ಪಿಎಫ್‌ ಅಕೌಂಟ್‌ನಲ್ಲಿ ಇನ್ಮುಂದೆ ಈ ಪರದಾಟ ಇರೋದಿಲ್ಲ | ಎರಡು ಹೊಸ ಸೌಲಭ್ಯ ನೀಡಿದ ಕೇಂದ್ರ ಸರ್ಕಾರ

SHIVAMOGGA | MALENADUTODAY NEWS | ಮಲೆನಾಡು ಟುಡೆ  Jan 19, 2025 ‌‌ 

ನೌಕರರ ಭವಿಷ್ಯ ನಿಧಿ ಸಂಸ್ಥೆ (ಇಪಿಎಫ್‌ಒ) ಶನಿವಾರ ಎರಡು ಹೊಸ ಸೌಲಭ್ಯಗಳನ್ನು ಬಿಡುಗಡೆ ಮಾಡಿದೆ. ಇದರಿಂದ 7.6 ಕೋಟಿ ಸದಸ್ಯರಿಗೆ ಅನುಕೂಲವಾಗಲಿದೆ 

ಸದ್ಯ ಘೋಷಣೆ ಮಾಡಲಾಗಿರುವ ಸೌಲಭ್ಯದಿಂದಾಗಿ ಇನ್ನು ಮುಂದೆ ಸದಸ್ಯರು ತಮ್ಮ ಹೆಸರು, ಹುಟ್ಟಿದ ದಿನಾಂಕದಂಥ ವೈಯಕ್ತಿಕ ಮಾಹಿತಿಯನ್ನು ಕಂಪನಿಯ ಅಥವಾ EPFO Employees’ Provident Fund Organisation ದ ಒಪ್ಪಿಗೆಯಿಲ್ಲದೆ ಬದಲಾ ಯಿಸಬಹುದಾಗಿದೆ. 

ಇದರ ಜತೆಗೆ, ಇಪಿಎಫ್‌ಒ ಸದಸ್ಯರು E-KYC ಇಪಿಎಫ್ ಖಾತೆಯ ಮೂಲಕ ತಮ್ಮ ಇಪಿಎಫ್ ವರ್ಗಾವಣೆ ಕೈಂಗಳನ್ನು ಆಧಾರ್ ಒಟಿಪಿ ಮೂಲಕ ಆನ್‌ಲೈನ್ ನಲ್ಲೇ ಮಾಡಿಕೊಳ್ಳಬಹುದಾಗಿದೆ. ಇದಕ್ಕೆ ಕೆಲಸ ಮಾಡುವ ಸಂಸ್ಥೆಯ ಅಥವಾ ಇಪಿಎಫ್‌ಒದ ಅನುಮತಿಯೂ ಬೇಕಿಲ್ಲ ̤

ಈ ಎರಡು ಸೇವೆಗಳನ್ನು ಲೋಕಾರ್ಪಣೆ  ಕೇಂದ್ರ ಕಾರ್ಮಿಕ ಮತ್ತು ಉದ್ಯೋಗ ಸಚಿವ ಮನ್‌ಸುಖ್ ಮಾಂಡವಿಯಾ ಜಾರಿಗೊಳಸಿದ್ದಾರೆ. ಅಲ್ಲದೆ ಈ ಬದಲಾವಣೆಗಳಿಂದಾಗಿ ನೌಕರರು ಇಪಿಎಫ್‌ಒನ ಡಿಜಿಟಲ್ ಫಾರಂನಲ್ಲೇ ತಮ್ಮ ತಿದ್ದುಪಡಿಗಳನ್ನ ಮಾಡಿಕೊಳ್ಳಬಹುದು ಎಂದಿದ್ದಾರೆ. 

ಆಧಾರ್‌ನೊಂದಿಗೆ ಯುಎಎನ್ ಲಿಂಕ್ ಆಗಿರದಿದ್ದರೆ ಯಾವುದೇ ತಿದ್ದುಪಡಿ ಭೌತಿಕವಾಗಿ ಉದ್ಯೋಗದಾತರಿಗೆ ವರ್ಗಾವಣೆಯಾಗಲಿದ್ದು, ಪರಿಶೀಲನೆ ಬಳಿಕ ಇಪಿಎಫ್‌ಒ ಒಪ್ಪಿಗೆಗೆ ಕಳುಹಿಸಿಕೊಡಲಾಗುತ್ತದೆ.

SUMMARY | Employees Provident Fund Organisation (EPFO) on Saturday launched two new facilities that will benefit 7.6 crore members.Pf withdrawal kyc update

KEY WORDS | Pf withdrawal kyc update,  Employees Provident Fund Organisation ,EPFO, new facilitie in epfo, Pf withdrawal kyc update

Leave a Comment