ಕುಡಿದಿದ್ದಿಯಾ ಬಸ್ ಹತ್ತಬೇಡ ಅಂದ ಕಂಡೆಕ್ಟರ್​! 112 ಗೆ ಕಂಪ್ಲೆಂಟ್ ಮಾಡಿದ ಪ್ಯಾಸೆಂಜರ್

ಮಲೆನಾಡು ಟುಡೆ ಸುದ್ದಿ : ಶಿವಮೊಗ್ಗದಲ್ಲಿ 112 ಪೊಲೀಸರಿಗೆ ಆಗಾಗ ಬರುವ ಸಮಸ್ಯೆಗಳು ಸ್ವತಃ ಅವರಿಗೆ ಸವಾಲಾಗಿರುತ್ತದೆ. ಹಾಗಿದ್ರೂ ಅನೇಕ ಸಮಸ್ಯೆಗಳನ್ನು ಅವರು ಸ್ಥಳದಲ್ಲಿಯೇ ಬಗೆಹರಿಸ್ತಾರೆ. ಇದು ಸಹ ಅಂತಹುದ್ದೆ ಒಂದು ಪ್ರಕರಣ. ಪ್ರಕರಣವೊಂದರಲ್ಲಿ ಶಿವಮೊಗ್ಗ ಜಿಲ್ಲೆ ಭದ್ರಾವತಿ ತಾಲ್ಲೂಕು ಓಲ್ಡ್​ ಟೌನ್​ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಬಸ್​ ಹತ್ತಲು ಮುಂದಾದ ಪ್ಯಾಸೆಂಜರ್​ ಒಬ್ಬರನ್ನ ಕಂಡೆಕ್ಟರ್ ಒಬ್ಬರು ತಡೆದಿದ್ದಾರೆ. ಪ್ಯಾಸೆಂಜರ್ ಮದ್ಯಪಾನ ಮಾಡಿದ್ದಾನೆ ಎಂದು ಆರೋಪಿಸಿದ ನಿರ್ವಾಹಕ ಆತನನ್ನ ಬಸ್ ಹತ್ತದಂತೆ ತಡೆದಿದ್ದಾನೆ. ಆ ಬಳಿಕ ಬಸ್​ ಮುಂದಕ್ಕೆ ಸಾಗಿದೆ. ಇದರಿಂದ ಸಿಟ್ಟಿಗೆದ್ದ ಪ್ರಯಾಣಿಕ ತನ್ನನ್ನು ಕುಡಿದಿದ್ದಾನೆ ಎಂದು ಹೇಳಿ ಬಸ್ ಹತ್ತಿಸಿಲ್ಲ ಎಂದು ಆರೋಪಿಸಿ 112 ಪೊಲೀಸರಿಗೆ ಕರೆ ಮಾಡಿದ್ದಾರೆ. ವಿಷಯ ತಿಳಿದು ಸ್ಥಳಕ್ಕೆ ಬಂದ ಪೊಲೀಸರಿಗೆ ನಡೆದ ಘಟನೆಯನ್ನು ವಿವರಿಸಿದ್ದಾರೆ. ಅಂತಿಮವಾಗಿ ಪೊಲೀಸರು ಈ ಕುರಿತಾಗಿ ಠಾಣೆಗೆ ಬಂದು ಕಂಪ್ಲೆಂಟ್ ಕೊಡಿ ವಿಚಾರಣೆ ನಡೆಸ್ತೇವೆ ಎಂದು ಹೇಳಿದ್ದಾರೆ. ಸದ್ಯ ಇಲ್ಲಿಗೆ ಪ್ರಕರಣಕ್ಕೆ ತಾತ್ಕಾಲಿಕ ಬ್ರೇಕ್ ಬಿದ್ದಿದ್ದು ನೊಂದ ಪ್ರಯಾಣಿಕ ದೂರು ನೀಡುತ್ತಾರಾ ನೋಡಬೇಕಿದೆ.

Bus Conductor Alleges Passenger Drunk, Stops Boarding in Bhadravathi

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು