ಆ್ಯಂಕರ್​ ಅನುಶ್ರೀ ಮದುವೆಗೆ ಡೇಟ್​ ಫಿಕ್ಸ್​

Anchor anushree :  ಆ್ಯಂಕರ್​ ಅನುಶ್ರೀ ಮದುವೆಗೆ ಡೇಟ್​ ಫಿಕ್ಸ್​

ಕನ್ನಡದ ಪ್ರಸಿದ್ದ ನಿರೂಪಕಿ ಅನುಶ್ರೀ ಮದುವೆ ನಿಗದಿಯಾಗಿದ್ದು ಎಲ್ಲರಿಗೂ ಗೊತ್ತೇ ಇದೆ. ಆದರೆ ಮದುವೆ ದಿನಾಂಕ ಯಾವಾಗ ಎಂದು ಬಹಿರಂಗ ಗೊಂಡಿರಲಿಲ್ಲ. ಇದೀಗ ಆ್ಯಂಕರ್​ ಅನುಶ್ರೀ ಮದುವೆ ದಿನಾಂಕ ಬಹಿರಂಗಗೊಂಡಿದ್ದು ಆಗಸ್ಟ್ 28ರಂದು ಅನುಶ್ರೀ ದಾಂಪತ್ಯ ಜೀವನಕ್ಕೆ ಕಾಲಿಡಲಿದ್ದಾರೆ.

ಕೊಡಗು ಮೂಲದ ಉದ್ಯಮಿ ರೋಷನ್ ಎಂಬುವವರ ಜೊತೆ ಅನುಶ್ರೀ ಮದುವೆ ಆಗಲಿದ್ದು, ಆಗಸ್ಟ್ 28ರಂದು ಬೆಂಗಳೂರು ಹೊರವಲಯದ ರೆಸಾರ್ಟ್ ನಲ್ಲಿ ಬೆಳಗ್ಗೆ 10:56 ರ ಶುಭ ಮೂಹೂರ್ತದಲ್ಲಿ ಮದುವೆ ಕಾರ್ಯಕ್ರಮ ನೆರವೇರಲಿದೆ.  

Leave a Comment