tribble raiding : ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ | ಭಯಾನಕ ವಿಡಿಯೋ ಹಂಚಿಕೊಂಡು ಎಚ್ಚರಿಕೆ ನೀಡಿದ ಪೊಲೀಸರು

tribble raiding ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ | ಭಯಾನಕ ವಿಡಿಯೋ ಹಂಚಿಕೊಂಡು ಎಚ್ಚರಿಕೆ ನೀಡಿದ ಪೊಲೀಸರು

tribble raiding ಕೆಲವೊಮ್ಮೆ ನಾವು ಅರ್ಜೆಂಟಿದೆ ಎಂಬ ಕಾರಣದಿಂದ ಒಂದು ಬೈಕ್​ನಲ್ಲಿ ಮೂರು ಜನ ಹೋಗುತ್ತಿರುತ್ತೇವೆ. ಇದು ಟ್ರಾಫಿಕ್​ ನಿಯಮದ ವಿರುದ್ದವಾಗಿದ್ದರೂ ಸಹ ಅದನ್ನು ನಾವು ಕ್ಯಾರೇ ಮಾಡುವುದಿಲ್ಲ. ಆದರೆ ಕೆಲವೊಮ್ಮೆ ತ್ರಿಬಲ್​ ರೈಡಿಂಗ್​ ಜೀವಕ್ಕೆ ಅಪಾಯ ತಂದೊಡ್ಡುತ್ತದೆ. ಅದಕ್ಕೆ ನಿದರ್ಶನ ವೆಂಬಂತೆ ಇಲ್ಲಿ ಮೂವರು ಯುವಕರು ಒಂದು ಬೈಕ್​ನಲ್ಲಿ ತ್ರಿಬಲ್​ ರೈಡಿಂಗ್​ ಹೋಗುತ್ತಿದ್ದು, ಬ್ಯಾಲೆನ್ಸ್​ ತಪ್ಪಿ ಮೋರಿಗೆ ಬಿದ್ದಿದ್ದಾರೆ.

tribble raiding
tribble raiding ತ್ರಿಬ್ಬಲ್​ ರೈಡಿಂಗ್​ ತಂದ ಆಪತ್ತು

ಶಿವಮೊಗ್ಗ ಟ್ರಾಫಿಕ್​ ಪೊಲಿಸರು ತಮ್ಮ x ಖಾತೆಯಲ್ಲಿ ಪೋಸ್ಟ್​ ಮಾಡಿರುವ ಈ ವಿಡಿಯೋದಲ್ಲಿ ಮೂವರು ಯುವಕರು ಒಂದು ಬೈಕ್​ನಲ್ಲಿ ಸ್ಪೀಡಾಗಿ ಹೋಗುತ್ತಿರುತ್ತಾರೆ. ಆಗ ಬೈಕ್​ನ ಬ್ಯಾಲೆನ್ಸ್​ ತಪ್ಪಿ ಇಬ್ಬರು ನೀರಿರುವ ಮೋರಿಗೆ ಬೀಳುತ್ತಾರೆ ಇನ್ನೊಬ್ಬ ಬೈಕ್​ನಿಂದ ಹಾರಿ ಬಚಾವಾಗುತ್ತಾನೆ. ಈ ವಿಡಿಯೋವನ್ನು ಹಂಚಿಕೊಂಡ ಪೊಲೀಸರು  ‘ತ್ರಿಬಲ್ ರೈಡಿಂಗ್ ಟ್ರಬಲ್ ಆದೀತು ಜೋಕೆ’ ಎಂಬ ಕ್ಯಾಪ್ಷನ್​ ಕೊಟ್ಟು ಸಂಚಾರಿ ನಿಯಮಗಳನ್ನು ಪಾಲಿಸದಿದ್ದರೆ ಆಗುವ ಅನಾಹುತಗಳ ಬಗ್ಗೆ ಎಚ್ವರಿಕೆ ನೀಡಿದ್ದಾರೆ.

 

Leave a Comment