Congress Government july 12,  ಭದ್ರಾವತಿ ಶಾಸಕ ಬಿಕೆ ಸಂಗಮೇಶ್​ ಪುತ್ರ ಬಿಎಸ್​ ಗಣೇಶ್​ಗೆ ಹೊಸ ಜವಾಬ್ದಾರಿ! ಕುತೂಹಲ ಮೂಡಿಸಿದ ಕಾಂಗ್ರೆಸ್ ಸರ್ಕಾರದ ನಡೆ 

ಹಂಚಿಕೊಳ್ಳಿ
WhatsApp Facebook X Telegram
Congress Government  bs ganesh
Congress Government  bs ganesh

Congress Government  ಭದ್ರಾವತಿ ಶಾಸಕ ಬಿಕೆ ಸಂಗಮೇಶ್​ ಪುತ್ರ ಬಿಎಸ್​ ಗಣೇಶ್​ಗೆ ಹೊಸ ಜವಾಬ್ದಾರಿ! ಕುತೂಹಲ ಮೂಡಿಸಿದ ಕಾಂಗ್ರೆಸ್ ಸರ್ಕಾರದ ನಡೆ 

Congress Government  ರಾಜ್ಯ ರಾಜಕಾರಣದಲ್ಲಿ ಸಾಕಷ್ಟು ಬದಲಾವಣೆಗಳನ್ನು ನೋಡುತ್ತಿದ್ದೇವೆ. ಇದರ ನಡುವೆ ಎರಡನೇ ಹಂತದ ರಾಜಕೀಯ ನಾಯಕರಿಗೆ ಸ್ಥಾನಮಾನಗಳನ್ನು ನೀಡುವ ಕೆಲಸಗಳು ನಡೆಯುತ್ತಿದೆ. ಇದಕ್ಕೆ ಪೂರಕ ಎಂಬಂತೆ ಭದ್ರಾವತಿ ಶಾಸಕ ಬಿ.ಕೆ ಸಂಗಮೇಶ್ ರವರ ಪುತ್ರ ಬಿಎಸ್​ ಗಣೇಶ್​ರವರನ್ನು ಶಿವಮೊಗ್ಗ ಜಿಲ್ಲಾ ಯೋಜನೆಗಳ ಅನುಷ್ಠಾನ ಸಮಿತಿಗೆ ನೇಮಿಸಿದೆ. ಈ ಹಿಂದೆ 13-03-2024 ರಂದು ರಚಿಸಿದ್ದ ಸಮಿತಿಗೆ ಭದ್ರಾವತಿ ಅರಳಹಳ್ಳಿಯ ಮಣಿ ಶೇಖರ್​ರವರನ್ನು ನೇಮಿಸಲಾಗಿತ್ತು. ಇದೀಗ 10.07.2025 ರಂದು ರಾಜ್ಯ ಸರ್ಕಾರ ಈ ಸಂಬಂಧ ಹೊಸದೊಂದು ಆದೇಶವನ್ನು ಹೊರಡಿಸಿದೆ. 

ಮಣಿ ಶೇಖರ್​ರವರ ಬದಲಾಗಿ ಬಿಎಸ್​ ಗಣೇಶ್​ರನ್ನು ಗ್ಯಾರಂಟಿ ಯೋಜನೆಗಳ ಅನುಷ್ಠಾನ ಸಮಿತಿಯ ಸದಸ್ಯರನ್ನ ನೇಮಿಸಲಾಗಿದೆ. ಭದ್ರಾವತಿ ರಾಜಕಾರಣದಲ್ಲಿ ಕಾಂಗ್ರೆಸ್ ಸರ್ಕಾರದ ಈ ನಡೆ ಸಾಕಷ್ಟು ಕುತೂಹಲವನ್ನು ಮೂಡಿಸುತ್ತಿದೆ. 

ಗ್ಯಾರಂಟಿ ಅನುಷ್ಠಾನ ಸಮಿತಿಗೆ ಸಂಬಂಧಿಸಿದಂತೆ ಮಹತ್ವದ ತಿದ್ದುಪಡಿ ಆದೇಶವನ್ನು ಹೊರಡಿಸಿರುವುದು, ಎರಡನೇ ಹಂತದ ನಾಯಕರನ್ನು ಸಕ್ರಿಯ ರಾಜಕಾರಣದಲ್ಲಿ ಸ್ಥಾನಮಾನ ಒದಗಿಸುವ ಪ್ರಾಥಮಿಕ ಪ್ರಕ್ರಿಯೆ ಎಂದು ಚರ್ಚೆಯಾಗುತ್ತಿದ್ದು, ಭದ್ರಾವತಿಯ ಸ್ಥಳೀಯರ ಮುಖಂಡರು ಬಿಎಸ್​ ಗಣೇಶ್​ರಿಗೆ ಅಭಿನಂದನೆಗಳನ್ನು ತಿಳಿಸಿದ್ದಾರೆ. 

Congress Government  bs ganesh
Congress Government  bs ganesh

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor