kanthara chapter 1 movie : ಕಾಂತಾರ ಚಿತ್ರತಂಡಕ್ಕೆ ನೋಟಿಸ್​ ಜಾರಿ | 3 ದಿನಗಳ ಗಡುವು 

ಹಂಚಿಕೊಳ್ಳಿ
WhatsApp Facebook X Telegram
kanthara chapter 1 movie
kanthara chapter 1 movie

kanthara chapter 1 movie :  ಕಾಂತಾರ ಚಿತ್ರತಂಡ ಚಿತ್ರೀಕರಣ ನಡೆಸಲು ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಹೊಸನಗರ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿಲ್ಲ ಎಂದು  ಹೊಸನಗರ ತಹಶೀಲ್ದಾರ್ ರಶ್ಮೀ ಹಾಲೇಶ್ ಕಾಂತಾರ ಚಿತ್ರತಂಡಕ್ಕೆ ನೋಟಿಸ್​ ಜಾರಿ ಮಾಡಿದ್ದಾರೆ.

ಜೂನ್​ 15 ರಂದು ಶಿವಮೊಗ್ಗ ಜಿಲ್ಲೆ ಮಾಣಿ ಡ್ಯಾಂ ಹಿನ್ನೀರಿನಲ್ಲಿನ ನಿರ್ಬಂಧಿತ ವಲಯದಲ್ಲಿ ಕಾಂತಾರ 1 ಶೂಟಿಂಗ್ ನಡೆಯುತ್ತಿತ್ತು. ಆ ವೇಳೆ ದೋಣಿ ಮಗುಚಿ ಬಿದ್ದು ಸುಮಾರು 30 ಜನ ನೀರಿಗೆ ಬಿದ್ದಿದ್ದರು ಎನ್ನಲಾಗಿತ್ತು. ಇದರಿಂದಾಗ ಶಿವಮೊಗ್ಗದ ಜಿಲ್ಲಾಧಿಕಾರಿ ಗುರುದತ್ತ ಹೆಗ್ಗಡೆ ಕಾಂತಾರ ಚಿತ್ರತಂಡ ಚಿತ್ರೀಕರಣಕ್ಕೆ ಅನುಮತಿ ಪಡೆದಿದ್ದಾರೆಯೇ ಅಥವಾ ಇಲ್ಲವೇ ಎಂಬ ಕುರಿತು ಕಾಂತಾರ ಸಿನಿಮಾ ತಂಡಕ್ಕೆ ನೋಟಿಸ್ ನೀಡುವುದಾಗಿ ತಿಳಿಸಿದ್ದರು.ಹಾಗೆಯೇ ಅನುಮತಿ ಪಡೆದ ಸಂಬಂಧ ಮಾಹಿತಿ ನೀಡಲು ಹೊಸನಗರ ತಹಶೀಲ್ದಾರ್​ಗೆ  ಸೂಚಿಸಿದ್ದರು. ಇದೀಗ ಈ ಕುರಿತು ಹೊಸನಗರ ತಹಶಿಲ್ದಾರ್​ ಕಾಂತಾರ ಚಿತ್ರತಂಡಕ್ಕೆ ನೋಟಿಸ್​ ಜಾರಿ ಮಾಡಿದ್ದಾರೆ.

kanthara chapter 1 movie ನೋಟಿಸ್​ನಲ್ಲಿ ಏನಿದೆ

ಈ ಕುರಿತು ಹೊಸನಗರ ತಹಶೀಲ್ದಾರ್ ರಶ್ಮೀ ಹಾಲೇಶ್ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಕಾಂತಾರ ಸಿನಿಮಾದ ನಿರ್ಮಾಣ ಮೇಲ್ವಿಚಾರಕ ಚಿದಾನಂದ ಅವರಿಗೆ ನೋಟಿಸ್ ಜಾರಿ ಮಾಡಿದ್ದಾರೆ. ದೋಣಿ ಮಗುಚಿದ ಬಗ್ಗೆ ಎಲ್ಲೆಡೆ ವರದಿಯಾಗಿದೆ. ಚಿತ್ರೀಕರಣ ನಡೆಸಲು ಅನುಮತಿ ಪಡೆದಿರುವ ಬಗ್ಗೆ ನಿಮ್ಮ ಸಿನಿಮಾ ತಂಡ ಶಿವಮೊಗ್ಗ ಜಿಲ್ಲಾಡಳಿತ ಹಾಗೂ ಹೊಸನಗರ ತಾಲೂಕು ಆಡಳಿತಕ್ಕೆ ಮಾಹಿತಿ ನೀಡಿಲ್ಲ. ಮೊನ್ನೆ ನಡೆದ ಘಟನೆ ಬಗ್ಗೆ ಜಿಲ್ಲಾಧಿಕಾರಿಗಳು ವರದಿ ಕೇಳಿದ್ದಾರೆ. ಸಿನಿಮಾ ತಂಡವನ್ನು ನಗರ ಹೋಬಳಿಯ ಆರ್ ಐ  ಸಂಪರ್ಕಿಸಲು ಯತ್ನಿಸಿದರೂ ಸಾಧ್ಯವಾಗಿಲ್ಲ.ದೂರವಾಣಿ ಮೂಲಕ ಸಂಪರ್ಕಿಸಿದರೂ ಯಾವುದೇ ಸ್ಪಂದನೆ ನೀಡಿಲ್ಲ. ನೋಟಿಸ್ ತಲುಪಿದ 3 ದಿನದೊಳಗೆ ಸಮಾಜಾಯಿಷಿ ನೀಡಬೇಕು .ತಪ್ಪಿದರೇ, ಸಿನಿಮಾ ಚಿತ್ರೀಕರಣದ ಅನುಮತಿ ರದ್ಧತಿಗೆ ಶಿಫಾರಸು ಮಾಡುವುದಾಗಿ ನೋಟಿಸ್​ನಲ್ಲಿ ತಿಳಿಸಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor