Shivamogga news today : ಜಯನಗರ ಠಾಣೆಯಲ್ಲಿ ಲವ್ ಜಿಹಾದ್ ಕೇಸ್ | ವಿಶ್ವ ಹಿಂದೂ ಪರಿಷತ್​ ಪ್ರತಿಭಟನೆ : ಸರ್ಕಾರಿ ನೌಕರಿ ಹೆಸರಲ್ಲಿ ₹4 ಲಕ್ಷ ಖತಂ!

ಹಂಚಿಕೊಳ್ಳಿ
WhatsApp Facebook X Telegram
Shivamogga Power Cable Theft bhadravati
Shivamogga Power Cable Theft bhadravati

Shivamogga news today : ಸುದ್ದಿ 1 : ಜಯನಗರದಲ್ಲಿ ಲವ್ ಜಿಹಾದ್ ಕೇಸ್ :ಶಿವಮೊಗ್ಗದ ಜಯನಗರ ಪೊಲೀಸ್ ಠಾಣೆಯಲ್ಲಿ ನಿನ್ನೆ ರಾತ್ರಿ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಜಮಾಯಿಸಿದ್ದರು. ಅಲ್ಲದೆ ಲವ್ ಜಿಹಾದ್​ ನಡೆದಿರುವ ಆರೋಪ ಸಂಬಂಧ ಪೊಲೀಸ್ ಅಧಿಕಾರಿಗಳ ಜೊತೆಗೆ ಮಾತುಕತೆ ನಡೆಸ್ತಿದ್ದರು. ಪ್ರಕರಣದ ವಿವರ ಹೀಗಿದೆ.

ಜಿಲ್ಲೆಯ ತಾಲ್ಲೂಕು ಒಂದರಲ್ಲಿ ಅನ್ಯಕೋಮಿನ ಹುಡುಗ ಹಾಗೂ ಹುಡುಗಿ ವಿಚಾರ ಜಯನಗರ ಠಾಣೆಯ ಮೆಟ್ಟಿಲೇರಿತ್ತು. ಹುಡುಗಿ ಮೈನರ್ ಆಗಿದ್ದು, ಆಕೆಯನ್ನು ಬಲವಂತವಾಗಿ ಕರೆದುಕೊಂಡು ಬರಲಾಗಿದೆ. ಇದು ಲವ್ ಜಿಹಾದ್ ಎಂದು ಸಂಘಟನೆ ಮುಖಂಡರು ಆರೋಪಿಸಿದರು. ಇದಕ್ಕೂ ಶಿವಮೊಗ್ಗದ ರೈಲ್ವೆ ನಿಲ್ದಾಣದಲ್ಲಿದ್ದ ಹುಡುಗ ಹುಡುಗಿಯನ್ನು ತಡೆದಿದ್ದ ಸಂಘಟನೆ ಸದಸ್ಯರು, ಅಲ್ಲಿಂದ ಪೊಲೀಸ್ ಠಾಣೆಗೆ ಅವರನ್ನು ಕರೆತಂದಿದ್ದರು. ಆನಂತರ ಜಯನಗರ ಠಾಣೆಯ ಪೊಲೀಸರು ಪ್ರಕರಣದ ವಿಚಾರಣೆ ನಡೆಸಿದ್ದಾರೆ.

