ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಇಂದು ಆಗಸ್ಟ್ 27, 2026, ಗುರುವಾರ, ಗುರುರಾಯರ ವಾರ, ಪರಾಭವ ನಾಮ ಸಂವತ್ಸರದ ಪಂಚಾಂಗದ ಪ್ರಕಾರ ದಕ್ಷಿಣಾಯನ, ವರ್ಷ ಋತು, ಶ್ರಾವಣ ಮಾಸದ ಶುಕ್ಲಪಕ್ಷ ನಡೆಯುತ್ತಿದೆ. ಇಂದು ಬೆಳಗ್ಗೆ 8.24ರವರೆಗೆ ಚತುರ್ದಶಿ ತಿಥಿ ಇರಲಿದ್ದು, ನಂತರ ಪೂರ್ಣಿಮೆ ತಿಥಿ ಆರಂಭವಾಗಲಿದೆ. ಧನಿಷ್ಠಾ ನಕ್ಷತ್ರ ಶುಕ್ರವಾರ ಬೆಳಗಿನ ಜಾವ 2.56ರವರೆಗೆ ಮುಂದುವರಿದು, ಬಳಿಕ ಶತಭಿಷ ನಕ್ಷತ್ರ ಆರಂಭವಾಗಲಿದೆ. ಇಂದು ಸೂರ್ಯೋದಯ ಬೆಳಗ್ಗೆ 6.15ಕ್ಕೆ ಹಾಗೂ ಸೂರ್ಯಾಸ್ತ ಸಂಜೆ 6.42ಕ್ಕೆ. ಯಮಗಂಡ ಬೆಳಗ್ಗೆ 6.15ರಿಂದ 7.48ರವರೆಗೆ, ಗುಳಿಕ ಕಾಲ ಬೆಳಗ್ಗೆ 9.22ರಿಂದ 10.55ರವರೆಗೆ ಹಾಗೂ ರಾಹುಕಾಲ ಮಧ್ಯಾಹ್ನ 2.02ರಿಂದ 3.35ರವರೆಗೆ ಇರಲಿದೆ.
ದಿನಭವಿಷ್ಯ
ಪಂಚಾಂಗ ಪ್ರಕಾರ, ನವಗ್ರಹಗಳು ಗೋಚಾರದಲ್ಲಿ ಕೊಡುವ ಶುಭಾಶುಭ ಫಲಗಳಿಗೆ ಅನುಗುಣವಾಗಿ ಕಾರ್ಯಸಿದ್ಧಿ, ಧನಲಾಭ, (Money Predictions) ಸ್ಥಾನಲಾಭ, ಸಂತೋಷ, ವ್ಯಯ, ಕಲಹ, ವಿಘ್ನ ಸೇರಿದಂತೆ ಸಾಮಾನ್ಯ ಫಲಗಳನ್ನು ಇಲ್ಲಿ ವಿವರಿಸಲಾಗಿದೆ. ವಿವರಿಸಲಾಗಿದೆ.
ಮೇಷ : ಮೇಷ ರಾಶಿಯವರಿಗೆ ಉದ್ಯೋಗದಲ್ಲಿ ಬಾಕಿ ಉಳಿದಿದ್ದ ಕೆಲಸವೊಂದನ್ನು ಮುಗಿಸಲು ಅವಕಾಶ ಸಿಗಬಹುದು. ಹಿರಿಯರಿಂದ ಸಹಕಾರ ದೊರೆಯುವ ಸಾಧ್ಯತೆ ಇದ್ದರೂ ಸಹೋದ್ಯೋಗಿಗಳೊಂದಿಗೆ ಮಾತಿನಲ್ಲಿ ಎಚ್ಚರಿಕೆ ಇರಲಿ. ವ್ಯಾಪಾರದಲ್ಲಿ ಹೊಸ ಗ್ರಾಹಕರು ಅಥವಾ ಸಂಪರ್ಕಗಳು ಸಿಗಬಹುದು. ದೊಡ್ಡ ಮೊತ್ತದ ಹೂಡಿಕೆಯನ್ನು ತಕ್ಷಣ ಮಾಡುವ ಬದಲು ಪರಿಶೀಲಿಸಿ ಮುಂದುವರಿಯುವುದು ಉತ್ತಮ.
