KARNATAKA NEWS/ ONLINE / Malenadu today/ Aug 26, 2023 SHIVAMOGGA NEWS
ಶಿವಮೊಗ್ಗ ಜಿಲ್ಲೆ ಹೊಳೆಹೊನ್ನೂರಿನಲ್ಲಿ ಪ್ರೀತಿ ಪ್ರೇಮದ ವಿಚಾರವಾಗಿ ಹುಡುಗಿ ಕಡೆಯವರು ಹುಡುಗನ ಮೇಲೆ ಹಲ್ಲೆ ಮಾಡಿದ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೊಳೆಹೊನ್ನೂರು ಪೊಲೀಸ್ ಸ್ಟೇಷನ್ (Holehonur Police Station) ನಲ್ಲಿ ಪ್ರಕರಣ ದಾಖಲಾಗಿದೆ.
ಏನಿದು ಘಟನೆ ?
ಪವನ್ ಎಂಬಾತ ಯುವತಿಯೊಬ್ಬಳನ್ನ ಪ್ರೀತಿಸ್ತಿದ್ದನಂತೆ. ಆಕೆಯು ಪ್ರೀತಿಸುತ್ತಿದ್ದು, ಮನೆಯವರ ವಿರೋಧದಿಂದಾಗಿ ಪರಸ್ಪರ ದೂರಾಗಿದ್ದಾರೆ. ಈ ನಡುವೆ ನಿನ್ನೆ ಅಂದರೆ, ಆಗಸ್ಟ್ 25 ರಂದು ಪವನ್ ಬೈಕ್ನಲ್ಲಿ ಹೋಗುತ್ತಿದ್ದಾಗ ಆತನನ್ನ ಅಡ್ಡಗಟ್ಟಿ ಹುಡುಗಿ ಕಡೆಯವರು ಹಲ್ಲೆ ನಡೆಸಿದ್ಧಾರೆ. ಅಲ್ಲದೆ ಹುಡುಗಿಯ ಮನೆಗೆ ಕರೆದುಕೊಂಡು ಹೋಗಿ, ಅಲ್ಲಿದ್ದವರು ಹಿಗ್ಗಾಮುಗ್ಗಾ ಥಳಿಸಿದ್ಧಾರೆ ಎಂದು ದೂರಿನಲ್ಲಿ ಆರೋಪಿಸಿದ್ದು ಎಫ್ಐಆರ್ ದಾಖಲಾಗಿದೆ.
ಸದ್ಯ ಘಟನೆಯಲ್ಲಿ ಗಂಭೀರವಾಗಿ ಗಾಯಗೊಂಡಿರುವ ಪವನ್ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದು, ಅವರು ನೀಡಿದ ಹೇಳಿಕೆಯನ್ನು ಆಧರಿಸಿ ಎಫ್ಐಆರ್ ದಾಖಲಿಸಲಾಗಿದೆ
ಇನ್ನಷ್ಟು ಸುದ್ದಿಗಳು
ಬಾಯಿ ತಪ್ಪಿ ಆಡಿದ ಮಾತು! ಖರ್ಗೆ, ಖಂಡ್ರೆ ಬಗ್ಗೆ ಅಪಾರ ಗೌರವವಿದೆ ಎಂದರು ಮಾಜಿ ಗೃಹಸಚಿವ!
ಪ್ರತಿಭಟನೆ ಸಂದರ್ಭದಲ್ಲಿ ಆರಗ ಜ್ಞಾನೇಂದ್ರರವರು ಆಡಿದ ಮಾತು ವಿವಾದಕ್ಕೆ ಕಾರಣವಾಯ್ತಾ?
