ವಿನೋಬನಗರ ಲಿಮಿಟ್ಸ್‌ನಲ್ಲಿ ಗಾಂಜಾ ಮಾರುತ್ತಿದ್ದವರಿಗೆ ಶಾಕ್‌ | ಸಾಗರದ ಓರ್ವ ಸೇರಿ ಇಬ್ಬರು ಅರೆಸ್ಟ್‌

ಹಂಚಿಕೊಳ್ಳಿ
WhatsApp Facebook X Telegram
ವಿನೋಬನಗರ ಲಿಮಿಟ್ಸ್‌ನಲ್ಲಿ ಗಾಂಜಾ ಮಾರುತ್ತಿದ್ದವರಿಗೆ ಶಾಕ್‌ | ಸಾಗರದ ಓರ್ವ ಸೇರಿ ಇಬ್ಬರು ಅರೆಸ್ಟ್‌

SHIVAMOGGA | MALENADUTODAY NEWS | ಮಲೆನಾಡು ಟುಡೆ  Feb 4, 2025 ‌‌ 

ಶಿವಮೊಗ್ಗ ಪೊಲೀಸ್‌ ಇಲಾಖೆ ಗಾಂಜಾ ಮಾರಾಟ ಮಾಡುತ್ತಿದ್ದ ಇಬ್ಬರನ್ನು ಬಂಧಿಸಿ ಎನ್‌ಡಿಪಿಎಸ್‌ ಆಕ್ಟ್‌ ಅಡಿಯಲ್ಲಿ ಕೇಸ್‌ ದಾಖಲಿಸಿದೆ. ಈ ಸಂಬಂಧ ಎರಡು ಪ್ರತ್ಯೇಕ ಪ್ರಕಟಣೆಯನ್ನು ಶಿವಮೊಗ್ಗ ಪೊಲೀಸ್‌ ಇಲಾಖೆ ನೀಡಿದ್ದು ಅದರ ವಿವರ ಹೀಗಿದೆ. 

ಮೊದಲನೇ ಪ್ರಕರಣ ದಿನಾಂಕ : 02-02-2025  ರಂದು ನಡೆಇದದೆ. ಇಲ್ಲಿನ  ವಿನೋಬನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಬರುವ ಜೆ. ಹೆಚ್. ಪಟೇಲ್ ಬಡಾವಣೆ ತುಂಗಾ ಚಾನಲ್ ದಂಡೆಯಲ್ಲಿ ಬೈಕ್‌ ನಲ್ಲಿ ಯುವಕೊಬ್ಬ ಗಾಂಜಾ ಮಾರುತ್ತಿದ್ದ ಬಗ್ಗೆ ಪೊಲೀಸರಿಗೆ ಮಾಹಿತಿ ಸಿಕ್ಕಿದೆ. ವಿಷಯ ತಿಳಿದು ಸ್ಥಳಕ್ಕೆ ಬಂದು ರೈಡ್‌ ಮಾಡಿದ ಪೊಲೀಸರು, ಸಾಗರ ತಾಲ್ಲೂಕುನ ಗ್ರಾಮವೊಂದರ 26 ವರ್ಷದ ಆರೋಪಿಯೊಬ್ಬನನ್ನು ಅರೆಸ್ಟ್‌ ಮಾಡಿದ್ದಾರೆ. ಅಲ್ಲದೆ ಆತನಿಂದ ಆರು ಸಾವಿರ ರೂಪಾಯಿಯ ಗಾಂಜ ಸೀಜ್‌ ಮಾಡಿದ್ದಾರೆ. ಅಲ್ಲದೆ ಆತನ ಬೈಕ್‌ ಹಾಗೂ ಮೊಬೈಲ್‌ ಕೂಡ ಜಪ್ತಿ ಮಾಡಿದ್ದಾರೆ. 

ಇನ್ನೊಂದು ಪ್ರಕರಣ  ದಿನಾಂಕ : 01-02-2025  ರಂದು ನಡೆದಿದ್ದು, ಇದು ಸಹ ವಿನೋಬನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ದಾಖಲಾದ ಕೇಸ್‌ ಆಗಿದೆ. ಇಲ್ಲಿನ ಕೀರ್ತಿ ನಗರದ ದೇವಂಗಿ ಪಾರ್ಕ್ ನಲ್ಲಿ ಯುವಕನೊಬ್ಬ ಲೋಕಲ್‌ನಲ್ಲಿ ಗಾಂಜಾ ಮಾರುತ್ತಿದ್ದ ಎಂಬ ಮಾಹಿತಿ ಪೊಲೀಸರಿಗೆ ಸಿಕ್ಕ ಬೆನ್ನಲ್ಲೆ ವಿನೋಬನಗರ ಪೊಲೀಸರು ರೇಡ್‌ ಮಾಡಿದ್ದಾರೆ. ಅಲ್ಲದೆ ರೇಡ್‌ನಲ್ಲಿ ವಿನೋನಗರದವನೇ ಆದ 30 ವರ್ಷದ ಯುವಕನನ್ನ ಅರೆಸ್ಟ್‌ ಮಾಡಿ ಐದು ಸಾವಿರ ರೂಪಾಯಿ ಮೌಲ್ಯದ ಗಾಂಜಾ ಸೀಜ್‌ ಮಾಡಿ ಆತನ ಮೊಬೈಲ್‌ ಸೀಜ್‌ ಮಾಡಿದ್ದಾರೆ.

SUMMARY |  Shivamogga Vinobanagar police arrest two ganja peddlers

KEY WORDS | Shivamogga Vinobanagar police, arrest two ganja peddlers

ಹಂಚಿಕೊಳ್ಳಿ
WhatsApp Facebook X Telegram
malenadumedia@gmail.com
ಲೇಖಕರ ಬಗ್ಗೆ

[email protected]

Malenadu Today Contributor