ಸಾಗರ ಟು ಮಣಿಪಾಲ್ ಸೇರಿದಂತೆ ಶಿವಮೊಗ್ಗಕ್ಕೆ 10 KSRTC ಬಸ್ ! ಎಲ್ಲಿಂದ ಎಲ್ಲಿಗೆ ಸಂಚರಿಸಲಿವೆ! ವಿವರ ಇಲ್ಲಿದೆ

Shivamogga  Feb 25, 2024 Sagar to Manipal bus, ksrtc  ಗ್ಯಾರಂಟಿ ಸಮಾವೇಶಗಳ ನಡುವೆ ಶಿವಮೊಗ್ಗ ಜಿಲ್ಲೆ  ಪ್ರಯಾಣಿಕರಿಗಾಗಿ 10 ಬಸ್​ಗಳನ್ನ  ನೂತನವಾಗಿ ಬಿಡಲಾಗಿದೆ. 

ಶಿವಮೊಗ್ಗದಿಂದ ಚಿತ್ರದುರ್ಗ, ಶಿವಮೊಗ್ಗದಿಂದ ಬೆಂಗಳೂರು, ಶಿವಮೊಗ್ಗದಿಂದ ಸಾಗರ, ಶಿವಮೊಗ್ಗದಿಂದ ಸೊರಬಕ್ಕೆ ನೂತನ ಬಸ್ ಗಳು ಸಂಚರಿಸಲಿವೆ. ಅದರಲ್ಲಿ. ಶಿವಮೊಗ್ಗ ಜಿಲ್ಲಾ ಸಾರಿಗೆ ವಿಭಾಗಕ್ಕೆ 6 ಬಸ್, ಸಾಗರ 2, ಶಿಕಾರಿಪುರ ವಿಭಾಗದಲ್ಲಿ 2 ಬಸ್ ಸೇವೆ ಒದಗಿಸಲಿವೆ. 

ಇನ್ನೂ ವಿಶೇಷವಾಗಿ   ಸಾಗರ ನಗರದಿಂದ ಮಣಿಪಾಲ್ ಹೋಗುವುದಕ್ಕೆ ಪೂರಕವಾಗಿ ಸಾಗರ ಮಣಿಪಾಲ್‌ಗೆ ಕೆಎಸ್‌ಆರ್‌ಟಿಸಿ ಬಸ್ ಸೌಲಭ್ಯ ಒದಗಿಸಲಾಗಿದೆ. 

 

ನಿತ್ಯ ಬೆಳಗ್ಗೆ 6.10 ಕ್ಕೆ ಸಾಗರದಿಂದ ಹೊರಡುವ ಈ ಬಸ್ 10.20 ಕ್ಕೆ ಮಣಿಪಾಲ್ ತಲುಪಲಿದೆ ಮತ್ತು ಅಲ್ಲಿಂದ ಮಧ್ಯಾಹ್ನ 2. 10 ಕ್ಕೆ ಹೊರಟು ಸಂಜೆ 6.20 ಕ್ಕೆ ಸಾಗರ ಬರಲಿದೆ. 

ಇನ್ನು ನೂತನವಾಗಿ ಮೈಸೂರಿಗೂ ಬಸ್ ಸಂಪರ್ಕ ಕಲ್ಪಿಸಿದ್ದು ಅದು ಪ್ರತಿ ರಾತ್ರಿ 9 ಗಂಟೆಗೆ ಸಾಗರದಿಂದ ಮೈಸೂರಿಗೂ ಮತ್ತೆ ಅದೇ ಸಮಯಕ್ಕೆ ಮೈಸೂರಿನಿಂದ ಸಾಗರಕ್ಕೂ ಬಸ್ ಸಂಚರಿಸಲಿದೆ.

Leave a Comment