SHIVAMOGGA | Dec 21, 2023 | ಶಿವಮೊಗ್ಗದ ಪ್ರತಿಷ್ಟಿತ ಕುವೆಂಪು ವಿಶ್ವವಿದ್ಯಾಲಯದ ಅಧಿಕೃತ ವೆಬ್ಸೈಟ್ ಹ್ಯಾಕ್ ಆಗಿರುವ ಬಗ್ಗೆ ಮಾಹಿತಿಯೊಂದು ಹೊರಬಿದಿದ್ದೆ. Save palestine ಎಂಬ ಬರಹ ಬರುವಂತೆ ಕುವೆಂಪು ವಿವಿ ವೆಬ್ ಸೈಟ್ ಹ್ಯಾಕ್ ಮಾಡಲಾಗಿದೆ. ನಿನ್ನೆ ರಾತ್ರಿ ಈ ಕೃತ್ಯವೆಸಗಲಾಗಿದೆ ಎಂದು ತಿಳಿದು ಬಂದಿದೆ.
ಇನ್ನೂ ಈ ರೀತಿ ಆದ ಬಳಿಕ ಕುವೆಂಪು ವಿವಿ ವೆಬ್ಸೈಟ್ ಓಪನ್ ಆಗುತ್ತಿಲ್ಲ ಎಂಬ ದೂರುಗಳು ಸಹ ಕೇಳಿಬಂದಿದೆ. ಇನ್ನೂ ಮಾಧ್ಯಮ ವರದಿ ಪ್ರಕಾರ, ಕಲೀಮಲ್ಯಾಂಗ್ ಬ್ಲಾಕ್ ಹ್ಯಾಟ್ ಟೀಂ ಎಂಬ ಗ್ಯಾಂಗ್ ಈ ಕೃತ್ಯವೆಸಗಿದೆ ಎನ್ನಲಾಗುತ್ತಿದೆ.
ಸೇವ್ ಪ್ಯಾಲೆಸ್ಟೈನ್- ಇಸ್ರೇಲ್ ಡಾಗ್ ಎಂದು ವೆಬ್ಸೈಟ್ ನಲ್ಲಿ ಹ್ಯಾಕರ್ಸ್ ನಮೂದಿಸಿದ್ದಾರೆ. ಇನ್ನೂ ಈ ಘಟನೆ ಬೆನ್ನಲ್ಲೆ ವೆಬ್ಸೈಟ್ ನ್ನ ವಿವಿ ಟೆಕ್ನಿಕಲ್ ಟೀಂ ಡೌನ್ ಮಾಡಿದೆ. ಅಲ್ಲದೆ ಈ ಸಂಬಂಧ ಪೊಲೀಸರಿಗೆ ದೂರು ನೀಡುವ ಪ್ರಯತ್ನಗಳು ನಡೆಯುತ್ತಿವೆ ಎಂಬ ಮಾಹಿತಿ ಲಭ್ಯವಾಗಿದೆ.