ಸುದ್ದಿಯ ಸ್ಥಳ: Shivamogga district, Karnataka
shivamogga sp today
ಶಿವಮೊಗ್ಗ ಪೊಲೀಸ್ ವಿಭಾಗದ ದೊಡ್ಡಪೇಟೆ ಪೊಲೀಸ್ ಠಾಣೆಯ ಪೊಲೀಸರು, ವಿವಿಧ ಪ್ರಕರಣಗಳಲ್ಲಿ ವಾರಂಟ್ ಇಶ್ಯುವಾಗಿದ್ದ ಆರೋಪಿಗಳನ್ನು ಕೋರ್ಟ್ಗೆ ಹಾಜರು ಪಡಿಸಿದ್ದಾರೆ. ಪಿ.ಐ. ದೊಡ್ಡಪೇಟೆ ಪೊಲೀಸ್ ಠಾಣೆ ಹಾಗೂ ಪಿಎಸ್ಐ ಮಾರ್ಗದರ್ಶನ ದಲ್ಲಿ ಒಟ್ಟು 07 ಜನ ವಾರೆಂಟ್ ಆಸಾಮಿಗಳನ್ನು ದಸ್ತಗಿರಿ ಮಾಡಿದ್ದಾರೆ. ಸದ್ಯ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಈ ಸಂಬಂಧ ವಿಚಾರಣೆ ನಡೆಸಿದ ಕೋರ್ಟ್ ಆರೋಪಿಗಳನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದೆ. ಈ ವಿಚಾರದ ಕುರಿತಾಗಿ ಎಸ್ಪಿ ಮಿಥುನ್ ಕುಮಾರ್, ತಮ್ಮ ಅಧಿಕೃತ ಎಕ್ಸ್ ಅಕೌಂಟ್ @Shivamogga_SP ನಲ್ಲಿ ಮಾಹಿತಿಯನ್ನು ನೀಡಿದ್ದಾರೆ. @DgpKarnataka
