ಬಂಡೀಪುರದಲ್ಲಿ ಹುಲಿ ಹಿಡಿಯಲು ಶಿವಮೊಗ್ಗದಿಂದ ಟ್ರ್ಯಾಪ್​ ಕೇಜ್ ಶಿಫ್ಟ್ | ಉಂಬ್ಳೆ ಬೈಲ್​ನಲ್ಲಿ ಶುರುವಾಯ್ತು ವ್ಯಾಘ್ರ ಆತಂಕ!

SHIVAMOGGA NEWS / Malenadu today/ Nov 27, 2023 | Malenadutoday.com  

SHIVAMOGGA   |  ಶಿವಮೊಗ್ಗ ಜಿಲ್ಲೆ ಭದ್ರಾವತಿಯ ಕಾರೇಹಳ್ಳಿಯಲ್ಲಿ ಇತ್ತೀಚೆಗೆಷ್ಟೆ ಬಲಿಷ್ಟವಾಗಿದ್ದ ಚಿರತೆಯೊಂದು ಸೆರೆಯಾಗಿತ್ತು. ಅದರ ವರದಿಯ ವಿವರ ಇಲ್ಲಿ ಲಿಂಕ್​ನಲ್ಲಿದೆ…ಭದ್ರಾವತಿ ಕಾರೇಹಳ್ಳಿಯಲ್ಲಿ ದೈತ್ಯ ಚಿರತೆ ಸೆರೆ! ನಾಯಿಯು ಸೇಫ್​! ಹೇಗಿದೆ ನೋಡಿ

ಇದರ ಬೆನ್ನಲ್ಲೆ ಚಿರತೆಗೆಂದು ತಂದಿದ್ಟ ಟ್ರ್ಯಾಪ್​ ಕೇಜನ್ನ ಬಂಡೀಪುರ ಹುಲಿ ಸಂರಕ್ಷಿತ ಅಭಯಾರಣ್ಯಕ್ಕೆ ಶಿಫ್ಟ್ ಮಾಡಲಾಗಿದೆ. ಅಲ್ಲಿ ರತ್ನಮ್​ ಎಂಬವರನ್ನು ಬಲಿ ಪಡೆದಿದ್ದ ಹುಲಿಯನ್ನು ಹಿಡಿಯುವ ಸಲುವಾಗಿ ಈ ಟ್ರ್ಯಾಪ್ ಕೇಜನ್ನ ಬಳಸಿಕೊಳ್ಳಲಾಗುತ್ತಿದೆ. 

ಈ ಮಧ್ಯೆ ಶಿವಮೊಗ್ಗದಲ್ಲಿಯು ಹುಲಿಯ ಕಾಟದ ಬಗ್ಗೆ ವರದಿ ಲಭ್ಯವಾಗಿದೆ. ಶಿವಮೊಗ್ಗ ಉಂಬ್ಳೆಬೈಲು  ಗ್ರಾಮ ಪಂಚಾಯಿತಿ ವ್ಯಾಪ್ತಿಯ ಸಾಲಿಗೆರೆ  ಗ್ರಾಮದ ಸುತ್ತಮುತ್ತ ಹುಲಿಯ ಆತಂಕವೊಂದು ಎದುರಾಗಿದೆ. 

READ : ಬನಶಂಕರಿ ದೇವಸ್ಥಾನದ ಬಳಿ ಕಾಣಿಸಿಕೊಂಡ ಮೂರು ಮೂರು ಚಿರತೆಗಳು!

ಇಲ್ಲಿ ಕೆಲದಿನಗಳಿಂದ ಹುಲಿ ಓಡಾಡುತ್ತಿರುವ ಬಗ್ಗೆ ಗ್ರಾಮಸ್ಥರು ಮಾತನಾಡಿಕೊಳ್ಳುತ್ತಿದ್ದು ಜಾನುವಾರುಗಳನ್ನ ಹುಲಿ ಹಿಡಿದುಕೊಂಡು ಹೋಗುತ್ತಿದೆ ಎಂದು ಸ್ಥಳೀಯರು ಹೇಳುತ್ತಿದ್ದಾರೆ. 

ಸಾಕ್ಷಿ ಎಂಬಂತೆ ಜಾನುವಾರು ಸಾವಿನ ದೃಶ್ಯಗಳು ಕಾಣ ಸಿಗುತ್ತಿದ್ದು, ಅರಣ್ಯ ಇಲಾಖೆಯ ಅಧಿಕಾರಿಗಳು ಸಹ ಈ ಬಗ್ಗೆ ಪರಿಶೀಲನೆ ನಡೆಸ್ತಿದ್ದಾರೆ  

Leave a Comment