Good News ಮಲೆನಾಡು ಟುಡೆ ಸುದ್ದಿ, ಅಕ್ಟೋಬರ್ 3 2025: ಶುಭ ಶುಕ್ರವಾರ, ಧನಲಾಭದ ದಿನ ಇವತ್ತಿನ ದಿನವಿಶೇಷಗಳನ್ನು ಗಮನಿಸುವುದಾದರೆ. ವಿಶ್ವಾವಸು ನಾಮ ಸಂವತ್ಸರ ದಕ್ಷಿಣಾಯನ, ಏಕಾದಶಿ, ಶ್ರವಣ ನಕ್ಷತ್ರದ ಈ ದಿನ ರಾಹುಕಾಲ ಬೆಳಿಗ್ಗೆ 10:30 ರಿಂದ ಮಧ್ಯಾಹ್ನ 12:00 ರವರೆಗೆ ಇದೆ, ಶುಭ ಕಾಲ (ಅಮೃತ) ಮಧ್ಯಾಹ್ನ 12:55 ರಿಂದ 02:29 ರವರೆಗೆ ಇದೆ.
ಇವತ್ತಿನ ರಾಶಿಫಲ/ Good News
ಮೇಷ: ಆಪ್ತ ಸ್ನೇಹಿತರಿಂದ ಶುಭ ಸಮಾಚಾರ ಸಿಗುವುದು. ಹೊಸದೊಂದು ವರ್ತಮಾನ ತಲುಪುವುದು, ವಾಹನ ಖರೀದಿ. ಧನಲಾಭ, ವಿವಾದ ಸುಲಭವಾಗಿ ಇತ್ಯರ್ಥಗೊಳ್ಳುತ್ತವೆ. ವ್ಯವಹಾರದಲ್ಲಿ ಗಡಿ ವಿಸ್ತರಣೆ, ಉದ್ಯೋಗದಲ್ಲಿ ಅಡೆತಡೆ ನಿವಾರಣೆ ಆಗಲಿದೆ.
ವೃಷಭ: ಆರ್ಥಿಕವಾಗಿ ಕೆಲವು ಸಂಕಷ್ಟ. ಸಾಲ ತೀರಿಸುವ ಅಥವಾ ಹೊಸ ಸಾಲ ಪಡೆಯುವ ಪ್ರಯತ್ನ. ಅನಿರೀಕ್ಷಿತ ಪ್ರಯಾಣ. ಕೆಲವು ಸಮಸ್ಯೆ ಎದುರಾಗಲಿವೆ. ವ್ಯಾಪಾರವು ಸಾಮಾನ್ಯ ಗತಿಯಲ್ಲಿ ಸಾಗಲಿದೆ. ಉದ್ಯೋಗದಲ್ಲಿ ಬದಲಾವಣೆ ಎರಿಸಬೇಕಾಗುತ್ತದೆ.
ಮಿಥುನ: ಸಣ್ಣಪುಟ್ಟ ಭಿನ್ನಾಭಿಪ್ರಾಯ. ಆರೋಗ್ಯವು ಕೊಂಚ ಮಟ್ಟಿಗೆ ತೊಂದರೆ ನೀಡಬಹುದು. ಪ್ರಯಾಣ ಮುಂದೂಡುವುದು ಸೂಕ್ತ. ಯಶಸ್ಸಿಗಾಗಿ ಕಠಿಣ ಪರಿಶ್ರಮ, ವ್ಯವಹಾರದಲ್ಲಿ ಗೊಂದಲಮಯ ವಾತಾವರಣ, ಕೆಲಸದ ಸ್ಥಳದಲ್ಲಿ ಕೆಲಸದ ಒತ್ತಡ ಹೆಚ್ಚಳವಾಗಲಿದೆ.

ಕರ್ಕಾಟಕ: ಪ್ರಮುಖ ಮಾಹಿತಿಯನ್ನು ಸ್ವೀಕರಿಸಲಿದ್ದೀರಿ. ವಾಹನ ಮತ್ತು ಭೂಮಿಯನ್ನು ಕೊಂಡುಕೊಳ್ಳುವ ಯೋಗವಿದೆ. ವ್ಯಾಪಾರ-ವ್ಯವಹಾರ ಅತ್ಯಂತ ಲಾಭದಾಯಕವಾಗಿ ಮಾರ್ಪಾಡಾಗಲಿವೆ. ಉದ್ಯೋಗ ಕ್ಷೇತ್ರದಲ್ಲಿ ನಿರೀಕ್ಷಿಸಿದ ಬದಲಾವಣೆ ನಡೆಯಲಿವೆ.