Shivamogga news today : ಸುದ್ದಿ 2 : ಹಿಂದೂ ಪರಿಷತ್​ ಪ್ರತಿಭಟನೆ

ಇತ್ತ ಶಿವಮೊಗ್ಗದ ಜಿಲ್ಲಾಧಿಕಾರಿ ಕಚೇರಿ ಎದುರು ನಿನ್ನೆದಿನ ವಿಶ್ವ ಹಿಂದೂಪರಿಷತ್ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು. ಪಶ್ಚಿಮಬಂಗಾಳದಲ್ಲಿ ನಡೆಯುತ್ತಿರುವ ಹಿಂದೂಗಳ ಮೇಲಿನ ದೌರ್ಜನ್ಯ ಖಂಡಿಸಿ ಈ ಪ್ರತಿಭಟನೆ ಹಮ್ಮಿಕೊಳ್ಳಲಾಗಿತ್ತು. ಈ ವೇಳೆ ಮಮತಾ ಬ್ಯಾನರ್ಜಿ ಸರ್ಕಾರವು ಭಾರತದ ಸಂವಿಧಾನಾತ್ಮಕ ರಚನೆಗೆ ಧಕ್ಕೆ ತಂದಿದ್ದಾರೆ. ಪಶ್ಚಿಮ ಬಂಗಾಳದಲ್ಲಿ ರಾಷ್ಟ್ರೀಯ ಭದ್ರತೆಯು ಅಪಾಯದಲ್ಲಿದೆ. ಬಾಂಗ್ಲಾದೇಶಿಗರನ್ನು ಒಳಸೇರಿಸಕೊಳ್ಳಲಾಗುತ್ತಿದೆ. ಹಿಂದೂ ಮೇಲೆ ಹಿಂಸೆ ಹೆಚ್ಚುತ್ತಿದೆ. ಹಿಂದೂಗಳ ಅಸ್ತಿತ್ವವೇ ಅಪಾಯದಲ್ಲಿದೆ. ಕಾನೂನು ಮತ್ತು ವ್ಯವಸ್ಥೆ ಸಂಪೂರ್ಣವಾಗಿ ನಾಶವಾಗಿದೆ. ಆದ್ದರಿಂದ ಬಂಗಾಳದಲ್ಲಿ ತಕ್ಷಣದಿಂದಲೇ ರಾಷ್ಟ್ರಪತಿ ಆಡಳಿತ ಜಾರಿಗೆ ತರಬೇಕು.ಬಂಗಾಳದ ಹಿಂಸೆಗೆ ಸಂಬಂಧಿಸಿದ ತನಿಖೆಯನ್ನು ಎನ್‌ಐಎ ಮೂಲಕ ಮಾಡಬೇಕು ಮತ್ತು ಆರೋಪಿಗಳಿಗೆ ತಕ್ಷಣದ ಶಿಕ್ಷೆ ನೀಡಬೇಕು ಎಂದು ಒತ್ತಾಯಿಸಿದರು.

Shivamogga news today : ಸುದ್ದಿ 3 : ಸರ್ಕಾರಿ ಕೆಲಸ ಕೊಡಿಸುವುದಾಗಿ ವಂಚನೆ

ಶಿವಮೊಗ್ಗ ನಗರದ ತುಂಗಾನಗರ ಪೊಲೀಸ್ ಠಾಣೆಯಲ್ಲಿ ಸರ್ಕಾರಿ ನೌಕರಿ ಕೊಡಿಸುವ ನೆಪದಲ್ಲಿ ಹಣ ಪಡೆದು ವಂಚಿಸಿದ ಆರೋಪ ಸಂಬಂಧ ಕೇಸ್ ದಾಖಲಾಗಿದೆ. ಇಲ್ಲಿನ ದಂಪತಿಯೊಬ್ಬರು ಸಂತ್ರಸ್ತರಿಗೆ ಪರಿಚಯವಿದ್ದು, ಅವರಿಗೆ ಸರ್ಕಾರಿ ನೌಕರಿ ಕೊಡಿಸುವುದಾಗಿ ಹೇಳಿ ನಾಲ್ಕು ಲಕ್ಷ ರೂಪಾಯಿ ಪಡೆದಿದ್ದರಂತೆ. ಆದರೆ ಹಣ ಪಡೆದ ಬಳಿಕ ದಂಪತಿ ಹಾಗೂ ಅವರ ಪುತ್ರ ಮೂರು ವರ್ಷಗಳ ಕಾಲ ಸತಾಯಿಸಿದ್ದಾರೆ. ಈ ಹಿನ್ನೆಲೆಯಲ್ಲಿ ಪೊಲೀಸರಿಗೆ ಸಂತ್ರಸ್ತರು ದೂರು ಕೊಟ್ಟಿದ್ದಾರೆ.

ವಿಷಯಗಳು:
ಹಂಚಿಕೊಳ್ಳಿ
WhatsApp Facebook X Telegram
Malenadu Today
ಲೇಖಕರ ಬಗ್ಗೆ

Malenadu Today

Malenadu Today Contributor