ವೃಷಭ : ವೃಷಭ ರಾಶಿಯವರಿಗೆ ಉದ್ಯೋಗದಲ್ಲಿ ಕೆಲಸದ ಒತ್ತಡ ಹೆಚ್ಚಾಗಬಹುದು. ಜವಾಬ್ದಾರಿ ಬದಲಾವಣೆ ಅಥವಾ ಹೆಚ್ಚುವರಿ ಕೆಲಸ ಎದುರಾಗುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹಳೆಯ ಬಾಕಿ ವಿಚಾರದಲ್ಲಿ ಮಾತುಕತೆ ನಡೆಯಬಹುದು. ಹೊಸ ಸಾಲ ಅಥವಾ ದೊಡ್ಡ ಖರೀದಿಯಲ್ಲಿ ಎಚ್ಚರಿಕೆ ವಹಿಸುವುದು ಉತ್ತಮ. ಹಣ ಬಂದರೂ ಅನಿರೀಕ್ಷಿತ ವೆಚ್ಚ ಎದುರಾಗಬಹುದು. ಆರೋಗ್ಯದಲ್ಲಿ ಆಯಾಸವನ್ನು ನಿರ್ಲಕ್ಷಿಸಬೇಡಿ.
ಮಿಥುನ : ಮಿಥುನ ರಾಶಿಯವರಿಗೆ ಕೆಲಸದಲ್ಲಿ ತಮ್ಮ ಸಾಮರ್ಥ್ಯ ತೋರಿಸಲು ಉತ್ತಮ ಅವಕಾಶ ಸಿಗಬಹುದು. ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿ ನಿಮ್ಮ ಪ್ರಯತ್ನಕ್ಕೆ ಬೆಂಬಲ ದೊರೆಯುವ ಸಾಧ್ಯತೆ ಇದೆ. ವ್ಯಾಪಾರದಲ್ಲಿ ಹಳೆಯ ಸಂಪರ್ಕಗಳಿಂದ ಪ್ರಯೋಜನವಾಗಬಹುದು. ಹಣಕಾಸಿನಲ್ಲಿ ಸ್ಥಿತಿ ಸುಧಾರಿಸಬಹುದು, ಆದರೆ ಅನಗತ್ಯ ಖರ್ಚನ್ನು ನಿಯಂತ್ರಿಸುವುದು ಮುಖ್ಯ.
ಕರ್ಕಾಟಕ : ಕರ್ಕಾಟಕ ರಾಶಿಯವರಿಗೆ ಉದ್ಯೋಗದಲ್ಲಿ ದಿನ ಸಾಮಾನ್ಯವಾಗಿರಬಹುದು. ಬಾಕಿ ಕೆಲಸ ಕ್ರಮವಾಗಿ ಮುಗಿಸುವುದರಿಂದ ಒತ್ತಡ ಕಡಿಮೆಯಾಗಬಹುದು. ವ್ಯಾಪಾರದಲ್ಲಿ ಹಣ ವಸೂಲಿಗೆ ಸ್ವಲ್ಪ ವಿಳಂಬ ಎದುರಾಗುವ ಸಾಧ್ಯತೆ ಇದೆ. ದೊಡ್ಡ ಮೊತ್ತವನ್ನು ಸಾಲವಾಗಿ ನೀಡುವುದು ಅಥವಾ ಅಪಾಯದ ಹೂಡಿಕೆ ಮಾಡುವುದನ್ನು ತಪ್ಪಿಸುವುದು ಉತ್ತಮ.
ಸಿಂಹ : ಸಿಂಹ ರಾಶಿಯವರಿಗೆ ಉದ್ಯೋಗದಲ್ಲಿ ಎದುರಾಗುತ್ತಿದ್ದ ಕೆಲವು ಅಡೆತಡೆ ಕಡಿಮೆಯಾಗಬಹುದು. ನಿಮ್ಮ ಕೆಲಸಕ್ಕೆ ಮೆಚ್ಚುಗೆ ಸಿಗುವ ಸಾಧ್ಯತೆಯೂ ಇದೆ. ವ್ಯಾಪಾರದಲ್ಲಿ ಹಳೆಯ ಗ್ರಾಹಕರಿಂದ ಅಥವಾ ಹಿಂದಿನ ವ್ಯವಹಾರಗಳಿಂದ ಲಾಭ ಸಿಗಬಹುದು. ಆದಾಯದ ಅವಕಾಶವಿದ್ದರೂ ಹಣ ಉಳಿಸಿಕೊಳ್ಳುವುದು ಮುಖ್ಯ.
