civil defence mock drills : ಕೇಂದ್ರ ಸರ್ಕಾರದಿಂದ ರಾಜ್ಯಗಳಿಗೆ ಮಹತ್ವದ ಸೂಚನೆ! ಯದ್ದ!?

ಹಂಚಿಕೊಳ್ಳಿ
WhatsApp Facebook X Telegram
Lightning Strike Trading advertisement Current shock : Rippon pete Dasara Sports cyber crimeThreat case
Lightning Strike Trading advertisement Rippon pete Dasara Sports cyber crime Threat case

civil defence mock drills ಮಹತ್ವದ ಬೆಳವಣಿಗೆ ಒಂದರಲ್ಲಿ ಕೇಂದ್ರ ಗೃಹಸಚಿವಾಲಯ ಎಲ್ಲಾ ರಾಜ್ಯಗಳಿಗೂ ನಾಗರಿಕ ರಕ್ಷಣಾ ವ್ಯವಸ್ಥೆಯ ಅಣಕುಪ್ರದರ್ಶನ ಕೈಗೊಳ್ಳುವಂತೆ ಸೂಚನೆ ನೀಡಿದೆ. ಅಲ್ಲದೆ ಈ ಸಂಬಂಧ ಕೆಲವೊಂದು ಸೂಚನೆಗಳನ್ನು ನೀಡಿದೆ. ಕೇಂದ್ರ ಸರ್ಕಾರ ಸೂಚಿಸಿರುವ ಕ್ರಮಗಳು ಹೀಗಿವೆ

civil defence mock drills

  1. ವಾಯುದಾಳಿ ಎಚ್ಚರಿಕೆ ಸೈರನ್‌ಗಳ ಕಾರ್ಯಾಚರಣೆ
  2. ಅನಿರೀಕ್ಷಿತ ದಾಳಿಯ ಸಂದರ್ಭದಲ್ಲಿ ನಾಗರಿಕರು, ವಿದ್ಯಾರ್ಥಿಗಳು ಸೇರಿದಂತೆ ನಾಗರಿಕರು ತಮ್ಮನ್ನು ರಕ್ಷಿಸಿಕೊಳ್ಳುವ ಸಲುವಾಗಿ ರಕ್ಷಣಾತ್ಮಕ ಅಂಶಗಳ ಕುರಿತಾಗಿ ತರಬೇತಿ ನೀಡುವುದು. 
  3. ಅನೀರೀಕ್ಷಿತ ಆಘಾತದ ಸಂದರ್ಭದಲ್ಲಿ ಬ್ಲಾಕ್​ಔಟ್​ ಪ್ರಕ್ರಿಯೆಗಳನ್ನು ಅನುಸರಿಸಲು ತರಬೇತಿ ನೀಡುವುದು. 
  4. ತುರ್ತು ಸಂದರ್ಭದಲ್ಲಿ  ತಮ್ಮ ನೆಲೆ ಅಥವಾ ಇರುವಿಕೆಯನ್ನು ಮರೆಮಾಚುವ ಸಂಬಂಧ ಅಣಕು ಪ್ರದರ್ಶನ ನೀಡುವುದು. 
  5. ಅಂತಿಮವಾಗಿ ಸುರಕ್ಷಿತವಾಗಿ ಸುರಕ್ಷಿತ ಸ್ಥಳಕ್ಕೆ ತಲುಪುವ ಯೋಜನೆ ಮತ್ತು ಅದರ ರಿಹರ್ಸಲ್​ನ ಅಣಕು ಪ್ರದರ್ಶನ ನಡೆಸುವುದು.  

ಹೀಗೆ  ಮೇ 7 ರಂದು ಪರಿಣಾಮಕಾರಿ ನಾಗರಿಕ ರಕ್ಷಣೆಗಾಗಿ ಅಣಕು  ಪ್ರದರ್ಶನ ನಡೆಸುವಂತೆ  ನಡೆಸುವಂತೆ  ರಾಜ್ಯ ಗೃಹಸಚಿವಾಲಯಗಳಿಗೆ ಕೇಂದ್ರ ಗೃಹಸಚಿವಾಲಯ ಮಹತ್ವದ ಸೂಚನೆ ನೀಡಿದೆ.  ಇದರ ನಡುವೆ  ಪಾಕಿಸ್ತಾನ ಸೈಬರ್ ಪಡೆ ಭಾರತೀಯ ರಕ್ಷಣಾ ಸಂಸ್ಥೆಗಳ ವೆಬ್‌ಸೈಟ್‌ಗಳನ್ನು ಹ್ಯಾಕ್ ಮಾಡುವ ಪ್ರಯತ್ನಕ್ಕೆ ಮುಂಧಾಗಿದೆ. ಪಾಕಿಸ್ತಾನ ಸೈಬರ್ ಪಡೆ ಎಂದು ಗುರುತಿಸಿಕೊಳ್ಳುವ ಗುಂಪೊಂದು ಭಾರತದ ಮಿಲಿಟರಿ ಎಂಜಿನಿಯರಿಂಗ್ ಸೇವೆಯ ಘಟಕವೊಂದರ ಡೇಟಾವನ್ನು ಬ್ರೀಚ್ ಮಾಡಿದೆ ಎಂದು ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿವೆ. ಹೀಗಾಗಿ, ಇನ್ನಷ್ಟು ಸೈಬರ್ ಅಟ್ಯಾಕ್ ಆಗುವ ನಿಟ್ಟಿನಲ್ಲಿ ರಕ್ಷಣಾ ಇಲಾಖೆಯಲ್ಲಿ ಇನ್ನಷ್ಟು ಹೆಚ್ಚಿನ ಸುರಕ್ಷತಾ ಕ್ರಮಗಳನ್ನು ಕೈಗೊಳ್ಳಲಾಗಿದೆ.  

 

MHA orders states to hold civil defence mock drills on May 7

ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor