ಕ್ರಿಪ್ಟೋ ಟ್ರೇಡಿಂಗ್ ನೆಪದಲ್ಲಿ  ಶಿವಮೊಗ್ಗ ವ್ಯಕ್ತಿಗೆ 2.66 ಲಕ್ಷ ವಂಚನೆ

Published: 16 ಅಕ್ಟೋಬರ್ 2025, 10:44 ಫೂರ್ವಾಹ್ನ • 1 min read

▶️
ಸುದ್ದಿ ಆಲಿಸಿ




✨ AI ಓವರ್‌ವ್ಯೂ (ಮುಖ್ಯಾಂಶ)

ಶಿವಮೊಗ್ಗ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,66,069 ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ  ವ್ಯಕ್ತಿ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ದೂರುದಾರರ  ಮೊಬೈಲ್​ಗೆ  ಅಕ್ಟೋಬರ್ 02, ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ಈ ಸಂದೇಶದಲ್ಲಿ, ತಮ್ಮನ್ನು…

ಶಿವಮೊಗ್ಗ: ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಅಧಿಕ ಲಾಭಾಂಶದ ಆಮಿಷವೊಡ್ಡಿ ಶಿವಮೊಗ್ಗದ ವ್ಯಕ್ತಿಯೊಬ್ಬರಿಂದ ಬರೋಬ್ಬರಿ 2,66,069 ಹಣವನ್ನು ಪಡೆದು ವಂಚಿಸಿರುವ ಘಟನೆ ಬೆಳಕಿಗೆ ಬಂದಿದೆ. ಈ ಸಂಬಂಧ  ವ್ಯಕ್ತಿ ಶಿವಮೊಗ್ಗದ ಸಿಇಎನ್ ಕ್ರೈಂ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರುದಾರರ  ಮೊಬೈಲ್​ಗೆ  ಅಕ್ಟೋಬರ್ 02, ರಂದು ಅಪರಿಚಿತ ಸಂಖ್ಯೆಯಿಂದ ಸಂದೇಶವೊಂದು ಬಂದಿದೆ. ಈ ಸಂದೇಶದಲ್ಲಿ, ತಮ್ಮನ್ನು Live Trading ಕಂಪನಿಯವರು ಎಂದು ಪರಿಚಯಿಸಿಕೊಂಡ ವಂಚಕರು, ಕ್ರಿಪ್ಟೋ ಕರೆನ್ಸಿಯಲ್ಲಿ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭಂಶ ನೀಡುವುದಾಗಿ ನಂಬಿಸಿದ್ದಾರೆ.

ಈ ಆಮಿಷಕ್ಕೆ ಒಳಗಾದ ದೂರುದಾರರು  ಹಂತ ಹಂತವಾಗಿ ಒಟ್ಟು 2,66,069 ಹಣವನ್ನು ವಂಚಕರ ಖಾತೆಗೆ ವರ್ಗಾಯಿಸಿದ್ದಾರೆ. ಆದರೆ ವಂಚಕರು ಹಣವನ್ನು  ನೀಡದೆ ಲಾಭಾಂಶವನ್ನು ನೀಡದೆ ಮೋಸಮಾಡಿದ್ದಾರೆ ಎಂದು ದೂರುದಾರರು ಆರೋಪಿಸಿದ್ದಾರೆ.  

Crypto Trading Fraud 

END OF STORY

Prathapa thirthahalli

Senior Journalist | Malenadu Today
✓ Verified Journalist