murder case : ಮಂಗಳೂರು ಸುಹಾಸ್​ ಶೆಟ್ಟಿ ಕೊಲೆ ಪ್ರಕರಣ, ಶಿವಮೊಗ್ಗದಲ್ಲಿ ಯಾರ್ಯಾರು ಏನೇನು ಹೇಳಿದರು

ಹಂಚಿಕೊಳ್ಳಿ
WhatsApp Facebook X Telegram
murder case
murder case suhas shetty murder case

murder case : ಮಂಗಳೂರಿನಲ್ಲಿ ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರವಾಗಿ ಹತ್ಯೆ ಮಾಡಿರುವುದಕ್ಕೆ, ರಾಜ್ಯದಲ್ಲಿ ಕಾನೂನು ವ್ಯವಸ್ಥೆ ಕುಸಿದು ಹೋಗಿರುವುದೇ ಕಾರಣ ಎಂದು ಶಾಸಕ ಆರಗ ಜ್ಞಾನೇಂದ್ರ ಹೇಳಿದರು.

ಈ ಕುರಿತು ಮಾತನಾಡಿರುವ ಅವರು ಕಿಡಿಗೇಡಿಗಳು ಹಿಂದೂ ಕಾರ್ಯಕರ್ತ ಸುಹಾಸ್ ಶೆಟ್ಟಿಯನ್ನು ಬರ್ಬರ ಹತ್ಯೆ ಮಾಡಿರುವ ಘಟನೆಯನ್ನು ನಾನು ಖಂಡಿಸುತ್ತೇನೆ. ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ ಬಂದ ಮೇಲೆ  ಹೆಚ್ಚಾಗಿ ಹಿಂದೂಗಳ ಹತ್ಯೆ ನಡೆಯುತ್ತಿದೆ. ಹಾಗೆಯೇ ಮಂಗಳೂರಿನಲ್ಲಿ ಮುಸ್ಲಿಂ ಕೋಮುವಾದಿ ಸಂಘಟನೆಗಳು ತುಂಬಾ ಸಕ್ರಿಯವಾಗಿ ಕೆಲಸ ಮಾಡುತ್ತಿದೆ. ಪ್ರವೀಣ್ ನೆಟ್ಟಾರು ಕೊಲೆಯ ತನಿಖೆಯ ನಂತರ ಸಾಕಷ್ಟು ವಿದೇಶಿ ಶಕ್ತಿಗಳು ಕೂಡ ಇರುವುದು ಕಂಡು ಬಂದಿದೆ. ಈ ಎಲ್ಲಾ ಘಟನೆಗಳನ್ನು ನೊಡುತ್ತಿದ್ದರೆ ಕಾನೂನು ಸುವ್ಯವಸ್ಥೆ ಈ ರಾಜ್ಯದಲ್ಲಿ ಕುಸಿದು ಹೋಗಿರುವುದು ಎದ್ದು ಕಾಣುತ್ತಿದೆ ಎಂದು ಆರೋಪಿಸಿದರು.

murder case : ಕೆ ಎಸ್​ ಈಶ್ವರಪ್ಪ ಹೇಳಿದ್ದೇನು

ಈ ಕುರಿತು ಪ್ರತಿಕ್ರಿಯೆ ನೀಡಿರುವ ಮಾಜಿ ಡಿಸಿಎಂ ಕೆ ಎಸ್​ ಈಶ್ವರಪ್ಪ ಸುಹಾಸ್ ಶೆಟ್ಟೆಯನ್ನು ಗೂಂಡಾಗಳು ಕೊಲೆಮಾಡಿದ್ದಾರೆ. ಇದನ್ನೆಲ್ಲಾ ಗಮನಿಸಿದ ಮೇಲೆ ರಾಜ್ಯದಲ್ಲಿ  ಪೊಲೀಸ್​ ಇಲಾಖೆ ಏನು ಮಾಡುತ್ತಿದೆ ಎಂಬುದು ತಿಳಿಯುತ್ತಿಲ್ಲ. ಇಂತಹಾ ಘಟನೆಗಳಿಂದ ಗೂಂಡಾಗಳಿಗೆ ಪೊಲೀಸ್​ ಇಲಾಖೆಯ ಭಯ ಇಲ್ಲದಂತಾಗಿದೆ.ಇದರ ಬಗ್ಗೆ ಪೊಲೀಸರು ಗಮನ ಹರಿಸಿ ಆರೋಪಿಗಳನ್ನು ಶೀಘ್ರವಾಗಿ ಬಂಧಿಸಬೇಕು ಎಂದು ಆಗ್ರಹಿಸಿದರು. 

murder case : ದುಷ್ಕರ್ಮಿಗಳನ್ನು ಗುಂಡಿಟ್ಟು ಕೊಲ್ಲಬೇಕು : ಹರತಾಳು ಹಾಲಪ್ಪ

ಸುಹಾಸ್​ ಶೆಟ್ಟಿ ಹತ್ಯೆ ಖಂಡನೀಯ ನಾವು ಒಂದು ತಿನ್ನುವ ಪ್ರಾಣಿಯನ್ನು ಕೊಲ್ಲವಾಗ ನೂರಾರು ಬಾರಿ ಯೋಚಿಸುತ್ತೇವೆ.  ಆದರೆ ದುಷ್ಕರ್ಮಿಗಳು ರಾತ್ರೋ ರಾತ್ರಿ ಕಾರನ್ನು ಅಡ್ಡಗಟ್ಟಿ ಬರ್ಬರವಾಗಿ ಕೊಚ್ಚಿ ಕೊಲೆ ಮಾಡಿದ್ದಾರೆ. ಈಗಾಗಲೇ ನಮ್ಮ ರಾಷ್ಟ್ರಾಧ್ಯಕ್ಷರಾದ ವಿಜಯೇಂದ್ರ ಈ ವಿಚಾರವಾಗಿ ಮಂಗಳೂರಿಗೆ ತಲುಪಿದ್ದಾರೆ. ಅಲ್ಲಿನ ಎಸ್​ಪಿಯವರು ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುತ್ತೇವೆ ಎಂದು ಹೇಳಿದ್ದಾರೆ. ಆದರೆ ಅವರನ್ನು ಬಂಧಿಸುವುದಲ್ಲ ಕಂಡಲ್ಲಿ ಗುಂಡಿಟ್ಟು ಕೊಲ್ಲಬೇಕು ಎಂದು ಮಾಜಿ ಸಚಿವ  ಹರತಾಳು ಹಾಲಪ್ಪ ಹೇಳಿದರು. 

 

ಹಂಚಿಕೊಳ್ಳಿ
WhatsApp Facebook X Telegram
Prathapa thirthahalli
ಲೇಖಕರ ಬಗ್ಗೆ

Prathapa thirthahalli

Malenadu Today Contributor