Bus accident : ಶಿಕಾರಿಪುರ ಬಳಿ ಬಸ್ ಅಪಘಾತ: ಪ್ರಯಾಣಿಕರಿಗೆ ಗಾಯ
ಶಿಕಾರಿಪುರ: ತಾಲೂಕಿನ ಸದಾಶಿವಪುರ ತಾಂಡಾ ಬಳಿಯ ಹೊನ್ನಾಳಿ ರಸ್ತೆಯಲ್ಲಿ ಖಾಸಗಿ ಬಸ್ ಒಂದು ಚಾಲಕನ ನಿಯಂತ್ರಣ ಕಳೆದುಕೊಂಡು ಕೆರೆಗೆ ಉರುಳಿದೆ. ಈ ಘಟನೆಯಲ್ಲಿ ಬಸ್ನಲ್ಲಿದ್ದ ಕೆಲವು ಪ್ರಯಾಣಿಕರಿಗೆ ಗಾಯಗಳಾಗಿವೆ ಎಂದು ತಿಳಿದುಬಂದಿದೆ
ಶಿವಮೊಗ್ಗದಿಂದ ಬಸವಾಸಿಗೆ ತೆರಳುತ್ತಿದ್ದ ಈ ಬಸ್, ಜೀನಹಳ್ಳಿ ಮತ್ತು ಶಿರಾಳಕೊಪ್ಪ ಮಾರ್ಗವಾಗಿ ಸಾಗುತ್ತಿತ್ತು. ಸದಾಶಿವಪುರ ತಾಂಡಾದ ಬಳಿ ಚಾಲಕನ ನಿಯಂತ್ರಣ ತಪ್ಪಿದ ಬಸ್, ರಸ್ತೆಯ ಪಕ್ಕದಲ್ಲಿದ್ದ ಕೆರೆಯ ದಂಡೆಗೆ ನುಗ್ಗಿ, ವಿದ್ಯುತ್ ಕಂಬಕ್ಕೆ ಡಿಕ್ಕಿ ಹೊಡೆದು ಕೆರೆಗೆ ಬಿದ್ದಿದೆ.
ಅಪಘಾತದಲ್ಲಿ ಗಾಯಗೊಂಡವರನ್ನು ತಕ್ಷಣವೇ ಸಾರ್ವಜನಿಕ ಆಸ್ಪತ್ರೆಗೆ ದಾಖಲಿಸಲಾಗಿದೆ.
