dinesh gundu rao : ಕೋಮುವಾದ ಹೆಚ್ಚಾಗಲು ಕಾರಣ | ದಿನೇಶ್​ ಗುಂಡೂರಾವ್​

ಕೊನೆಯ ನವೀಕರಣ: 28 ಮೇ 2025, 4:22 ಅಪರಾಹ್ನ

ಹಂಚಿಕೊಳ್ಳಿ
WhatsApp Facebook X Telegram
dinesh gundu rao
dinesh gundu rao ಬಿಜೆಪಿ ವಿರುದ್ದ ದಿನೇಶ್​ ಗುಂಡೂರಾವ್​ ಆರೋಪ

dinesh gundu rao : ದಕ್ಷಿಣ ಕನ್ನಡದಲ್ಲಿ ಕೋಮುವಾದ ಹೆಚ್ಚಾಗಲು ಕಾರಣ ಎಂದು ಆರೋಗ್ಯ ಸಚಿವ ದಿನೇಶ್​ ಗುಂಡೂರಾವ್​ ಆರೋಪಿಸಿದರು.

ಇಂದು ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು ಮಂಗಳೂರಿನ ಪಿಕಪ್​ ಚಾಲಕ ರಹೀಂ ಕೊಲೆ ಆಗಿದ್ದು ಬಹಳ ನೋವಿನ ಸಂಗತಿ. ಮಂಗಳೂರಿನಲ್ಲಿ ಈ ರೀತಿ ಸರಣಿ ಹತ್ಯೆ ಆಗುತ್ತಿರುವುದು ಜಿಲ್ಲೆಗೆ ಕೆಟ್ಟ ಹೆಸರು. ಜಿಲ್ಲೆಯಲ್ಲಿ ಈ ತರಹದ ಘಟನೆ ಆಗೋಕೆ ಬಿಜೆಪಿ ಹಾಗೂ ಸಂಘ ಪರಿವಾರದ ಸಂಘಟನೆಗಳೇ ಕಾರಣ. ಇಂತಹ ವಿಚಾರದಲ್ಲಿ ಅವರು ಪ್ರಚೋದನಕಾರಿಯಾಗಿ ಬಾಷಣ ಮಾಡುತ್ತಾರೆ. ಬಿಜೆಪಿ ನಾಯಕರು ಇಂತಹ ಯಾರದ್ದೇ ಶವ ಸಿಕ್ಕರೂ ಅದರ ಮೇಲೆ ರಾಜಕೀಯ ಮಾಡುತ್ತಾರೆ. ಅದರಿಂದಾಗಿ ಇಂತಹ ಘಟನೆಗಳು ರಾಜ್ಯದಲ್ಲಿ ಹೆಚ್ಚುತ್ತಿವೆ ಎಂದು ಆರೋಪಿಸಿದರು.

ಈ ಘಟನೆಯಲ್ಲಿ ಇನ್ನೊಬ್ಬನಿಗೆ ಗಂಭೀರ ಗಾಯಗಳಾಗಿದೆ. ಪೊಲೀಸರಿಗೆ ಈಗಾಗಲೇ ಘಟನೆಯ ಪ್ರಾಥಮಿಕ ಸುಳಿವು ಸಿಕ್ಕಿದ್ದು, ಆರೋಪಿಗಳನ್ನು ಶೀಘ್ರವಾಗಿ ಬಂಧಿಸುತ್ತಾರೆ. ಸುಹಾಸ್ ಶೆಟ್ಟಿ ಪ್ರಕರಣದಲ್ಲಿ ಎಲ್ಲಾ ಆರೋಪಿಗಳನ್ನು ಬಂಧಿಸಲಾಗಿದೆ. ಇಲ್ಲಿ ಯಾರೇ ಹತ್ಯೆ ಆದ್ರೂ ಧರ್ಮ, ಜಾತಿ ಪ್ರಶ್ನೆ ಬರಲ್ಲ. ತಪ್ಪು ಮಾಡಿದ್ರೇ ಶಿಕ್ಷೆ ಆಗುತ್ತೆ. ಸಮಾಜವನ್ನು ಒಡೆಯುವುದಕ್ಕೆ ಕೋಮುವಾದ ಕಾರಣವಾಗಿದ್ದು, ಕೋಮುವಾದದ ವಿರುದ್ದ ಕಾನೂನು ಹೋರಾಟ ಹಾಗೂ ಸಾಮಾಜಿಕವಾದ ಹೋರಾಟ ಮಾಡಬೇಕಾಗುತ್ತೆ ಎಂದರು.

dinesh gundu rao : ಕೋವಿಡ್​ನ್ನು ಯಾರೂ ನಿರ್ಲಕ್ಷಿಸಬೇಡಿ

ಕೋವಿಡ್ ಇದ್ದೆ ಇರುತ್ತದೆ ಅದು ಅಂತಹ ದೊಡ್ಡ ಪರಿಣಾಮ ಬಿರುವುದಿಲ್ಲ . ಆದರೆ ಅದರಿಂದ ಎಲ್ಲರೂ ಎಚ್ಚರಿಕೆಯಿಂದ ಇರಬೇಕು ಅದನ್ನು ಯಾರು ಸಹ ನಿರ್ಲಕ್ಷಿಸಬಾರದು. ಜನ ಹೆಚ್ಚಿರುವ ಕಡೆ ಹೋದಾಗ ಕಡ್ಡಾಯವಾಗಿ ಮಾಸ್ಕ್ ಬಳಸಿ.ಉಸಿರಾಟದ ಸಮಸ್ಯೆ ಇದ್ದವರು ಕೊವೀಡ್ ಪರೀಕ್ಷೆ ಮಾಡಿಕೊಳ್ಳಬೇಕು.ಯಾರಿಗೆ ಜ್ವರ ಶೀತ ಬಂದಿದೆಯೋ ಅವರಿಗೆ ಶಾಲೆಗೆ ಕಳಿಸಬೇಡಿ ಎಂದಿದ್ದೇವೆ ಎಂದರು.

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor