಂಕ್‌ಗಳನ್ನು ಗಮನಿಸಿದ ವ್ಯಕ್ತಿ ಕುತೂಹಲದಿಂದ ವಂಚಕರು ಕಳುಹಿಸಿದ ಒಂದು ಲಿಂಕ್ ಕ್ಲಿಕ್ ಮಾಡಿದ್ದಾರೆ. ನಂತರ ವಂಚಕರು  ಅವರಿಗೆ ಹೋಟೆಲ್ ರಿವ್ಯೂ ಮಾಡುವ ಟಾಸ್ಕ್ ನೀಡಲಾಯಿತು ಮತ್ತು ಅದಕ್ಕಾಗಿ ಮೊದಲು 1,000 ಹಣವನ್ನು ಯುಪಿಐ ಐಡಿಗೆ ಪಾವತಿಸುವಂತೆ ಹೇಳಿದ್ದರು. ಹಣ ಪಾವತಿಸಿ ರಿವ್ಯೂವ್ ಮಾಡಿದ ನಂತರ, ವಂಚಕರು 200 ಲಾಭಾಂಶದೊಂದಿಗೆ ಹಣ ಹಿಂದಿರುಗಿಸಿ ನಂಬಿಕೆ ಗಳಿಸಿದರು. ಅದೇ ದಿನ ಮತ್ತೊಮ್ಮೆ 3,000 ಪಾವತಿಸಿ ರಿವ್ಯೂವ್ ಮಾಡಿದಾಗ, 2,100 ಲಾಭಾಂಶ ನೀಡಿ ಸಂಪೂರ್ಣ ವಿಶ್ವಾಸ ಗಳಿಸಿದರು.

Shivamogga cyber crime ನಂತರ ಮತ್ತೊಬ್ಬ ವ್ಯಕ್ತಿ ಖರೀದಿ ಮಾಡಿದರೆ ಹೆಚ್ಚಿನ ಲಾಭಾಂಶ ಬರುತ್ತದೆ ಎಂದು ನಂಬಿಸಿ, ಆ ವ್ಯಕ್ತಿಯ ಹೆಸರಿನಲ್ಲಿ ಒಂದು ಐಡಿ ರಚಿಸಿದರು. ಕಾಯಿನ್ ಖರೀದಿ ಮಾಡುವಾಗ ಮತ್ತು ವಿತ್‌ಡ್ರಾ ಮಾಡುವಾಗ ಪ್ರೊಫೈಲ್‌ನಲ್ಲಿ ಬ್ಯಾಲೆನ್ಸ್ ತೋರಿಸುತ್ತದೆ ಎಂದು ತಿಳಿಸಿ, ವಂಚಕರು ವಿವಿಧ ಯುಪಿಐ ಐಡಿಗಳನ್ನು ನೀಡಿದರು. ಇದರ ಮಾತು ನಂಬಿದ ಸಂತ್ರಸ್ತರು ತಮ್ಮ ಖಾತೆಯಿಂದ ಹಾಗೂ ತಮ್ಮ ಸ್ನೇಹಿತರ ಖಾತೆಗಳಿಂದ ಹಂತ ಹಂತವಾಗಿ ಒಟ್ಟು 2,62,650 ಹಣವನ್ನು ವಂಚಕರ ವಿವಿಧ ಯುಪಿಐ ಐಡಿಗಳಿಗೆ ವರ್ಗಾಯಿಸಿದ್ದಾರೆ.

ಇಷ್ಟು ದೊಡ್ಡ ಮೊತ್ತವನ್ನು ಹಾಕಿದ ನಂತರ, ಐಡಿಯ ಪ್ರೊಫೈಲ್‌ನಲ್ಲಿ ಲಾಭಾಂಶ ಸೇರಿ 4,29,225 ಮೊತ್ತ ತೋರಿಸಿದ್ದು, ಸಂತ್ರಸ್ತರು ಹಣ ವಿತ್‌ಡ್ರಾ ಮಾಡಲು ಪ್ರಯತ್ನಿಸಿದಾಗ ಅದು ಸಾಧ್ಯವಾಗಿಲ್ಲ. ವಂಚಕರನ್ನು ವಿಚಾರಿಸಿದಾಗ, “ಟ್ರಯಲ್ ಉದ್ದೇಶಕ್ಕೆ ಎರಡು ಬಾರಿ 3,000 ವಿತ್‌ಡ್ರಾ ಮಾಡಬೇಕಿತ್ತು, ನೀವು ಒಂದು ಸಲ ಮಾತ್ರ ಮಾಡಿದ್ದರಿಂದ ನಿಮ್ಮ ಐಡಿ ಫ್ರೀಜ್ ಆಗಿದೆ. ಅದನ್ನು ಪುನಃ ಸಕ್ರಿಯಗೊಳಿಸಲು ನೀವು ಇನ್ನೂ 4,29,225 ಕಟ್ಟಬೇಕು, ಎಂದು ಹೇಳಿ ವಂಚಕರು ಕೈತಪ್ಪಿಸಿಕೊಂಡಿದ್ದಾರೆ. ಮೊದಲು ಸಣ್ಣ ಲಾಭಾಂಶ ತೋರಿಸಿ, ನಂತರ ಕಾಯಿನ್ ಖರೀದಿ ನೆಪದಲ್ಲಿ ಲಕ್ಷಾಂತರ ರೂಪಾಯಿ ಮೋಸದಿಂದ ವರ್ಗಾಯಿಸಿಕೊಂಡಿರುವ ಬಗ್ಗೆ ಸಂತ್ರಸ್ತ ವ್ಯಕ್ತಿ ಶಿವಮೊಗ್ಗದ ಸಿಇಎನ್​ ಪೊಲೀಸ್​ ಠಾಣೆಯಲ್ಲಿ ದೂರನ್ನು ದಾಖಲಿಸಿದ್ದಾರೆ.

Shivamogga cyber crime

Share This Article