ಸಿಂಹ: ಹೊಸ ಉದ್ಯೋಗ.ಮಹತ್ವದ ಸಂಗತಿಗಳು ತಿಳಿಯಲಿವೆ. ಮನರಂಜನೆಯಲ್ಲಿ ಪಾಲ್ಗೊಳ್ಳುವಿರಿ ಯಶಸ್ಸು ಕಟ್ಟಿಟ್ಟ ಬುತ್ತಿ. ಪುಣ್ಯಕ್ಷೇತ್ರಗಳಿಗೆ ಭೇಟಿ. ಉದ್ಯೋಗದಲ್ಲಿ ಸ್ಥಾನಮಾನ ಹೆಚ್ಚಾಗುವ ಸೂಚನೆಗಳಿವೆ.
ಕನ್ಯಾ: ಕೈಗೆತ್ತಿಕೊಂಡ ಕೆಲಸ ಮುಂದೂಡಲ್ಪಡುವವು. ಸಾಧಿಸಲು ಹೆಚ್ಚು ಶ್ರಮ ವಹಿಸಬೇಕಾಗಬಹುದು. ಪ್ರಯಾಣದ ಯೋಜನೆಗಳಲ್ಲಿ ಕೆಲವು ಬದಲಾವಣೆ. ಸಣ್ಣ ಆರೋಗ್ಯ ಸಮಸ್ಯೆ ಕಾಡಬಹುದು. ದೂರದ ಬಂಧುಗಳ ಭೇಟಿ ಮಾಡುವ ಅವಕಾಶವಿದೆ. ವ್ಯಾಪಾರದಲ್ಲಿ ನಿರೀಕ್ಷಿತ ಮುನ್ನಡೆ. ಉದ್ಯೋಗದಲ್ಲಿ ಹೊಸ ಆಶಯ.
ತುಲಾ: ಅನಿರೀಕ್ಷಿತ ಖರ್ಚು. ಬಂಧು ಮಿತ್ರರೊಂದಿಗೆ ಸಣ್ಣಪುಟ್ಟ ವಾಗ್ವಾದ. ದೇಗುಲಗಳಿಗೆ ಭೇಟಿ, ಆರೋಗ್ಯದಲ್ಲಿ ಸಮಸ್ಯೆ.. ವ್ಯಾಪಾರದಲ್ಲಿ ನಿರಾಸೆ. ಕೆಲಸದಲ್ಲಿ ಹೆಚ್ಚುವರಿ ಜವಾಬ್ದಾರಿ
ವೃಶ್ಚಿಕ: ಸ್ನೇಹಿತರು ಮತ್ತು ಹಿತೈಷಿಗಳಿಂದ ಸಂತಸದ ಸುದ್ದಿ ಕೇಳುವಿರಿ. ವಾಹನ ಬಳಕೆಯಲ್ಲಿ ಜಾಗ್ರತೆ ಇರಲಿ. ಆಸ್ತಿ ವಿವಾದ. ಹೊಸ ಶೈಕ್ಷಣಿಕ ಅವಕಾಶಗಳು (Opportunity) ನಿಮ್ಮ ಮುಂದೆ ಬರಲಿವೆ. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗ ಕ್ಷೇತ್ರದಲ್ಲಿ ಅನಿರೀಕ್ಷಿತ ಬದಲಾವಣೆ
ಧನು: ದೂರ ಪ್ರಯಾಣ. ಕುಟುಂಬ ಸದಸ್ಯರೊಂದಿಗೆ ಕೆಲವು ಭಿನ್ನಾಭಿಪ್ರಾಯ. ಅನಾರೋಗ್ಯ (Symptoms). ವಿಚಿತ್ರ ಘಟನೆ ನಡೆಯುವ ಸಾಧ್ಯತೆ ಇದೆ. ವ್ಯಾಪಾರ ಸಾಧಾರಣ. ಉದ್ಯೋಗಗಳಲ್ಲಿ ಅಧಿಕ ಜವಾಬ್ದಾರಿ ಒತ್ತಡ ತಂದಿಡಲಿದೆ.
ಮಕರ: ಪ್ರಮುಖ ವಿಚಾರ ಸಲೀಸಾಗಿ (Seamlessly) ನೆರವೇರಲಿವೆ. ಪ್ರೀತಿಪಾತ್ರರಿಂದ ಒಳ್ಳೆಯ ಸುದ್ದಿ ಸಿಗಲಿದೆ. ಮಾತುಕತೆಗಳಲ್ಲಿ (Negotiation) ಜಯ. ಮನೆ ಖರೀದಿ ಬಗ್ಗೆ ಚಿಂತನೆ. ಶೈಕ್ಷಣಿಕ ಕ್ಷೇತ್ರದಲ್ಲಿ ಉತ್ತಮ ಅವಕಾಶ. ವ್ಯಾಪಾರದಲ್ಲಿ ಉತ್ತಮ ಲಾಭ. ಉದ್ಯೋಗದಲ್ಲಿ ನಿಶ್ಚಿತ ಪ್ರಗತಿ.

