ರೈತರಿಗೆ ಗುಂಡು ಹೊಡೆದಿದ್ದಕ್ಕೆ ಸನ್ಮಾನನಾ? ಮಧು ಬಂಗಾರಪ್ಪ ಗರಂ | Madhu Bangarappa on BSY

ರೈತರಿಗೆ ಗುಂಡು ಹೊಡೆದಿದ್ದಕ್ಕೆ ಸನ್ಮಾನನಾ? ಮಧು ಬಂಗಾರಪ್ಪ ಗರಂ | Madhu Bangarappa on BSY

ಮಲೆನಾಡು ಟುಡೆ ಸುದ್ದಿ / ಶಿವಮೊಗ್ಗ / ಮಾಜಿ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ 50 ವರ್ಷಗಳ ರಾಜಕೀಯ ಸಾರ್ಥಕ ಸೇವೆಗಾಗಿ ‘ಅಭಿಮಾನೋತ್ಸವ’ ಮಾಡುತ್ತಿರುವುದನ್ನು ಕಟುವಾಗಿ ಟೀಕಿಸಿರುವ ಸಚಿವ ಮಧು ಬಂಗಾರಪ್ಪ, ಹಾವೇರಿಯಲ್ಲಿ ರಸಗೊಬ್ಬರ ಕೇಳಿದ ರೈತರ ಮೇಲೆ ಗುಂಡಿಟ್ಟು ಹೊಡೆದಿದ್ದಕ್ಕಾಗಿ ಅವರಿಗೆ ಸನ್ಮಾನ ಮಾಡಬೇಕೇ ಎಂದು ಖಾರವಾಗಿ ಪ್ರಶ್ನಿಸಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅವರು ರೈತಪರ ಹೋರಾಟ ಮಾಡಿದ್ದಾರೆ ಎಂಬುದನ್ನು ನಾನು ಅಲ್ಲಗಳೆಯುವುದಿಲ್ಲ. ಆದರೆ, ಬೇರೆ ನಾಯಕರಿಗೆ ಹೋಲಿಸಿದರೆ ಅವರ ಹೋರಾಟ ಲೆಕ್ಕಕ್ಕೇ ಇರುವುದಿಲ್ಲ. ಅಧಿಕಾರದಲ್ಲಿದ್ದಾಗ ಹಾವೇರಿಯಲ್ಲಿ ಗೊಬ್ಬರ ಕೇಳಿದ ರೈತರಿಗೆ ಗುಂಡೇಟು ನೀಡಲಾಗಿತ್ತು, ಅದಕ್ಕಾಗಿ ಈಗ ಸನ್ಮಾನ ಮಾಡುತ್ತಿದ್ದೀರಾ? ಯಾರು ಸಹಿ ಮಾಡಿ ಇವರನ್ನು ಜೈಲಿಗೆ ಕಳುಹಿಸಿದ್ದರೋ, ಅವರನ್ನೇ ರಾಜ್ಯದಲ್ಲಿ ಮುಂದುವರೆಸಲು ಕೆಲವರು ಶ್ರಮಿಸುತ್ತಿದ್ದಾರೆ ಎಂದು ಕಿಡಿಕಾರಿದರು.

ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಯಡಿಯೂರಪ್ಪ ಅವರು ಎಂದಾದರೂ ಸ್ವಂತ ಬಲದ ಮೇಲೆ 113 ಶಾಸಕರನ್ನು ಗೆಲ್ಲಿಸಿಕೊಂಡು ಅಧಿಕಾರ ಹಿಡಿದಿದ್ದಾರಾ? ಮೊದಲ ಚುನಾವಣೆಯಲ್ಲಿ ಅಧಿಕಾರ ಹಿಡಿದಿದ್ದು ಹೇಗೆ ಎಂಬುದು ಎಲ್ಲರಿಗೂ ತಿಳಿದಿದೆ. ಕೇವಲ ಕೋಟ್ಯಂತರ ರೂಪಾಯಿ ಖರ್ಚು ಮಾಡಿ ಕಾರ್ಯಕ್ರಮಗಳನ್ನು ಮಾಡಿದರೆ ಸಾಲದು. ಕಾಗೋಡು ತಿಮ್ಮಪ್ಪ, ಗೋಪಾಲಗೌಡರು, ನಮ್ಮ ತಂದೆ ಬಂಗಾರಪ್ಪನವರಂತಹ ನಾಯಕರು ಮಾಡಿರುವ ನೈಜ ಹೋರಾಟಗಳನ್ನು ಜನರು ಇಂದಿಗೂ ಸ್ಮರಿಸುತ್ತಾರೆ. ಆದರೆ ಇವರ ಹೋರಾಟ ಕೇವಲ ಅಧಿಕಾರಕ್ಕಾಗಿ ಮಾತ್ರ ಸೀಮಿತವಾಗಿದೆ ಎಂದು ವಾಗ್ದಾಳಿ ನಡೆಸಿದರು.

Madhu Bangarappa on Yediyurappa, Haveri farmer firing, Karnataka CM history, Shivamogga Congress, BSY Abhimanotsava controversy, Kannada news updates#MadhuBangarappa #BSY #BSYediyurappa #Haveri #FarmersProtest #KarnatakaNews #ShivamoggaNews #KannadaUpdates