Agricultural Sciences ಮಲೆನಾಡು ಟುಡೆ ಸುದ್ದಿ ವಿಶೇಷ : ನಮ್ಮ ವಿಜ್ಞಾನಿಗಳು ಆಗಾಗ ಅಚ್ಚರಿ ಎನ್ನುವಂತಹ ವಿಷಯಗಳನ್ನು ಸಂಶೋಧನೆ ಮಾಡುತ್ತಿರುತ್ತಾರೆ. ಇದೀಗ ಅಂತದ್ದೆ ಒಂದು ಸಂಶೋಧನೆಯನ್ನು ಮಾಡಿದ್ದು, ಆ ವಿಚಾರ ನಿಜಕ್ಕೂ ಹೌದಾ! ಅಂತಾ ಕೇಳುವ ಹಾಗೆ ಮಾಡುತ್ತದೆ. ಏಕೆಂದರೆ, ವಿಜ್ಞಾನಿಗಳ ಸಂಶೋಧನೆಯು ನಮ್ಮ ದಿನನಿತ್ಯದ ಜೀವನದ ಭಾಗವಾಗಿರುವ ವಸ್ತುಗಳ ಮೇಲೆ ನಡೆದಿದೆ. ಅದೇನು? ಇಷ್ಟಕ್ಕೂ ಆ ಸಂಶೋಧನೆಯಾದರೂ ಏನು ಎನ್ನುವುದನ್ನ ಹೇಳುವುದಾದರೆ, ಸದ್ಯ ನಾವೇನು ಆಲುಗಡ್ಡೆ ಅಥವಾ ಬಟಾಟೆ ಅಂಥಾ ಕರೆಯುತ್ತೇವೆ, ಅದು ಟೊಮ್ಯೋಟಾದಿಂದ ಹುಟ್ಟಿದೆ ಎನ್ನುವಂತಹ ಸಂಶೋಧನೆಯ ಸತ್ಯವನ್ನು ಇತ್ತೀಚೆಗೆ ಕಂಡುಕೊಳ್ಳಲಾಗಿದೆ.
Agricultural Sciences ಆಲೂಗಡ್ಡೆಯ ಉಗಮದ ಕುರಿತಾಗಿ ಇದ್ದ ರಹಸ್ಯವನ್ನು ಕೃಷಿ ವಿಜ್ಞಾಮನಿಗಳು ಈ ಮೂಲಕ ಬಯಲು ಮಾಡಿದ್ದಾರೆ. ಅಲ್ಲದೆ ಸುಮಾರು 9 ದಶಲಕ್ಷ ವರ್ಷಗಳ ಹಿಂದೆ ದಕ್ಷಿಣ ಅಮೆರಿಕದಲ್ಲಿ ಟೊಮ್ಯಾಟೊ ತರಹದ ಸಸ್ಯ ಮತ್ತು ಗೆಡ್ಡೆ ಬೆಳೆಯದ ಎಟುಬೆರೋಸಮ್ (Etuberosum,) ಎಂಬ ಸಸ್ಯಗಳಿಂದಾಗಿ ಈ ಆಲೂಗಡ್ಡೆ ಹುಟ್ಟಿಕೊಂಡಿದೆ ಎಂಬುದು ಸದ್ಯ ಹೊರಬಿದ್ದಿರುವ ಹೊಸ ವಾದ. interspecies union ನಿಂದ ಈ ಆಲೂಗಡ್ಡೆ ಹುಟ್ಟಿಕೊಂಡಿತು. ಆನಂತರ ಇದರ ವಿವಿಧ ವೈರೈಟಿಗಳು ಸೃಷ್ಟಿಯಾದವು ಎನ್ನುತ್ತಾರೆ ಕೃಷಿ ವಿಜ್ಞಾನಿಗಳು. ಎರಡು ಜಾತಿಯ ಸಂಯೋಗದಿಂದಾಗಿ ಗಡ್ಡೆ ಬಿಡುವ ಸಸ್ಯವೊಂದು ಉತ್ಪತ್ತಿಯಾಗಿದೆ ಎಂಬುದು ಆಲೂಗಡ್ಡೆ ಜನನ ರಹಸ್ಯದ ವಾದ. ಅಂದಹಾಗೆ, ಈ ಸಂಶೋಧನಾ ಸತ್ಯವನ್ನು ಚೀನೀ ಅಕಾಡೆಮಿ ಆಫ್ ಅಗ್ರಿಕಲ್ಚರಲ್ ಸೈನ್ಸಸ್ನ ಸನ್ವೆನ್ ಹುವಾಂಗ್ ನೇತೃತ್ವದ ವಿಜ್ಞಾನಿಗಳ ತಂಡ ಪತ್ತೆಹಚ್ಚಿದೆ.
ಇದನ್ನೂ ಓದಿ : ಶಿವಮೊಗ್ಗವೂ ಸೇರಿ 9 ಜಿಲ್ಲೆಗಳಿಗೆ ಯಲ್ಲೋ ಅಲರ್ಟ್! ಬೆಂಗಳೂರಲ್ಲೂ ಮಳೆ ಆರ್ಭಟ! https://malenadutoday.com/yellow-alert-issued-for-9-districts/
ಟೊಮ್ಯಾಟೊ ತಳಿಯಿಂದ ಬಂದ SP6A ಜೀನ್ ಗೆಡ್ಡೆ ರಚನೆಯನ್ನು ಪ್ರಾರಂಭಿಸುವ “ಮಾಸ್ಟರ್ ಸ್ವಿಚ್” ಆಗಿ ಕೆಲಸ ಮಾಡುತ್ತದೆ. ಅದೇ ಸಮಯದಲ್ಲಿ, ಎಟುಬೆರೋಸಮ್ನಿಂದ ಬಂದ IT1 ಜೀನ್ ಗೆಡ್ಡೆಗಳಾಗಿ ಬೆಳೆಯುವ ಭೂಗತ ಕಾಂಡಗಳ ಬೆಳವಣಿಗೆಯನ್ನು ನಿಯಂತ್ರಿಸುತ್ತದೆ. ಈ ಜೀನ್ ಗಳು ಒಂದಾಗಿ, ಆಲೂಗಡ್ಡೆಯು ಬೆಳೆಯಲು ಆರಂಭವಾಯ್ತು
ಸುಮಾರು 9 ದಶಲಕ್ಷ ವರ್ಷಗಳ ಹಿಂದೆ ಆಂಡಿಸ್ ಪರ್ವತಗಳಲ್ಲಿ ಇದು ಸೃಷ್ಟಿಯಾಗಿರಬಹುದು ಎಂಬದು ಮತ್ತೊಂದು ವಾದವಾಗಿದೆ. ಇದರ ಜೊತೆಗೆ ನಿಮಗೆ ಇನ್ನೊಂದು ವಿಷಯ ಗೊತ್ತಿರಲಿ ಜಗತ್ತಿನಲ್ಲಿ ಅಕ್ಕಿ, ಗೋದಿ ಬಿಟ್ಟರೆ ಅತಿ ಪ್ರಮುಖವಾದ ಬೆಳೆ ಅಂದರೆ, ಆಲೂಗಡ್ಡೆಯಂತೆ.
Agricultural Sciences

