ಶಿವಮೊಗ್ಗ: 100 ಅಡಿ ರಸ್ತೆಗೆ ಬಿದ್ದ  ಬೃಹತ್ ಮರ

ಹಂಚಿಕೊಳ್ಳಿ
WhatsApp Facebook X Telegram
Today news
Today news

Today news :  ಶಿವಮೊಗ್ಗ: 100 ಅಡಿ ರಸ್ತೆಗೆ ಬಿದ್ದ  ಬೃಹತ್ ಮರ, ಸಂಚಾರ ಅಸ್ತವ್ಯಸ್ತ

ಶಿವಮೊಗ್ಗ: ನಗರದ ಲಕ್ಷ್ಮೀ ಟಾಕೀಸ್ ಬಳಿ ಇರುವ 100 ಅಡಿ ರಸ್ತೆಯಲ್ಲಿ ಬೃಹತ್ ಮರವೊಂದು ಧರೆಗೆ ಉರುಳಿದ ಪರಿಣಾಮ ವಾಹನ ಸಂಚಾರ ಅಸ್ತವ್ಯಸ್ತಗೊಂಡಿದೆ. ಅದೃಷ್ಟವಶಾತ್, ಯಾವುದೇ ಪ್ರಾಣಹಾನಿ  ಸಂಭವಿಸಿಲ್ಲ.

ಇಂದು ಫ್ರೀಡಂ ಪಾರ್ಕ್‌ನ ಕಾಂಪೌಂಡ್ ಪಕ್ಕದಲ್ಲಿದ್ದ ದೊಡ್ಡ ಮರವು ಗಾಳಿ ಮತ್ತು ಮಳೆಯ ಕಾರಣದಿಂದಾಗಿ ರಸ್ತೆಗೆ ಅಡ್ಡಲಾಗಿ ಬಿದ್ದಿದೆ. ಮರ ಬಿದ್ದ ತಕ್ಷಣವೇ ಸಂಚಾರ ದಟ್ಟಣೆ ಉಂಟಾಯಿತು. ಟ್ರಾಫಿಕ್ ಸಿಗ್ನಲ್ ನಿಂದಾಗಿ ವಾಹನಗಳು ಕೆಲವು ಕ್ಷಣಗಳ ಹಿಂದೆ ಮುಂದೆ ಸಾಗಿದ್ದರಿಂದ, ಯಾವುದೇ ವಾಹನಗಳು ಮರ ಬಿದ್ದ ಸ್ಥಳದಲ್ಲಿ ಇರಲಿಲ್ಲ. ಈ ಕಾರಣದಿಂದಾಗಿ, ಭಾರಿ ಅನಾಹುತ ತಪ್ಪಿದಂತಾಗಿದೆ.

ಸದ್ಯ ಮರ ತೆರವುಗೊಳಿಸುವ ಕಾರ್ಯನಡೆಯುತ್ತಿದ್ದು. ಮರ ಬಿದ್ದಿರುವ ರಸ್ತೆಯ ಒಂದು ಭಾಗದಲ್ಲಿ ವಾಹನ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಲಾಗಿದೆ. ಇನ್ನೊಂದು ಭಾಗದಲ್ಲಿ ಎರಡೂ ದಿಕ್ಕಿನ ವಾಹನಗಳು ಸಂಚರಿಸುತ್ತಿವೆ.

Today news
ರಸ್ತೆಗೆ ಬಿದ್ದ ಮರ

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor