SHIVAMOGGA | MALENADUTODAY NEWS | ಮಲೆನಾಡು ಟುಡೆ | Mar 22, 2025

ಲಕ್ಷಾಂತರ ಮೌಲ್ಯದ ಚಿನ್ನಾಭರಣ ಹಾಗೂ ನಗದನ್ನು ಕದ್ದು ಪರಾರಿಯಾಗಿದ್ದ ಕಳ್ಳನನ್ನು ಶಿವಮೊಗ್ಗ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿ ಮಾಲು ಸಮೇತ ಹಿಡಿದಿದ್ದಾರೆ.
ಹೊಸನಗರ ತಾಲೂಕಿನ ದೊಡ್ಡಮನೆ ಮತ್ತಿಕೈ ಎಂಬ ಊರಿನ ಪರಮೇಶ್ವರ್ ಎಂಬುವವರು ಇದೇ ಮಾರ್ಚ್ 03 ರಂದು ಸಂಬಂಧಿಕರ ಮನೆಯಲ್ಲಿ ಉಪನಾಯನ ಕಾರ್ಯಕ್ರಮದ ಹಿನ್ನಲೆ ತೆರಳಿದ್ದರು. ನಂತರ ಕಾರ್ಯಕ್ರಮ ಮುಗಿಸಿ ಮನೆಗೆ ಹಿಂದಿರುಗುವಾಗ ಮಾಲೀಕರಿಗೆ ದೊಡ್ಡ ಆಘಾತ ಎದುರಾಗಿತ್ತು. ಪರೆಮೇಶ್ವರ್ರವರ ಮನೆಯಲ್ಲಿ ಬಾಗಿಲನ್ನು ತೆರೆದು ಕಪಾಟಿನಲ್ಲಿದ್ದ 12 ಗ್ರಾಂ ತೂಕದ ಚಿನ್ನದ ಸರ ಹಾಗೂ 15 ಸಾವಿರ ನಗದನ್ನು ಕಳ್ಳರು ಕದ್ದು ಪರಾರಿಯಾಗಿದ್ದರು. ಈ ಹಿನ್ನಲೆ ಪರಮೇಶ್ವರ್ರವರು ನಗರ ಪೊಲೀಸ್ ಠಾಣೆಗೆ ದೂರನ್ನು ನೀಡಿದ್ದರು. ಈ ಹಿನ್ನಲೆ ಪ್ರಕರಣ ದಾಖಲಿಸಿಕೊಂಡ ಪೊಲೀಸರು ತಂಡ ರಚಿಸಿ ಕಳ್ಳನನ್ನು ಪತ್ತೆ ಮಾಡಿದ್ದಾರೆ.

ಪ್ರಕರಣದ ಆರೋಪಿ 26 ವರ್ಷದ ಕೆ.ಆರ್ ಶರತ್ ಎಂಬಾತನನ್ನು ದಸ್ತಗಿರಿ ಮಾಡಿದ್ದು, ಅಂದಾಜು ಮೌಲ್ಯ 1 ಲಕ್ಷ ರೂಪಾಯಿ ಮೌಲ್ಯದ 12 ಗ್ರಾಂ ತೂಕದ ಬಂಗಾರದ ಸರ ಹಾಗೂ ಕೃತ್ಯಕ್ಕೆ ಬಳಸಿದ ಮೋಟರ್ ಸೈಕಲ್ನ್ನು ವಶಪಡಿಸಿಕೊಂಡಿದ್ದಾರೆ.
SUMMARY | Shivamogga police have arrested a thief who had stolen gold ornaments and cash worth lakhs of rupees.
KEYWORDS | Shivamogga police, stolen gold, thief,