ಮಲೆನಾಡು ಟುಡೆ ಸುದ್ದಿ, ಶಿವಮೊಗ್ಗ, ಸೆಪ್ಟೆಂಬರ್ 6 2025 : ಶಿವಮೊಗ್ಗದಲ್ಲಿ ಇಂದು ಹಿಂದೂ ಮಹಾ ಸಭಾ ಗಣಪತಿ ವಿಸರ್ಜನಾ ಮೆರವಣಿಗೆ ನಡೆಯಲಿದೆ. ಇದಕ್ಕಾಗಿ ಬಾರಿ ಸಿದ್ದತೆಗಳನ್ನು ಕೈಗೊಳ್ಳಲಾಗಿದೆ. ಇನ್ನೂ ಬಂದೋಬಸ್ತ್‌ಗಾಗಿ ದೊಡ್ಡ ಸಂಖ್ಯೆಯ ಪೊಲೀಸರನ್ನು ನಿಯೋಜಿಸಲಾಗಿದೆ. (deployed

ಇಂದು ನಡೆಯಲಿರುವ ಈ ಮೆರವಣಿಗೆಗೆ ಒಟ್ಟು 05 ಪೊಲೀಸ್ ಅಧೀಕ್ಷಕರು, 02 ಹೆಚ್ಚುವರಿ ಪೊಲೀಸ್ ಅಧೀಕ್ಷಕರು, 21 ಪೊಲೀಸ್ ಉಪಾಧೀಕ್ಷಕರು, 58 ಪೋಲಿಸ್ ನಿರೀಕ್ಷಕರು, 65 ಪೊಲೀಸ್ ಉಪ ನಿರೀಕ್ಷಕರು, 198 ತರಬೇತಿಯಲ್ಲಿರುವ ಪೊಲೀಸ್ ಉಪ ನಿರೀಕ್ಷಕರು, 114 ಸಹಾಯಕ ಪೊಲೀಸ್ ನಿರೀಕ್ಷಕರು, 2259 ಪೊಲೀಸ್ ಹೆಡ್ ಕಾನ್‌ಸ್ಟೆಬಲ್ ಮತ್ತು ಕಾನ್‌ಸ್ಟೆಬಲ್‌ಗಳು, ಹಾಗೂ 692 ಗೃಹರಕ್ಷಕ ದಳ ಸಿಬ್ಬಂದಿ ಸೇರಿದಂತೆ 3,425ಕ್ಕೂ ಹೆಚ್ಚು ಸಿಬ್ಬಂದಿಗಳನ್ನು ನಿಯೋಜಿಸಲಾಗಿದೆ. ಇದಲ್ಲದೆ, ಬಂದೋಬಸ್ತ್‌ಗೆ 01 RAF, 01 SAF, 08 DAR, 01 QRT ಮತ್ತು 10 KSRP ತುಕಡಿಗಳನ್ನು ಬಳಸಿಕೊಳ್ಳಲಾಗಿದೆ. (utilized)
ಬಂದೋಬಸ್ತ್ ಕರ್ತವ್ಯಕ್ಕೆ ನಿಯೋಜಿಸಲಾದ ಅಧಿಕಾರಿಗಳು ಹಾಗೂ ಸಿಬ್ಬಂದಿಗಳಿಗೆ ಎಸ್ಪಿ ಜಿ.ಕೆ. ಮಿಥುನ್‌ಕುಮಾರ್ ಅವರು ಸೆಪ್ಟೆಂಬರ್ 5ರಂದು ಸಂಜೆ ಶಿವಮೊಗ್ಗದ ಜಿಲ್ಲಾ ಸಶಸ್ತ್ರ ಕವಾಯತು ಮೈದಾನದಲ್ಲಿ ಸಭೆ ನಡೆಸಿ, ಅಗತ್ಯ ಸಲಹೆ ಮತ್ತು ಸೂಚನೆಗಳನ್ನು ನೀಡಿದರು. (instructed), ನಂತರ ನಗರದ ವಿವಿದೆಡೆ ರೂಟ್ ಮಾರ್ಚ್ ನಡೆಸಲಾಯಿತು.

Shivamogga Ganesha procession, police deployment, Hindu Maha Sabha, route march, Shivamogga police duty, Ganesha festival security, police deployment details, Mithun Kumar IPS, ಶಿವಮೊಗ್ಗ ಗಣೇಶ ವಿಸರ್ಜನೆ, ಬಂದೋಬಸ್ತ್, ಪೊಲೀಸ್ ನಿಯೋಜನೆ, ಹಿಂದೂ ಮಹಾ ಸಭಾ ಗಣಪತಿ,
Massive Police Deployment for Hindu Maha Sabha Ganesha procession