ಕನ್ಯಾ : ಕನ್ಯಾ ರಾಶಿಯವರಿಗೆ ಕೆಲಸಕ್ಕೆ ಸಂಬಂಧಿಸಿದ ಹೊಸ ಜವಾಬ್ದಾರಿ ಅಥವಾ ಬದಲಾವಣೆಯ ಮಾತುಕತೆ ನಡೆಯಬಹುದು. ನಿರೀಕ್ಷಿಸಿದ್ದ ಫಲ ಸ್ವಲ್ಪ ವಿಳಂಬವಾದರೂ ಕೆಲಸ ಮುಂದುವರಿಯಲಿದೆ. ವ್ಯಾಪಾರದಲ್ಲಿ ದೊಡ್ಡ ವಿಸ್ತರಣೆಗೆ ಬದಲು ಈಗಿರುವ ವ್ಯವಹಾರವನ್ನು ಬಲಪಡಿಸುವುದು ಉತ್ತಮ. ಹಣಕಾಸಿನಲ್ಲಿ ನಿಯಂತ್ರಣ ಇರಲಿ
ತುಲಾ : ತುಲಾ ರಾಶಿಯವರಿಗೆ ಉದ್ಯೋಗದಲ್ಲಿ ಉತ್ತಮ ಹೆಸರು ಸಿಗುವ ಸಾಧ್ಯತೆ ಇದೆ. ನಿಮ್ಮ ಕೆಲಸವನ್ನು ಹಿರಿಯರು ಗಮನಿಸಬಹುದು. ವ್ಯಾಪಾರದಲ್ಲಿ ಹೊಸ ಅವಕಾಶ ಅಥವಾ ಹಳೆಯ ಸಮಸ್ಯೆಗೆ ಪರಿಹಾರ ಸಿಗಬಹುದು. ಹಣಕಾಸಿನ ದೃಷ್ಟಿಯಿಂದ ದಿನ ಅನುಕೂಲಕರವಾಗಿದ್ದರೂ ಯೋಚಿಸದೆ ಹೂಡಿಕೆ ಮಾಡಬೇಡಿ.
ವೃಶ್ಚಿಕ : ವೃಶ್ಚಿಕ ರಾಶಿಯವರಿಗೆ ಉದ್ಯೋಗದಲ್ಲಿ ಪ್ರಮುಖ ಕೆಲಸವೊಂದು ಪೂರ್ಣಗೊಳ್ಳುವ ಸಾಧ್ಯತೆ ಇದೆ. ಸಭೆ ಅಥವಾ ಮಾತುಕತೆಯಲ್ಲಿ ನಿಮ್ಮ ಅಭಿಪ್ರಾಯಕ್ಕೆ ಬೆಂಬಲ ಸಿಗಬಹುದು. ವ್ಯಾಪಾರದಲ್ಲಿ ಹೊಸ ಗ್ರಾಹಕರು ಅಥವಾ ವ್ಯವಹಾರ ವಿಸ್ತರಣೆಯ ಅವಕಾಶ ಎದುರಾಗಬಹುದು. ಹಣಕಾಸಿನ ಸ್ಥಿತಿ ಉತ್ತಮವಾಗುವ ಸೂಚನೆ ಇದೆ. ಆದರೆ ಆರೋಗ್ಯದ ಕಡೆ ನಿರ್ಲಕ್ಷ್ಯ ಮಾಡಬೇಡಿ.
ಧನು : ಧನು ರಾಶಿಯವರಿಗೆ ಉದ್ಯೋಗದಲ್ಲಿ ಕೆಲಸದ ಒತ್ತಡ ಅಥವಾ ವಿಳಂಬ ಎದುರಾಗಬಹುದು. ಸಹೋದ್ಯೋಗಿಗಳೊಂದಿಗೆ ಭಿನ್ನಾಭಿಪ್ರಾಯ ಉಂಟಾಗದಂತೆ ನೋಡಿಕೊಳ್ಳುವುದು ಉತ್ತಮ. ವ್ಯಾಪಾರದಲ್ಲಿ ಹೊಸ ಒಪ್ಪಂದ ಅಥವಾ ದೊಡ್ಡ ಹೂಡಿಕೆಯನ್ನು ಇಂದು ಆತುರದಲ್ಲಿ ಮಾಡಬೇಡಿ. ಹಣಕಾಸಿನಲ್ಲಿ ಖರ್ಚು ಹೆಚ್ಚಾಗಬಹುದು.
