today short news : olx ಮೂಲಕ ಲಕ್ಷಾಂತರ ರೂಪಾಯಿ ವಂಚನೆ ಸೇರಿದಂತೆ ಟಾಪ್​ 02 ಚಟ್​ಪಟ್ ಸುದ್ದಿ

OLX ಮುಖಾಂತರ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಗೆ ಲಕ್ಷಾಂತರ ರೂ. ವಂಚನೆ

OLX ಮೂಲಕ ಕಾರು ಖರೀದಿಸಲು ಹೋಗಿ ಶಿವಮೊಗ್ಗದ ಬ್ಯಾಂಕ್ ಉದ್ಯೋಗಿಯೊಬ್ಬರು ₹3.35 ಲಕ್ಷ ಕಳೆದುಕೊಂಡಿದ್ದಾರೆ. ತುಂಗಾ ನಗರ ಪೊಲೀಸ್ ಠಾಣೆಯಲ್ಲಿ ಈ ಬಗ್ಗೆ ಪ್ರಕರಣ ದಾಖಲಾಗಿದೆ.

ವ್ಯಕ್ತಿಯೊಬ್ಬ OLXನ ಲ್ಲಿ ಕಾರು ಮಾರಾಟಕ್ಕಿದೆ ಎಂದು ಜಾಹೀರಾತು ನೀಡಿದ್ದ. ಆತನ ಮಾತನ್ನು ನಂಬಿದ ಉದ್ಯೋಗಿ, ಮೊದಲು 6 ಸಾವಿರ ಮುಂಗಡವಾಗಿ ನೀಡಿದ್ದಾರೆ. ನಂತರ, ದೆಹಲಿಯಲ್ಲಿ ಕಾರಿದೆ ಎಂದು ಹೇಳಿ, ಉಳಿದ ₹3.35 ಲಕ್ಷವನ್ನು ಬ್ಯಾಂಕ್ ಖಾತೆಗೆ ಹಾಕಿಸಿಕೊಂಡಿದ್ದಾನೆ. ನಂತರ ಫೋನ್​ ಮಾಡಿದಾಗ ಜಾಹೀರಾತು​ ಫೋನ್​ ಸ್ವಿಚ್​ ಆಫ್​ ಮಾಡಿಕೊಂಡಿದ್ದಾನೆ, ಈ ಹಿನ್ನಲೆ ಉದ್ಯೋಗಿ  ಪೊಲೀಸರಿಗೆ ದೂರು ನೀಡಿದ್ದಾರೆ.

today short news : ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಕಾರು ಡಿಕ್ಕಿ: ಮಹಿಳೆಯ ಕಾಲು ಮುರಿತ

ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆ ಆವರಣದಲ್ಲಿ ಶುಕ್ರವಾರ ನಡೆದ ಘಟನೆಯಲ್ಲಿ, ವೈದ್ಯರೊಬ್ಬರು ಚಲಾಯಿಸುತ್ತಿದ್ದ ಕಾರು ಡಿಕ್ಕಿ ಹೊಡೆದು ಉಮಾ (41) ಎಂಬ ಮಹಿಳೆಯ ಕಾಲು ಮುರಿದಿದೆ.

today short news : ಚನ್ನಗಿರಿ ತಾಲೂಕಿನ ಹೊದಿಗೆರೆ ಗ್ರಾಮದ ಉಮಾ, ಗರ್ಭಕೋಶ ಚಿಕಿತ್ಸೆಗಾಗಿ ಒಂದು ವಾರದ ಹಿಂದೆ ಆಸ್ಪತ್ರೆಗೆ ದಾಖಲಾಗಿದ್ದರು. ಆಸ್ಪತ್ರೆಯ ಚೌಡಮ್ಮನ ದೇವಸ್ಥಾನದ ಬಳಿ ಅವರು ನಡೆದುಕೊಂಡು ಹೋಗುತ್ತಿದ್ದಾಗ, ಕಾರು ಡಿಕ್ಕಿ ಹೊಡೆದಿದೆ.

 

 

Leave a Comment

ಶಿವಮೊಗ್ಗ ಏರ್‌ಪೋರ್ಟ್ ಕಚೇರಿ ಉದ್ಘಾಟನೆ ಶಿವಮೊಗ್ಗ ಎಸ್​ಪಿ ನೈಟ್ ರೌಂಡ್ಸ್​ ಶಿವಮೊಗ್ಗಕ್ಕೆ ಬಂದ ಅಲೋಕ್​ ಕುಮಾರ್​ ಮಲೆನಾಡಲ್ಲಿ ಇಷ್ಟೆಲ್ಲಾ ಆಯ್ತು