SHIVAMOGGA | MALENADUTODAY NEWS | ಮಲೆನಾಡು ಟುಡೆ Jan 27, 2025
ಬೀದರ್ ಮಂಗಳೂರು ನಂತರ ಶಿವಮೊಗ್ಗದಲ್ಲಿ ಎಟಿಎಂ ನಲ್ಲಿ ಹಣ ಕಳ್ಳತನ ಮಾಡುವ ಪ್ರಯತ್ನವೊಂದು ನಿನ್ನೆದಿನ ರಾತ್ರಿ ನಡೆದಿತ್ತು. ಪ್ರಕರಣ ಬೆಳಕಿಗೆ ಬರುತ್ತಲೇ ಬಿಹಾರ ಮೂಲದ ಆರೋಪಿಯೊಬ್ಬನನ್ನು ಶಿವಮೊಗ್ಗ ಕೋಟೆ ಠಾಣೆ ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಈ ಕುರಿತಾಗಿ ಪೊಲೀಸ್ ಇಲಾಖೆ ಪ್ರಕಟಣೆಯನ್ನು ನೀಡಿದ್ದು ಆರೋಪಿ ಫೋಟೊವನ್ನು ಸಹ ರಿಲೀಸ್ ಮಾಡಿದೆ.
ಶಿವಮೊಗ್ಗ ನಗರದ ನೆಹರೂ ರೋಡ್
ಶಿವಮೊಗ್ಗ ಕೋಟೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಬರುವ ನೆಹರು ರಸ್ತೆಯಲ್ಲಿ ನಿನ್ನೆ ದಿನ ಕಲ್ಯಾಣ್ ಜ್ಯುವೆಲರಿ ಸಮೀಪದಲ್ಲಿರುವ ಕೆನರಾ ಬ್ಯಾಂಕ್ ATM ನಲ್ಲಿ ಕಳ್ಳತನಕ್ಕೆ ಯತ್ನಿಸಿದ್ದ . ಈ ಕುರಿತಾಗಿ ಕೆನರಾ ಬ್ಯಾಂಕ್ ನ ವ್ಯವಸ್ಥಾಪಕರು ದೂರು ನೀಡಿದ್ದರು. ಕೋಟೆ ಪೊಲೀಸ್ ಠಾಣೆ ಪೊಲೀಸರು ಕಲಂ 331(4) ಮತ್ತು 62 BNS ಕಾಯ್ದೆ ಅಡಿ ಕೇಸ್ ದಾಖಲಿಸಿದ್ದರು. ತನಿಖೆ ಆರಂಭಿಸಿದ ಕೆಲವೆ ಹೊತ್ತಿನಲ್ಲಿ ಪೊಲೀಸರು ಆರೋಪಿಯನ್ನು ಅರೆಸ್ಟ್ ಮಾಡಿದ್ದಾರೆ.

ಸ್ಪೆಷಲ್ ಟೀಂ ರಚನೆ
ಪೊಲೀಸ್ ಇಲಾಖೆ ಪ್ರಕರಣ ಸಂಬಂಧ ಆರೋಪಿ ಪತ್ತೆಗಾಗಿ ಕೋಟೆ ಪೊಲೀಸ್ ಠಾಣೆ ಪೊಲೀಸ್ ನಿರೀಕ್ಷಕರು ಹರೀಶ್ ಕೆ ಪಟೇಲ್ ಸಂತೋಷ್ ಭಾಗೋಜಿ, ಪಿಎಸ್ಐ, ಕೋಟೆ ಪೊಲೀಸ್ ಠಾಣೆ , ಹರ್ಷ ಎಎಸ್ಐ ಮತ್ತು ಸಿಬ್ಬಂಧಿಗಳಾದ ಸಿಪಿಸಿ ಕಿಶೋರ್, ಆಂಜಿನಪ್ಪ, ಕಾಂತರಾಜ್ ಮತ್ತು ಪ್ರಕಾಶ್ ಹಾಗೂ ಇಲಾಖಾ ವಾಹನದ ಚಾಲಕರಾದ ಸೋಮು ಎಪಿಸಿ ರವರುಗಳನ್ನೊಳಗೊಂಡ ತನಿಖಾ ತಂಡವನ್ನು ರಚಿಸಿತ್ತು. ಕ್ಷಿಪ್ರ ಕಾರ್ಯಾಚರಣೆ ಕೈಗೊಂಡ ಇಲಾಖೆ ಇದೀಗ ಆರೋಪಿಯನ್ನು ಪತ್ತೆ ಮಾಡಿ ಅರೆಸ್ಟ್ ಮಾಡಿದೆ. ಆರೋಪಿ ಹೆಸರು ಮಹಮ್ಮದ್ ವಸೀಂ ಬಿನ್ ಅಲೀ ಹಸನ್, 22 ವರ್ಷ, ಕಾಂಕ್ರೀಟ್ ಕೆಲಸ, ಜಲೈ ಗ್ರಾಮ, ಸಮಾನಿ ತಾಲ್ಲೂಕು ಸಾರಸ್ ಜಿಲ್ಲೆ, ಬಿಹಾರ ರಾಜ್ಯ.
ಸಿಸಿ ಕ್ಯಾಮರಾ ದೃಶ್ಯ
ಈ ನಡುವೆ ನಡೆದ ಘಟನೆಯ ದೃಶ್ಯ ಸಿಸಿ ಕ್ಯಾಮರಾದಲ್ಲಿ ಸೆರೆಯಾಗಿದೆ. ಅದರ ಕ್ಲಿಪ್ಪಿಂಗ್ಸ್ ಮಲೆನಾಡು ಟುಡೆಗೆ ಲಭ್ಯವಾಗಿದೆ. ನಿನ್ನೆ ದಿನ ರಾತ್ರಿ ಸುಮಾರು ಹತ್ತು ಮುಕ್ಕಾಲಿಗೆ ಎಟಿಎಂನೊಳಗೆ ಬರುವ ಬಿಹಾರಿ ವ್ಯಕ್ತಿ ಮೊದಲು ತಾನು ತಂದ ಟೂಲ್ಸ್‌ನಲ್ಲಿ ಎಟಿಎಂನ್ನ ಒಂದು ಭಾಗವನ್ನು ಬಿಡಿಸುತ್ತಾನೆ. ಅದನ್ನು ಬಿಚ್ಚಿದ ಬೆನ್ನಲ್ಲೆ ಹಣದ ಬಾಕ್ಸ್ ತೆಗೆಯಲು ಮುಂದಾಗಿದ್ದ. ಅಷ್ಟರಲ್ಲಿ ಅಲಾರಾಂ ಬಡಿದುಕೊಂಡಿದೆ..ಅದೆ ಹೊತ್ತಿಗೆ ಅದೆ ದಾರಿಯಲ್ಲಿ 112 ಪೊಲೀಸರು ಬಂದಿದ್ದಾರೆ. ಹೀಗಾಗಿ ಖದೀಮ ಕಳ್ಳ ಅಲ್ಲಿಂದ ಎಸ್ಕೇಪ್ ಆಗಿದ್ದಾನೆ..ಮಪ್ಲರ್ ರೀತಿಯ ಟೋಪಿ ಧರಿಸಿದ್ದ ಆರೋಪಿ ಹಣ ತುಂಬಿಕೊಳ್ಳಲು ದೊಡ್ಡ ಬ್ಯಾಗ್ ತಂದಿದ್ದ.
ತನಿಖೆ ಹೇಗಿತ್ತು?
ನಿನ್ನೆ ಕೃತ್ಯ ಬೆಳಕಿಗೆ ಬರುತ್ತಲೇ ಶಿವಮೊಗ್ಗ ಸಿಟಿಯ ಎಲ್ಲಾ ಪೊಲೀಸರು ಅಲರ್ಟ್ ಆಗಿದ್ದರು. ನೈಟ್ ರೌಂಡ್ಸ್ ನಲ್ಲಿದ್ದ ಪ್ರತಿ ಪೊಲೀಸ್ ವೆಹಿಕಲ್ ಹಾಗೂ ಸಿಬ್ಬಂದಿಗೆ ಸಿಸಿ ಕ್ಯಾಮರಾದಲ್ಲಿ ಇದ್ದ ದೃಶ್ಯಾವಳಿಗಳನ್ನು ರವಾನೆ ಮಾಡಲಾಗಿತ್ತು. ಮೇಲಾಗಿ ಆರೋಪಿ ಧರಿಸಿದ್ದ ಬಟ್ಟೆ, ಬ್ಗಾಗ್ ಹಾಗೂ ಟೋಪಿ ಇತ್ಯಾದಿಗಳ ಕುರುಹುಗಳನ್ನ ನೀಡಲಾಗಿತ್ತು. ಇದನ್ನು ಆಧರಿಸಿ ಶಿವಮೊಗ್ಗ ಕೋಟೆ ಪೊಲೀಸ್ ಠಾಣೆಯ ಟೀಂ ಅಷ್ಟೆ ಅಲ್ಲದೆ ಶಿವಮೊಗ್ಗ ನಗರದ ಎಲ್ಲಾ ಪೊಲೀಸ್ ಆಧಿಕಾರಿಗಳು ಕಾರ್ಯಾಚರಣೆ ಕೈಗೊಂಡಿದ್ದರು. ಮೇಲಾಗಿ ಹೊರಜಿಲ್ಲೆಯ ಪೊಲೀಸರಿಗೂ ಆರೋಪಿ ಸುಳಿವು ನೀಡಿ ಅಲರ್ಟ್ ಮಾಡಿತ್ತು ಪೊಲೀಸ್ ಇಲಾಖೆ. ರೈಲ್ವೆ ಸ್ಟೇಷನ್ ಹಾಗೂ ಬಸ್ ನಿಲ್ದಾಣ ಮತ್ತು ಊರಿನಿಂದ ಹೊರಹೋಗುವ ಸ್ಥಳಗಳಲ್ಲಿ ಪೊಲೀಸರು ಸರ್ಚಿಂಗ್‌ನಲ್ಲಿದ್ದರು. ಪೊಲೀಸರ ಈ ಹೈಅಲರ್ಟ್‌ನಿಂದಾಗಿ ಆರೋಪಿಯ ಸುಳಿವು ಪೊಲೀಸ್ ಟೀಂಗೆ ಪತ್ತೆಯಾಗಿದೆ. ತಕ್ಷಣವೇ ಸುಳಿವನ್ನು ಆಧರಿಸಿ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ. ಆರೋಪಿಯ ಬಂಧಿಸಿದ ಸ್ಥಳ ಹಾಗೂ ಆತನ ಹಿಸ್ಟರಿ ಇನ್ನಷ್ಟೆ ರಿವೀಲ್ ಆಗಬೇಕಿದೆ.
View this post on Instagram
SUMMARY | robbery Attempt at ATM on Nehru Road, shivamogga at night
KEY WORDS | robbery Attempt at ATM, ATM on Nehru Road, shivamogga