ಕೋಟೆ, ದೊಡ್ಡಪೇಟೆ, ಜಯನಗರ , ಸಾಗರ ಗ್ರಾಮಾಂತರಕ್ಕೆ ಹೊಸ ಇನ್​ಸ್ಪೆಕ್ಟರ್​! ಡಿವೈಎಸ್​ಪಿ ವರ್ಗಾವಣೆ!

KARNATAKA NEWS / ONLINE / Malenadu today/ Nov 18, 2023 SHIVAMOGGA NEWS

Shivamogga | Malnenadutoday.com |   ರಾಜ್ಯಸರ್ಕಾರ 41 DYSP ಹಾಗೂ 71 PI ಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ. ಈ ಪೈಕಿ ಹಿಂದಿನ ವರ್ಗಾವಣೆಯಲ್ಲಿ ಆದ ಬದಲಾವಣೆಯಲ್ಲಿಯು, ಕೆಲವು ಚೆಂಜಸ್​ಗಳು ಆಗಿದ್ದು, ಸದ್ಯ ಸರ್ಕಾರದ ಆದೇಶದಲ್ಲಿ ಶಿವಮೊಗ್ಗದ ಮುಖ್ಯವಾಗಿ ನಾಲ್ಕು ಬದಲಾವಣೆಗಳು ಆಗಿವೆ 

ನಾಲ್ವರು ಪೊಲೀಸ್ ಇನ್​ಸ್ಪೆಕ್ಟರ್​ಗಳ ವರ್ಗಾವಣೆ

ರವಿ ಸಂಗನಗೌಡ ಪಾಟೀಲ್‌  ರವರನ್ನು ಸಿಐಡಿಯಿಂದ ಶಿವಮೊಗ್ಗ ನಗರದ ದೊಡ್ಡಪೇಟೆ ಪೊಲೀಸ್ ಸ್ಟೇಷನ್ (doddapete police station) ಪೊಲೀಸ್ ಇನ್​ಸ್ಪೆಕ್ಟರ್ ಆಗಿ ವರ್ಗಾವಣೆ ಮಾಡಲಾಗಿದೆ. 

ಇನ್ನೂ  ಪಿಟಿಎಸ್ ಖಾನಾಪುರ ಕ್ಕೆ ಟ್ರಾನ್ಸಫರ್ ಆದೇಶ ಹೊಂದಿದ್ದ ಸಿದ್ದೇಗೌಡ ಹೆಚ್​ಎಂ ರವರನ್ನು ಜಯನಗರ ಪೊಲೀಸ್ ಸ್ಟೇಷನ್ (jayanagara police station shivamogga) ಗೆ ವರ್ಗಾವಣೆ ಮಾಡಲಾಗಿದೆ.. 

ಉಳಿದಂತೆ   ಐಎಸ್​​ಡಿ ಗೆ ವರ್ಗಾವಣೆಗೊಂಡಿದ್ದ ರೋಹಿತ್ ಸಿಇ ರವರನ್ನು ಶಿವಮೊಗ್ಗ ಕೋಟೆ ಪೊಲೀಸ್ ಸ್ಟೇಷನ್ (Kote police station) ಗೆ ವರ್ಗಾವಣೆ ಮಾಡಲಾಗಿದೆ. 

ಕರ್ನಾಟಕ ಲೋಕಾಯುಕ್ತ ಕ್ಕೆ ವರ್ಗಾವಣೆ ಆದೇಶ ಹೊಂದಿದ್ದ ಚಂದ್ರಶೇಖರ್​ ಎನ್​ ಹರಿಹರ ರವರನ್ನು  ಶಿವಮೊಗ್ಗ ಸಾಗರ ಗ್ರಾಮಾಂತರ ವೃತ್ತ ಕ್ಕೆ ವರ್ಗಾವಣೆ ಮಾಡಲಾಗಿದೆ. 

ಓರ್ವ ಡಿವೈಎಸ್​ಪಿ ಟ್ರಾನ್ಸಫರ್​ 

ಇನ್ನೂ 41 ಡಿವೈಎಸ್​ಪಿಗಳ ಪೈಕಿ ಶಿವಮೊಗ್ಗದ ಡಿಸಿಆರ್​ಬಿಯಲ್ಲಿದ್ದ ಪ್ರಭುರವರನ್ನು  ಸಿಐಡಿ ಕಚೇರಿಗೆ ವರ್ಗಾವಣೆ ಮಾಡಲಾಗಿದೆ 


Leave a Comment