SHIVAMOGGA NEWS TODAY

bike accident : ಸ್ಕೂಟರ್​ಗೆ ಖಾಸಗಿ ಬಸ್​ ಡಿಕ್ಕಿ, ತಾಯಿ ಮಗ ಸಾವು

Prathapa thirthahalli ಅಥಾರಿಟಿ: ಮಲೆನಾಡು ಟುಡೆ ಡೆಸ್ಕ್

bike accident :  ಸ್ಕೂಟರ್​ಗೆ ಖಾಸಗಿ ಬಸ್​ ಡಿಕ್ಕಿ ಹೊಡೆದ ಪರಿಣಾಮ ಬೈಕ್​ನಲ್ಲಿ ಸಂಚರಿಸುತ್ತಿದ್ದ ತಾಯಿ ಮಗ  ಇಬ್ಬರು ಸಾವನ್ನಪ್ಪಿರುವ ಘಟನೆ ಕುಂಸಿ ಪೊಲೀಸ್ ಠಾಣೆ ವ್ಯಾಪ್ತಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಗುರುವಾರ ಸಂಭವಿಸಿದೆ. ಮೊಹಮದ್​ ಕಬೀರ್​ ಮತ್ತು ಅಸ್ಮಾ ಬಾನು ಮೃತರು ಎಂದು ತಿಳಿದು ಬಂದಿದೆ.

bike accident :  ಹೇಗಾಯ್ತು ಘಟನೆ

ಹೊಂಡಾ ಆ್ಯಕ್ಟಿವಾದಲ್ಲಿ ಖಲಂದರ್ ಮತ್ತು ಅವರ ಪತ್ನಿ ಅಸ್ಮಾ ಬಾನು ತಮ್ಮ ಇಬ್ಬರು ಮಕ್ಕಳೊಂದಿಗೆ ತರಿಕೆರೆಯಿಂದ ಸಾಗರದ ದರ್ಗಾದತ್ತ ತೆರಳುತ್ತಿದ್ದರು. ಈ ವೇಳೆ, ಕುಂಸಿಯ ಕೋಣೆ ಹೊಸೂರು ಹಾಗೂ ತುಪ್ಪೂರು ನಡುವೆ ಹೋಗುತ್ತಿದ್ದಾಗ ಮಳೆ ಬಂದ ಹಿನ್ನೆಲೆಯಲ್ಲಿ ಖಲಂದರ್ ಅವರು ತಮ್ಮ ಸ್ಕೂಟಿಯನ್ನು ರಸ್ತೆ ಪಕ್ಕದ‌ಲ್ಲಿನ ಶೆಡ್​​ನತ್ತ ತಿರುಗಿಸಿದ್ದಾರೆ. ಈ ವೇಳೆ ವೇಗವಾಗಿ ಬಂದ ಖಾಸಗಿ ಬಸ್ ಡಿಕ್ಕಿ ಹೊಡೆದಿದೆ ಎಂದು ತಿಳಿದು ಬಂದಿದೆ.

ಡಿಕ್ಕಿ ರಭಸಕ್ಕೆ ನಾಲ್ವರೂ ಸ್ಕೂಟರ್​ನಿಂದ ರಸ್ತೆಗೆ ಬಿದ್ದಿದ್ದು. ಆಗ 3 ವರ್ಷದ ಮೊಹಮ್ಮದ್ ಕಬೀರ್ ಮೇಲೆ ಬಸ್ ಹರಿದಿದೆ. ಇದರ ಪರಿಣಾಮ ಆತ ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾನೆ. ಗಾಯಗೊಂಡ ಖಲಂದರ್, ಪತ್ನಿ ಅಸ್ಮಾ ಬಾನು ಹಾಗೂ ಇನ್ನೋರ್ವ 6 ವರ್ಷದ ಮಗನನ್ನು ತಕ್ಷಣ ಶಿವಮೊಗ್ಗದ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ ಮಾರ್ಗ ಮಧ್ಯದಲ್ಲೇ ಅಸ್ಮಾ ಬಾನು ಕೊನೆಯುಸಿರೆಳೆದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.

END OF STORY
ಮಲೆನಾಡು ಟುಡೆ ಫಾಲೋ ಮಾಡಿ

ತಾಜಾ ಸ್ಥಳೀಯ ಸುದ್ದಿಗಳಿಗಾಗಿ ನಮ್ಮ ಅಧಿಕೃತ ಚಾನೆಲ್‌ಗಳಿಗೆ ಸೇರಿ.

ಇತ್ತೀಚಿನ ವೀಡಿಯೊಗಳು
ಟ್ಯಾಗ್‌ಗಳು:
Prathapa thirthahalli

Prathapa thirthahalli - Malenadu Today : ತೀರ್ಥಹಳ್ಳಿ ತಾಲ್ಲೂಕು ಗಬಡಿ ಮೂಲದ ಪತ್ರಕರ್ತ ಪ್ರತಾಪ್ ತೀರ್ಥಹಳ್ಳಿ ಕಳೆದ ಮೂರು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಸದ್ಯ ಮಲೆನಾಡು ಟುಡೆಯಲ್ಲಿ content producer ಆಗಿ ಕಾರ್ಯ ನಿರ್ವಹಿಸುತ್ತಿದ್ದಾರೆ.