ಮಕರ : ಮಕರ ರಾಶಿಯವರಿಗೆ ಉದ್ಯೋಗದಲ್ಲಿ ಮುನ್ನಡೆ ಕಾಣುವ ಸಾಧ್ಯತೆ ಇದೆ. ಸ್ಪರ್ಧಾತ್ಮಕ ಪರಿಸ್ಥಿತಿಯಲ್ಲಿಯೂ ತಮ್ಮ ಕೆಲಸವನ್ನು ಸಮರ್ಥವಾಗಿ ನಿರ್ವಹಿಸಬಹುದು. ವ್ಯಾಪಾರದಲ್ಲಿ ಬಾಕಿ ಹಣ ವಸೂಲಿಯಾಗುವ ಅಥವಾ ಹಳೆಯ ವ್ಯವಹಾರದಿಂದ ಪ್ರಯೋಜನ ಸಿಗುವ ಸೂಚನೆ ಇದೆ. ಧನ ಲಾಭದ ಅವಕಾಶ ಇದ್ದರೂ ಕುಟುಂಬ ಅಥವಾ ಇತರ ಕಾರಣಗಳಿಂದ ಖರ್ಚು ಎದುರಾಗಬಹುದು.
ಕುಂಭ : ಕುಂಭ ರಾಶಿಯವರಿಗೆ ಉದ್ಯೋಗದಲ್ಲಿ ಹೆಚ್ಚುವರಿ ಜವಾಬ್ದಾರಿ ಅಥವಾ ಪ್ರಯಾಣ ಎದುರಾಗಬಹುದು. ಕೆಲಸದಲ್ಲಿ ತಕ್ಷಣ ಫಲ ಸಿಗದಿದ್ದರೂ ತಾಳ್ಮೆಯಿಂದ ಮುಂದುವರಿದರೆ ಅನುಕೂಲವಾಗಬಹುದು. ವ್ಯಾಪಾರದಲ್ಲಿ ಹೊಸ ಪ್ರಯೋಗಕ್ಕಿಂತ ಈಗಿರುವ ವ್ಯವಸ್ಥೆಯನ್ನು ಸರಿಪಡಿಸುವುದು ಉತ್ತಮ.
ಮೀನ : ಮೀನ ರಾಶಿಯವರಿಗೆ ಉದ್ಯೋಗದಲ್ಲಿ ತಮ್ಮ ಪ್ರಯತ್ನಕ್ಕೆ ಉತ್ತಮ ಪ್ರತಿಕ್ರಿಯೆ ಸಿಗಬಹುದು. ಮಾತುಕತೆ, ಸಭೆ ಅಥವಾ ಸಂದರ್ಶನದಲ್ಲಿ ಅನುಕೂಲಕರ ವಾತಾವರಣ ನಿರ್ಮಾಣವಾಗಬಹುದು. ವ್ಯಾಪಾರದಲ್ಲಿ ಗ್ರಾಹಕರ ಸಂಪರ್ಕ ಉತ್ತಮವಾಗಬಹುದು. ಹಣಕಾಸಿನ ಸ್ಥಿತಿ ಸಾಮಾನ್ಯವಾಗಿ ಸಮತೋಲನದಲ್ಲಿರಬಹುದು.
ಸೂಚನೆ : ಜ್ಯೋತಿಷ್ಯದಲ್ಲಿ ನೀಡಲಾಗುವ ದಿನಭವಿಷ್ಯವು ಪಂಚಾಂಗದ ಗೋಚಾರ ಫಲಗಳನ್ನು ಆಧರಿಸಿದ ಸಾಮಾನ್ಯ ಸೂಚನೆಯಾಗಿದೆ. ವೈಯಕ್ತಿಕ ಜನ್ಮಜಾತಕ, ದಶಾ ಮತ್ತು ಗ್ರಹಸ್ಥಿತಿಗೆ ಅನುಗುಣವಾಗಿ ಫಲಗಳಲ್ಲಿ ವ್ಯತ್ಯಾಸ ಇರಬಹುದು ಮತ್ತು ಇದು ಅವರ ನಂಬಿಕೆಯ ಅವಲಂಬಿತ ವಿಚಾರವಾಗಿದೆ
