sagara family news / 2 ದಿನದ ಮೊದಲು ಆಗಿತ್ತು ಮದುವೆ ನಿಶ್ಚಯ / ಸಾಗರದ ಕುಟುಂಬದ ಬದುಕು ದುರಂತ್ಯ ಅಂತ್ಯ

Published: 06 ಮೇ 2025, 2:09 ಅಪರಾಹ್ನ • 1 min read

sagara family news ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕು ನಿವಾಸಿಗಳು ಧಾರವಾಡದಲ್ಲಿ ಸಂಭವಿಸಿದ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. ಆ ಪೈಕಿ ಮೃತ ಯುವತಿಗೆ ಕೆಲ ದಿನಗಳ ಹಿಂದಷ್ಟೆ ಮದುವೆ ನಿಶ್ಚಯವಾಗಿತ್ತು ಎನ್ನಲಾಗಿದೆ. ಎರಡು ದಿನಗಳ ಹಿಂದೆ ನಿಶ್ಚಿತಾರ್ಥವಾಗಿದ್ದ ಯುವತಿಯ ಬದುಕು ದುರಂತ ಅಂತ್ಯ ಕಂಡಿದೆ.  ಬ್ಬಳ್ಳಿ ತಾಲೂಕಿನ ಕಿರೆಸೂರ ಗ್ರಾಮದ ಇಂಗಳಹಳ್ಳಿ ಕ್ರಾಸ್ ನಲ್ಲಿ ಲಾರಿ ಮತ್ತು ಕಾರಿನ ನಡುವೆ ಸಂಭವಿಸಿದ ಡಿಕ್ಕಿಯಲ್ಲಿ ಸಾಗರದ ಸಾಗರದ ಶ್ವೇತಾ (29), ಅಂಜಲಿ (26), ಸಂದೀಪ (26), ವಿಠಲ (35) ಹಾಗೂ ಶಶಿಕಲಾ (40) ಮೃತಪಟ್ಟವರೆಂದು ಗುರುತಿಸಲಾಗಿದೆ.

ನವಲಗುಂದ ಕಡೆಯಿಂದ ಆಗಮಿಸುತ್ತಿದ್ದ ಲಾರಿಯು ಎದುರಿನಿಂದ ಬರುತ್ತಿದ್ದ ಕಾರಿಗೆ ಡಿಕ್ಕಿ ಹೊಡೆದ ಪರಿಣಾಮ ಘಟನೆ ಸಂಭವಿಸಿದೆ. ಇನ್ನೂ ಘಟನೆ ಬೆನ್ನಲ್ಲೆ  ಲಾರಿ ಚಾಲಕ ಪರಾರಿಯಾಗಿದ್ದು, ಆತನ ಪತ್ತೆಗೆ ಪೊಲೀಸರು ಹುಡುಕಾಟ ನಡೆಸ್ತಿದ್ದಾರೆ. ಸಾಗರದ ಹೊರವಲಯದ ಮೂರು ಕೈ ಗ್ರಾಮದ ಕರುವಿನ ಕೊಪ್ಪದ ನಿವಾಸಿಯಾಗಿದ್ದ ವಿಠಲ್ ಹಾಗೂ ಶಶಿಕಲಾ ದಂಪತಿಗಳ ಪುತ್ರಿ ಶ್ವೇತಾ ಅವರ ನಿಶ್ಚಿತಾರ್ಥವು ಕಳೆದ ಎರಡು ದಿನಗಳ ಹಿಂದೆ ಕುಂದಾಪುರ ಮೂಲದ ಯುವಕನೊಂದಿಗೆ ನಡೆದಿತ್ತು. ಮದುವೆ ನಿಶ್ಚಯ ಬಳಿಕ ತಮ್ಮ ತಂದೆ ಕೆಲಸ ಮಾಡುತ್ತಿದ್ದ ಬಾಗಲಕೋಟೆಗೆ  ವಿಠಲ್ ಮತ್ತು ಶಶಿಕಲಾ ದಂಪತಿಗಳು ಪುತ್ರಿ ಶ್ವೇತಾ, ಪುತ್ರ ಸಂದೀಪ್ ತೆರಳಿದ್ದರು. ಈ ವೇಳೆ ಅಪಘಾತ ಸಂಭವಿಸಿದೆ.

Related News

🔔 Breaking News Alerts

ತಾಜಾ ಸುದ್ದಿಗಳನ್ನು ಮೊದಲು ಪಡೆಯಲು ನಮ್ಮ ನೋಟಿಫಿಕೇಶನ್ ಸೇವೆಯನ್ನು ಸಬ್‌ಸ್ಕ್ರೈಬ್ ಮಾಡಿ.

END OF STORY

Malenadu Today

Senior Journalist | Malenadu Today
✓ Verified Journalist