ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್‌ ಸೇರಿದಂತೆ ಸೂಕ್ತ ಸೌಲಭ್ಯ ಕಲ್ಪಿಸಿ | ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ 

ಹಂಚಿಕೊಳ್ಳಿ
WhatsApp Facebook X Telegram
ವಿದ್ಯಾರ್ಥಿನಿಯರಿಗೆ ಕಂಪ್ಯೂಟರ್‌ ಸೇರಿದಂತೆ ಸೂಕ್ತ ಸೌಲಭ್ಯ ಕಲ್ಪಿಸಿ | ಉಪ ಲೋಕಾಯುಕ್ತ ಕೆ.ಎನ್. ಫಣೀಂದ್ರ 

SHIVAMOGGA | MALENADUTODAY NEWS | ಮಲೆನಾಡು ಟುಡೆ |‌‌ Mar 21, 2025

ಮೂರನೇ ದಿನವೂ  ಉಪಲೋಕಾಯುಕ್ತರಾದ ಕೆ.ಎನ್. ಫಣೀಂದ್ರರವರು ಜಿಲ್ಲೆಯಲ್ಲಿ ಸಿಟಿ ರೌಂಡ್ಸ್‌ ಮುಂದುವರೆಸಿದ್ದಾರೆ. ಇಂದು ಉಪಲೋಕಾಯುಕ್ತರು ನಗರದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಮೆಟ್ರಿಕ್ ‌ನಂತರ ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ಭೇಟಿ ನೀಡಿ, ಅಡುಗೆ ಮನೆ, ದಾಸ್ತಾನು‌ ಕೊಠಡಿ, ಮಕ್ಕಳು ಮಲಗುವ ಕೊಠಡಿಗಳನ್ನು‌ ವೀಕ್ಷಿಸಿ ಸೂಕ್ತ ಸಲಹೆ ಸೂಚನೆ ನೀಡಿದರು.

ಸರ್ಕಾರ ನೀಡುವ ಸೌಲಭ್ಯಗಳನ್ನು ಸದ್ಬಳಕೆ ಆಗಬೇಕು. ಏನಾದರೂ ತೊಂದರೆ ಇದ್ದರೆ ಹೇಳಿ, ಗ್ರಂಥಾಲಯ ಇದೆಯೇ  ಸ್ಯಾನಿಟರಿ ಪ್ಯಾಡ್ ನೀಡುತ್ತಾರಾ ಎಂದು ವಿದ್ಯಾರ್ಥಿನಿಯರಿಗೆ ಪ್ರಶ್ನಿಸಿದರು.‌ ನಂತರ ಕಂಪ್ಯೂಟರ್‌ ಸಿಸ್ಟಮ್ಸ್‌ಗಳನ್ನು ಪರಿಶೀಲಿಸಿದ ಅವರು ವಿದ್ಯಾರ್ಥಿ ನಿಲಯದಲ್ಲಿ  250 ಜನ  ವಿದ್ಯಾರ್ಥಿನಿಯರು ಇರುವ ಕಾರಣ 56  ಕಂಪ್ಯೂಟರ್‌ಗಳನ್ನು ನೀಡಬೇಕು . ಹಾಗೆಯೇ ಮಕ್ಕಳಿಗೆ ನೀಡಬೇಕಾದ ಎಲ್ಲ ಸೌಲಭ್ಯಗಳನ್ನು ನೀಡಬೇಕೆಂದು ಅಧಿಕಾರಿಗಳಿಗೆ ಸೂಚನೆ ನೀಡಿದರು. 

ವಿದ್ಯಾರ್ಥಿಗಳು ಚೆನ್ನಾಗಿ ಓದಬೇಕು.‌ಸಮಾಜಕ್ಕೆ ಉತ್ತಮ ಕೊಡುಗೆ ನೀಡಬೇಕು. ಭ್ರಷ್ಟಾಚಾರದಲ್ಲಿ ತೊಡಗುವುದಿಲ್ಲ, ಉತ್ತೇಜಿಸುವುದಿಲ್ಲ. ನಿಯಂತ್ರಿಸುತ್ತೇನೆ ಎಂಬ ಮನೊಭಾವ ಇಟ್ಟುಕೊಂಡು ಮುಂದೆ ಬರಬೇಕು. ಕ್ರೀಡಾ ಚಟುವಟಿಕೆಗಳಲ್ಲಿ ಪಾಲ್ಗೊಳ್ಳಬೇಕು ಎಂದರು. ಹಾಸ್ಟೆಲ್ ಆವರಣದಲ್ಲಿರುವ ಯುಜಿಡಿ ಸಂಪರ್ಕ ವೀಕ್ಷಿಸಿ, ಸೂಕ್ತವಾದ ಯುಜಿಡಿ ವ್ಯವಸ್ಥೆ ಮಾಡುವಂತೆ ಪಾಲಿಕೆ ಆಯುಕ್ತ ರಿಗೆ ಸೂಚನೆ ನೀಡಿದರು.

ಸೌಲಭ್ಯ ನೀಡದ ಅಧಿಕಾರಿಗಳ ವಿರುದ್ದ ಸುಮೋಟೋ ಕೇಸ್‌ ದಾಖಲಿಸಿ

ಎಸ್ಸಿ ಎಸ್ಟಿ ಹಾಸ್ಟೆಲ್ ನಲ್ಲಿ‌ ನಿರ್ಲಕ್ಷ್ಯ ವಹಿಸಿ ಕೊಡಬೇಕಾದ ಸೌಲಭ್ಯ ನೀಡದ, ಸ್ವಚ್ಚತೆ ಕಾಪಾಡದ ಅಧಿಕಾರಿಗಳ ವಿರುದ್ದ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿ, ಸರಿಪಡಿಸಿಕೊಳ್ಳಲು ಕಾಲಾವಕಾಶ ನೀಡಿ, ಸರಿಪಡಿಸಿಕೊಳ್ಳದಿದ್ದರೆ ಸರ್ಕಾರಕ್ಕೆ ವರದಿ ಸಲ್ಲಿಸುತ್ತೇನೆ ಎಂದರು.

SUMMARY | visited the girls hostel, inspected the kitchen, storage room, children’s bedroom and gave suitable suggestions.

KEYWORDS | K.N. Phanindra, girls hostel,  inspected, shivamogga,

ಹಂಚಿಕೊಳ್ಳಿ
WhatsApp Facebook X Telegram
131
ಲೇಖಕರ ಬಗ್ಗೆ

131

Malenadu Today Contributor