ಕ್ಯಾಂಟರ್ ಡಿಕ್ಕಿ, 19 ವರ್ಷದ ಯವಕ ಸಾವು! ಕಾರು ಅಪಘಾತದಲ್ಲಿ ಮೂವರು ಗಂಭೀರ! ಡಿಟೇಲ್ಸ್ ಹೀಗಿದೆ

ಹಂಚಿಕೊಳ್ಳಿ
WhatsApp Facebook X Telegram
Shivamogga 112 Police Shivamogga Hit-and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga
Shivamogga 112 Police Shivamogga Hit-Shivamogga Hit-and-Run Unidentified Man Dies and-Run Unidentified Man Dies Vehicle Emission Test MDMA Drug Peddler Shivamogga Police Missing Person DSS Leader Gurumurthy Cyber Scam PM Modi AI Deepfake Anandapura Crash 50% Discount KEA Clarifies Shivamogga Court Verdict Hosanagara Police Thirthahalli Police Reservoir Water Shivamogga

shivamogga / ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಜಿಲ್ಲೆಯಲ್ಲಿ ಸಂಭವಿಸಿದ ಎರಡು ಪ್ರತ್ಯೇಕ ಅಪಘಾತಗಳಲ್ಲಿ ಓರ್ವರು ಸಾವನ್ನಪ್ಪಿದ್ದು ಮೂವರಿಗೆ ಗಂಭೀರ ಗಾಯಗಳಾಗಿರುವ ಬಗ್ಗೆ ವರದಿಯಾಗಿದೆ. ಘಟನೆಗಳ ವಿವರ ಹೀಗಿದೆ.

2 ಕಾರುಗಳ ನಡುವೆ ಡಿಕ್ಕಿ

ಸಾಗರ ತಾಲ್ಲೂಕಿನ ಆನಂದಪುರ ಸಮೀಪದ ಐಗಿನಬೈಲು ಕ್ರಾಸ್ ಬಳಿ 2 ಕಾರುಗಳ ನಡುವೆ ಡಿಕ್ಕಿಯಾಗಿದೆ. ಈ ಘಟನೆಯಲ್ಲಿ 3 ಮಂದಿ ಗಾಯಗೊಂಡಿದ್ದಾರೆ. ಡಿಕ್ಕಿಯ ರಭಸಕ್ಕೆ ವಾಹನಗಳ ಮುಂಭಾಗ ಜಖಂಗೊಂಡಿದೆ. ಈ ಘಟನೆಯಲ್ಲಿ ಕೇಶವ, ಸುರೇಶ್ ಹಾಗೂ ಶಶಿಕುಮಾರ್ ಎಂಬುವವರಿಗೆ ಗಂಭೀರ ಗಾಯಗಳಾಗಿವೆ. ಘಟನಾ ಸ್ಥಳಕ್ಕೆ ಆನಂದಪುರ ಪೊಲೀಸ್ ಠಾಣೆಯ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ.

ಕ್ಯಾಂಟರ್ ಡಿಕ್ಕಿಯಾಗಿ ಬೈಕ್ ಸವಾರ ದುರ್ಮರಣ

ಶಿಕಾರಿಪುರ ಪಟ್ಟಣದ ಕುಮದ್ವತಿ ಸೇತುವೆ ಬಳಿಯಲ್ಲಿ ಬುಧವಾರ ಸಂಜೆ ಕ್ಯಾಂಟರ್ ಡಿಕ್ಕಿಯಾದ್ದರಿಂದ ಬೈಕ್​ ಸವಾರೊಬ್ಬರು ಸಾವನ್ನಪ್ಪಿದ್ದಾರೆ. ಸಾಗರ ತಾಲ್ಲೂಕಿನ ಗೌತಮಪುರ ಗ್ರಾಮದ ನಿವಾಸಿ 19 ವರ್ಷದ ಮಿಲನ್ ಮೃತಪಟ್ಟವರು. ಬೇಕರಿಯಲ್ಲಿ ಕೆಲಸ ಮಾಡುತ್ತಿದ್ದ ಮಿಲನ್​ ತನ್ನ ಸ್ನೇಹಿತನ ಐಟಿಐ ಪರೀಕ್ಷೆಯ ನಿಮಿತ್ತ ಶಿರಾಳಕೊಪ್ಪಕ್ಕೆ ತೆರಳಿ ವಾಪಸ್ ಬರುತ್ತಿದ್ದರು. ಈ ವೇಳೆ ಕ್ಯಾಂಟರ್​ ಡಿಕ್ಕಿಯಾಗಿದೆ. ಈ ಸಂಬಂಧ ಪಟ್ಟಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಹಂಚಿಕೊಳ್ಳಿ
WhatsApp Facebook X Telegram
ajjimane ganesh
ಲೇಖಕರ ಬಗ್ಗೆ

ajjimane ganesh

Malenadu Today Contributor