ಕುಂಭ: ಸ್ನೇಹಿತರು ಮತ್ತು ಸಂಬಂಧಿಕರೊಂದಿಗೆ ಸಣ್ಣವಾದ. ಕೌಟುಂಬಿಕ ಒತ್ತಡ ಹೆಚ್ಚಾಗಲಿವೆ. ಆಧ್ಯಾತ್ಮಿಕ ಚಿಂತನೆ. ವಿದ್ಯಾರ್ಥಿಗಳಿಗೆ ಕೆಲಸದ ಒತ್ತಡ. ವ್ಯಾಪಾರದಲ್ಲಿ ಅಲ್ಪ ಪ್ರಮಾಣದ ಲಾಭ, ಉದ್ಯೋಗದಲ್ಲಿ ಸಾಧಾರಣ ದಿನ
ಮೀನ: ಸಂತೋಷದ ಕೂಟ, ಮನರಂಜನೆಯ ಚಟುವಟಿಕೆಗಳಲ್ಲಿ ಭಾಗವಹಿಸುವಿರಿ. ಕೆಲಸ ಸಕಾಲದಲ್ಲಿ ಪೂರ್ಣಗೊಳ್ಳುವುದು. ಆಸ್ತಿ ವಿವಾದಗಳಿಗೆ ಪರಿಹಾರ. ವ್ಯಾಪಾರ ವಹಿವಾಟಿನಲ್ಲಿ ಅಭಿವೃದ್ಧಿ ಕಾಣುವಿರಿ. ಉದ್ಯೋಗದಲ್ಲಿ ಅನುಕೂಲಕರ ಪರಿಸ್ಥಿತಿ.
ಇಂದಿನ ರಾಶಿ ಭವಿಷ್ಯ, ಅಕ್ಟೋಬರ್ 3 2025 ಜಾತಕ, ಕನ್ನಡ ಪಂಚಾಂಗ, ಶುಕ್ರವಾರದ ರಾಶಿಫಲ, ಪಾಪಾಂಕುಶ ಏಕಾದಶಿ, ಆರ್ಥಿಕ ಲಾಭ ರಾಶಿ, ಉದ್ಯೋಗದಲ್ಲಿ ಬಡ್ತಿ, ಶುಭ ಸುದ್ದಿ , October 3 2025 Rashi Phala, Kannada Panchang, Papankusha Ekadashi, Daily Astrology, Financial gain zodiac, Career advancement horoscope, October 3 Astrology , Good News
Good News for These Zodiac Signs Rashi Bhavishya
ಇದನ್ನು ಸಹ ಓದಿ : ಮಧ್ಯರಾತ್ರಿ ರೂಮಿನೊಳಗೆ ಬಂದು ಮೈಕೈ ಮುಟ್ಟಿದ ಫ್ರಾಕ್ ಧರಿಸಿದ್ದ ಆಗಂತುಕ!
ಮಲೆನಾಡು ಟುಡೆ ಡಿಜಿಟಲ್ ನ್ಯೂಸ್ ಮೀಡಿಯಾ ಶಿವಮೊಗ್ಗವನ್ನೂ ಕೇಂದ್ರಿಕರಿಸಿಕೊಂಡು ಸ್ಥಳೀಯ ವಿಷಯಗಳಿಂದ, ಸಕಲ ವಿಚಾರಗಳನ್ನು ಜನರಿಗೆ ಮುಟ್ಟಿಸುವ ಮಾಹಿತಿ ಸಂಸ್ಥೆಯಾಗಿದೆ. ನೀವು ನಮ್ಮನ್ನು Facebook, whatsapp, whatsapp chanel , instagram, youtube, telegram , google business, malenadu today epaper, malenadutoday web ನಲ್ಲಿ ಬೆಂಬಲಿಸಬಹುದು.. ಸಾದ್ಯವಾದಷ್ಟು ನಮ್ಮ ಪ್ರಯತ್ನಕ್ಕೆ ನಿಮ್ಮ ಬೆಂಬಲವನ್ನು ನೀಡಿ..ಇಲ್ಲಿ ನಿಮ್ಮ ಸಹಕಾರವೇ ಮುಖ್ಯ