ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ ಸೇರಿದಂತೆ ನಾಳೆ ಶಿವಮೊಗ್ಗದಲ್ಲಿ ಹಲವೆಡೆ ಪವರ್‌ ಕಟ್‌

ಹಂಚಿಕೊಳ್ಳಿ
WhatsApp Facebook X Telegram
ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ ಸೇರಿದಂತೆ ನಾಳೆ ಶಿವಮೊಗ್ಗದಲ್ಲಿ ಹಲವೆಡೆ ಪವರ್‌ ಕಟ್‌

SHIVAMOGGA| MALENADUTODAY NEWS | ಮಲೆನಾಡು ಟುಡೆ  Feb 23, 2025 ‌‌ ‌

ಶಿವಮೊಗ್ಗದಲ್ಲಿ ನಾಳೆ ಅಂದರೆ, ಇದೇ ಫೆಬ್ರವರಿ 24 ರಂದು ಬೆಳಗ್ಗೆ ಹಳೆಯ ಶಿವಮೊಗ್ಗದ ಆಯ್ದ ಭಾಗಗಳಲ್ಲಿ ಕರೆಂಟ್‌ ಇರಲ್ಲ ಎಂದು ಮೆಸ್ಕಾಂ ತನ್ನ ಪ್ರಕಟಣೆಯಲ್ಲಿ ತಿಳಿಸಿದೆ. ಈ ಭಾಗಗಳಲ್ಲಿ ಕೆಲದಿನಗಳಿಂದ ಶಿಥಿಲಗೊಂಡಿರುವ ವಿದ್ಯುತ್‌ ಕಂಬಗಳನ್ನ ಮೆಸ್ಕಾಂ ಬದಲಾಯಿಸುತ್ತಿದೆ. ಈ ಹಿನ್ನೆಲೆಯಲ್ಲಿ ಪವರ್‌ ಕಟ್‌ ಮಾಡಲಾಗುತ್ತಿದೆ ಎಂದು ಪ್ರಕಟಣೆ ನೀಡಿದೆ. 

ಪ್ರಕಟಣೆಯ ವಿವರ | ಶಿವಮೊಗ್ಗ ನಗರದ ಮೀನು ಮಾರುಕಟ್ಟೆ ಸಮೀಪದ ಶಿವಾಜಿ ರಸ್ತೆಯಲ್ಲಿ, ವಿದ್ಯುತ್ ಕಂಬಗಳನ್ನು ಬದಲಾಯಿಸುವ ಕಾಮಗಾರಿಯನ್ನು ಫೆ. 24 ರಂದು ಹಮ್ಮಿಕೊಳ್ಳಲಾಗಿದೆ ಎಂದು ಮೆಸ್ಕಾಂ ತಿಳಿಸಿದೆ. ಗಾಂಧಿಬಜಾರ್, ಎಲೆರೇವಣ್ಣ ಕೇರಿ, ಯಾಲಕಪ್ಪಕೇರಿ, ಬೇಡರಕೇರಿ, ಅಶೋಕರಸ್ತೆ, ಅನವೇರಪ್ಪ ಕೇರಿ, ರಾಮಣ್ಣಶ್ರೇಷ್ಠಿ ಪಾರ್ಕ್, ಎಸ್‌ಪಿಎಂ ರಸ್ತೆ, ಮೀನು ಮಾರುಕಟ್ಟೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಸಹಕರಿಸುವಂತೆ ಮೆಸ್ಕಾಂ ಸಂಸ್ಥೆ ಪ್ರಕಟಣೆಯಲ್ಲಿ ಮಾಹಿತಿ ನೀಡಿದೆ. 

SUMMARY | power cut in shivamogga 

KEY WORDS | power cut in shivamogga 

ಹಂಚಿಕೊಳ್ಳಿ
WhatsApp Facebook X Telegram
13
ಲೇಖಕರ ಬಗ್ಗೆ

13

Malenadu Today Contributor