anandapura accident ಜುಲೈ 02 :  ಕೋಳಿ ತುಂಬಿದ್ದ ಲಾರಿ ಪಲ್ಟಿ : ಬಿದ್ದಿದ್ದ ಕೋಳಿಯನ್ನು ಹೊತ್ತೊಯ್ದ ಸ್ಥಳೀಯರು

ಹಂಚಿಕೊಳ್ಳಿ
WhatsApp Facebook X Telegram
anandapura accident
anandapura accident

anandapura accident :  ಕೋಳಿ ತುಂಬಿದ್ದ ಲಾರಿ ಪಲ್ಟಿ : ಬಿದ್ದಿದ್ದ ಕೋಳಿಯನ್ನು ಹೊತ್ತೊಯ್ದ ಸ್ಥಳೀಯರು

 ಶಿವಮೊಗ್ಗ: ಇಂದು ಬೆಳಿಗ್ಗೆ ಹೊಸೂರು-ಆನಂದಪುರ ನಡುವಿನ ರಾಷ್ಟ್ರೀಯ ಹೆದ್ದಾರಿ 206ರ ತಿರುವಿನಲ್ಲಿ ಕೋಳಿ ತುಂಬಿದ್ದ ಲಾರಿಯೊಂದು ಪಲ್ಟಿಯಾಗಿದೆ. ಪರಿಣಾಮ, ಸಾವಿರಾರು ಕೋಳಿಗಳು ರಸ್ತೆಯುದ್ದಕ್ಕೂ ಚೆಲ್ಲಾಪಿಲ್ಲಿಯಾಗಿ ಬಿದ್ದಿವೆ.

ಕಾರು ಅಡ್ಡ ಬಂದ ಕಾರಣ ಲಾರಿ ಚಾಲಕನ ನಿಯಂತ್ರಣ ತಪ್ಪಿ ಈ ಅಪಘಾತ ಸಂಭವಿಸಿದೆ. ಲಾರಿ ಪಲ್ಟಿಯಾದ ರಭಸಕ್ಕೆ ಹಲವಾರು ಕೋಳಿಗಳು ಸ್ಥಳದಲ್ಲೇ ಸಾವನ್ನಪ್ಪಿದ್ದರೆ, ಇನ್ನೂ ಹಲವು ಕೋಳಿಗಳು ಜೀವಂತವಾಗಿದ್ದವು. ಅಪಘಾತದ ಸುದ್ದಿ ತಿಳಿಯುತ್ತಿದ್ದಂತೆಯೇ ಸ್ಥಳೀಯ ಗ್ರಾಮಸ್ಥರು ತಂಡೋಪತಂಡವಾಗಿ ಆಗಮಿಸಿ, ರಸ್ತೆಯಲ್ಲಿ ಬಿದ್ದಿದ್ದ ಜೀವಂತ ಕೋಳಿಗಳನ್ನು ಉಚಿತವಾಗಿ ಮನೆಗಳಿಗೆ ಕೊಂಡೊಯ್ದರು.

anandapura accident

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor