KARNATAKA NEWS/ ONLINE / Malenadu today/ Oct 27, 2023 SHIVAMOGGA NEWS
ಪ್ರೀತಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಆಕೆಯ ಫೋಟೋ, ವಿಡಿಯೋಗಳನ್ನ ಎಡಿಟ್ ಮಾಡಿ ಸೋಶಿಯಲ್ ಮೀಡಿಯಾದಲ್ಲಿ ಹರಿಬಿಟ್ಟ ಆರೋಪಕ್ಕೆ ಸಂಬಂಧಿಸಿದಂತೆ ಶಿವಮೊಗ್ಗ ಸಿಇಎನ್ ಠಾಣೆಯಲ್ಲಿ ದೂರು ದಾಖಳಲಾಗಿದೆ.
ವಿದ್ಯಾರ್ಥಿನಿಯೊಬ್ಬರಿಗೆ ಸೋಶಿಯಲ್ ಮೀಡಿಯಾದ ಮೂಲಕ ಒಬ್ಬಾತ ಪರಿಚಯವಾಗಿದ್ದನಂತೆ, ಆತ ಚಾಟ್ ಆರಂಭಿಸಿ ಮಾತನಾಡ್ತಾ ಸ್ವಲ್ಪದಿನಗಳ ಬಳಿಕ ಪ್ರೀತಿಸುವಂತೆ ತಿಳಿಸಿದ್ದನಂತೆ. ಆದರೆ ಇದಕ್ಕೆ ಯುವತಿ ನಿರಾಕರಿಸಿದ್ದಾಳೆ. ಈ ವೇಳೆ ನಿನ್ನ ಖಾಸಗಿ ಫೋಟೋ, ವಿಡಿಯೋ ಕಳುಹಿಸದಿದ್ದರೆ ಎಡಿಟ್ ಮಾಡಿದ ಅಶ್ಲೀಲ ಫೋಟೊಗಳನ್ನು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡುವುದಾಗಿ ಬೆದರಿಸಿದ್ದ.
ಇದಕ್ಕೆ ಬೆದರಿದ ವಿದ್ಯಾರ್ಥಿನಿ ಖಾಸಗಿ ಫೋಟೋ ವಿಡಿಯೋವನ್ನ ಕಳುಹಿಸಿ ಆತನ ನಂಬರ್ ಬ್ಲ್ಯಾಕ್ ಮಾಡಿದ್ದಳು. ಆದರೆ ಆತ ಸುಮ್ಮನಾಗದ ಆ ದೃಶ್ಯಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಷೇರ್ ಮಾಡಿದ್ದಾನೆ. ಇದರಿಂದ ನೊಂದ ಯುವತಿ ದೂರು ದಾಖಲಿಸಿದ್ದಾರೆ. ಸದ್ಯ ಆರೋಪಿಯ ಬೆನ್ನಬಿದ್ದಿದ್ದಾರೆ ಪೊಲೀಸರು.
READ : ಸರ್ಕಾರಿ ಶಾಲೆಯಲ್ಲಿ ಎಸ್.ಬಂಗಾರಪ್ಪರವರ ಜನ್ಮದಿನ | ಹುಲಿ ಉಗುರು ಬಗ್ಗೆ ಎಚ್ಚರಿಕೆ ನೀಡಿದ ಮಧು ಬಂಗಾರಪ್ಪ
ಎಲ್ಲ ಮಾಜಿ ಮುಖ್ಯಮಂತ್ರಿಗಳಿಗೂ ಇದೇ ಶ್ರೇಣಿಯ ಭದ್ರತೆ ನೀಡಲಾಗಿತ್ತು. ಆದರೆ, ಸರ್ಕಾರ ಸೆಪ್ಟೆಂಬರ್ ಅಂತ್ಯದ ವೇಳೆಗೆ ಭದ್ರತೆಯನ್ನು ವಾಪಸ್ ಪಡೆದಿತ್ತು. ಇದನ್ನ ಗಮನಿಸಿ ಕೇಂದ್ರ ಗುಪ್ತದಳ ಸರ್ಕಾರಕ್ಕೆ ಸೂಚಿಸಿದೆ. ಇನ್ನೂ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಬಿಎಸ್ವೈ ಮನವಿ ಮಾಡಿಲ್ಲ ಎನ್ನಲಾಗಿದೆ.
ಇನ್ನಷ್ಟು ಸುದ್ದಿಗಳು
ಆಸ್ಪತ್ರೆ Appointment ಗಾಗಿ 10 ರೂಪಾಯಿ Pay ಮಾಡಿದ ವ್ಯಕ್ತಿಗೆ ಕಾದಿತ್ತು ಶಾಕ್!
ಶಿವಮೊಗ್ಗ ಕೇಂದ್ರ ಕಾರಾಗೃಹದ ಮೇಲೆ ರೇಡ್ | ಸಿಕ್ತು ಮಂಗಳೂರು ಸ್ಪೇಷಲ್ 93 ಬೀಡಿ | ಕಾರ್ಬನ್ ಮೊಬೈಲ್!