itr filing due date extended ಟ್ಯಾಕ್ಸ್ ಪೆಯರ್ಗಳಿಗೆ ಕೇಂದ್ರ ಸರ್ಕಾರ ಗುಡ್ ನ್ಯೂಸ್ ನೀಡಿದೆ. ಕೇಂದ್ರ ಪ್ರತ್ಯಕ್ಷ ತೆರಿಗಾ ಮಂಡಳಿ (CBDT) 2025-26ನೇ ಆಯವ್ಯಯ ವರ್ಷಕ್ಕೆ ಸಂಬಂಧಿಸಿದಂತೆ ಆದಾಯ ತೆರಿಗೆ ಪಾವತಿಗೆ ಇದ್ದ (ITR) ಕೊನೆಯ ದಿನಾಂಕವನ್ನು ಜುಲೈ 31, 2025ರಿಂದ ಸೆಪ್ಟೆಂಬರ್ 15, 2025ಕ್ಕೆ ವಿಸ್ತರಿಸಿದೆ.
ಈ ವರ್ಷದ ITR ಫಾರ್ಮ್ಗಳಲ್ಲಿ ಗಮನಾರ್ಹ ಬದಲಾವಣೆಗಳ ಕಾರಣ ಈ ವಿಸ್ತರಣೆ ನೀಡಲಾಗಿದೆ. CBDT ಪ್ರಕಾರ, ಈ ಫಾರ್ಮ್ಗಳಲ್ಲಿ “ಸರಳೀಕರಣ, ಪಾರದರ್ಶಕತೆ ಮತ್ತು ನಿಖರವಾದ ವರದಿ ಸಲ್ಲಿಕೆಗಾಗಿ ರಚನಾತ್ಮಕ ಮತ್ತು ವಿಷಯಾತ್ಮಕ ಬದಲಾವಣೆಗಳನ್ನು” ಮಾಡಲಾಗಿದೆ.

itr filing due date extended
ಮೇ 27ರ ಪ್ರಕಟಣೆಯಲ್ಲಿ, ಈ ಬದಲಾವಣೆಗಳಿಗೆ “ಸಿಸ್ಟಮ್ ಅಭಿವೃದ್ಧಿ, ಸಂಯೋಜನೆ ಮತ್ತು ಸಂಬಂಧಿತ ಉಪಕರಣಗಳ ಪರೀಕ್ಷೆಗೆ ಹೆಚ್ಚಿನ ಸಮಯ ಬೇಕಾಗಿದೆ” ಎಂದು ಮಂಡಳಿ ತಿಳಿಸಿದೆ. ಮೇ 31ರೊಳಗೆ ದಾಖಲಾಗಬೇಕಿದ್ದ TDS ಕ್ರೆಡಿಟ್ಗಳು ಜೂನ್ ಆರಂಭದಲ್ಲಿ ಮಾತ್ರ ತಿಳಿಯುವುದರಿಂದ, ಈ ವಿಸ್ತರಣೆ ಇಲ್ಲದಿದ್ದರೆ ದಾಖಲಾತಿಗೆ ಸಾಕಷ್ಟು ಸಮಯ ಸಿಗುತ್ತಿರಲಿಲ್ಲ ಎಂದೂ ಸ್ಪಷ್ಟಪಡಿಸಲಾಗಿದೆ

Central Board of Direct Taxes extended due date for filing Income Tax Returns